ಬೆಂಗ್ಳೂರಲ್ಲಿ 'ಸುಗಮ ಸವಾರಿ' ಆಟೋರಿಕ್ಷಾ ಯೋಜನೆ ಜಾರಿಗೆ

By Nagaraja

ಪ್ರಯಾಣಿಕರು ಮತ್ತು ಆಟೋ ಚಾಲಕರ ನಡುವೆ ಪರಸ್ಪರ ವಿಶ್ವಾಸವನ್ನು ವೃದ್ಧಿಸಿ ನಗರದಲ್ಲಿ ಆಟೋರಿಕ್ಷಾ ಸಂಚಾರ ವ್ಯವಸ್ಥೆಯನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ನಗರ ಸಂಚಾರ ಪೊಲೀಸರು ಇಂದು ಸುಗಮ-ಸವಾರಿ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಯೋಜನೆಯು ಬೆಂಗಳೂರು ಸಂಚಾರ ಪೊಲೀಸ್ ಪಾದಚಾರಿಗಳಿಗೆ ಹಾಗೂ ವಾಹನ ಚಾಲಕರಿಗೆ ಅನುಕೂಲವಾಗುವಂತೆ ನಗರದ ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಹಮ್ಮಿಕೊಂಡಿರುವ 'ಸುಗಮ' ಆಂದೋಲನದ ಒಂದು ಭಾಗವಾಗಿರುತ್ತದೆ.

ಆಟೋ ರಿಕ್ಷಾ ಚಾಲಕರು ನಿಂದಿಸಿದರೆ ಎಸ್ಎಂಎಸ್ ಮಾಡಿ

ಈ ಮಹತ್ತರ ಯೋಜನೆಯನ್ನು ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್ ಉದ್ಘಾಟಿಸಿದರು. ಪ್ರಾಯೋಗಿಕವಾಗಿ ಚಾಲನೆಗೊಂಡ ಸುಗಮ ಸವಾರಿ ಕಾರ್ಯಕ್ರಮವು ಮೊದಲನೆಯದಾಗಿ ಸಂಚಾರ ಪೊಲೀಸ್ ಮತ್ತು ಆಟೋರಿಕ್ಷಾ ಯೂನಿಯನ್‌ಗಳ ನಡುವೆಯು ಸಹಕಾರ ಹೆಚ್ಚಿಸುವ ಉದ್ದೇಶ ಹಾಗೂ ಎರಡನೇಯದಾಗಿ ಪ್ರಯಾಣಿಕರು ಮತ್ತು ಚಾಲಕರ ನಡುವೆ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶವಾಗಿರುತ್ತದೆ.

ಬೆಂಗ್ಳೂರಲ್ಲಿ 'ಸುಗಮ ಸವಾರಿ' ಆಟೋರಿಕ್ಷಾ ಯೋಜನೆ ಜಾರಿಗೆ

ನಂತರದ ಬೆಳವಣಿಗೆಯಲ್ಲಿ ಜಿ.ಪಿ.ಎಸ್./ಆರ್.ಎಫ್.ಐ.ಡಿ ಯಂತಹ ತಂತ್ರಜ್ಞಾನವನ್ನು ಹಂತಹಂತವಾಗಿ ಆಳವಡಿಸಿ 'ಸ್ಮಾರ್ಟ್ ಆಟೋ' ವಾಹನಗಳನ್ನು ನಗರ ಸಂಚಾರದಲ್ಲಿ ಬಳಸಬೇಕು ಎಂಬುದು ಈ ಯೋಜನೆಯ ಉದ್ದೇಶ.

ಬೆಂಗ್ಳೂರಲ್ಲಿ 'ಸುಗಮ ಸವಾರಿ' ಆಟೋರಿಕ್ಷಾ ಯೋಜನೆ ಜಾರಿಗೆ

ನಗರದ ವಾಹನ ಸಂಖ್ಯೆಯಲ್ಲಿ ಪ್ರತಿಶತ ಮೂರರಷ್ಟೇ ಇದ್ದರೂ, ಆಟೋರಿಕ್ಷಾಗಳು ಪ್ರತಿಶತ 30ರಷ್ಟು ಪ್ರಯಾಣಿಕರಿಗೆ ಪ್ರತಿದಿನ ಸೇವೆ ಒದಗಿಸುತ್ತದೆ ಎಂಬುದು ಗಮನಾರ್ಹ ಅಂಶವಾಗಿದೆ. ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿರುತ್ತದೆ.

ಬೆಂಗ್ಳೂರಲ್ಲಿ 'ಸುಗಮ ಸವಾರಿ' ಆಟೋರಿಕ್ಷಾ ಯೋಜನೆ ಜಾರಿಗೆ

ನಗರದಲ್ಲಿ ಸುಮಾರು ಒಂದು ಲಕ್ಷಕ್ಕೂ ಮೇಲ್ಪಟ್ಟು ಆಟೋರಿಕ್ಷಾಗಳಇದ್ದು, ಈ ಪೈಕಿ ಮೂರನೇ ಒಂದು ಭಾಗದಷ್ಟು ನೋಂದಾಯಿತವಾಗಿಲ್ಲ ಎಂಬುದು ಅಂದಾಜಿಸಲಾಗಿದೆ. ಪ್ರತಿ ಆಟೋ ರಿಕ್ಷಾ ದಿನಕ್ಕೆ ಸರಾಸರಿ 15 ಟ್ರಿಪ್‌ಗಳನ್ನು ಮಾಡುತ್ತಿದೆ. ನಗರವು 1000 ಜನಸಂಖ್ಯೆಗೆ 500 ವಾಹನಗಳ ಅನುಪಾತದಂತೆ ವಾಹನಗಳನ್ನು ಹೊಂದಿದ್ದು, ರಸ್ತೆಗಳ ವಾಹನ ಸಾಮರ್ಥ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ವಾಹನಗಳಿರುವ ಈ ನಗರದಲ್ಲಿ ಈ ಯೋಜನೆಯು ಕಿರಿದಾದ ರಸ್ತೆಗಳಲ್ಲಿ ಸಂಚರಿಸುವ ಖಾಸಗಿ ವಾಹನಗಳನ್ನು ಹತೋಟಿಗೆ ತರಲು ಒಂದು ಮಹತ್ವದ ದಾರಿಯಾಗಿರುತ್ತದೆ.

ಬೆಂಗ್ಳೂರಲ್ಲಿ 'ಸುಗಮ ಸವಾರಿ' ಆಟೋರಿಕ್ಷಾ ಯೋಜನೆ ಜಾರಿಗೆ

ಮೊದಲನೇ ಹಂತದಲ್ಲಿ ಈ ಆಂದೋಲನದ ಪ್ರಮುಖ ಉದ್ದೇಶ, ಸಾರ್ವಜನಿಕರು ಅವರ ಪ್ರಯಾಣದ ಅನುಭವ, ಆಟೋ ಚಾಲಕರ ವರ್ತನೆ ಬಗ್ಗೆ ಪ್ರತಿಕ್ರಿಯಿಸಲು ಅನುಕೂಲವಾಗುವಂತಹ 'ಹ್ಯಾಪಿ ಆಟೋ' ಎಂಬ ಮೊಬೈಲ್ ಅಪ್ಲಿಕೇಷನ್ ಅನ್ನು ಬಳಸಲಾಗುವುದು.

ಬೆಂಗ್ಳೂರಲ್ಲಿ 'ಸುಗಮ ಸವಾರಿ' ಆಟೋರಿಕ್ಷಾ ಯೋಜನೆ ಜಾರಿಗೆ

ಈ ಸಂಬಂಧ ಸಾರ್ವಜನಿಕರಿಂದ ಬರುವ ಸಲಹೆ ಹಾಗೂ ದೂರುಗಳನ್ನು ಸ್ವೀಕರಿಸಲು ಒಂದು ಪ್ರತಿಕ್ರಿಯೆ ಕೇಂದ್ರವನ್ನು ತೆರೆಯಲು ಆಟೋ ಚಾಲಕರ ಸಂಘಗಳು ಒಪ್ಪಿರುತ್ತವೆ.

ಬೆಂಗ್ಳೂರಲ್ಲಿ 'ಸುಗಮ ಸವಾರಿ' ಆಟೋರಿಕ್ಷಾ ಯೋಜನೆ ಜಾರಿಗೆ

ಈ ಮೊಬೈಲ್ app (ಹ್ಯಾಪಿ ಆಟೋ) ಅನ್ನು ಗೂಗಲ್ ಪ್ಲೇನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಪ್ರಯಾಣಿಕರಿಂದ ಸ್ವೀಕರಿಸಲಾಗುವ ಪ್ರತಿಕ್ರಿಯೆಗಳ ತುಲನೆ ಆಧಾರದ ಮೇಲೆ ಒಳ್ಳೆಯ ಮತ್ತು ಸುರಕ್ಷಿತ ಚಾಲಕರನ್ನು ಗುರುತಿಸಿ ಅವರ ಆಟೋ ರಿಕ್ಷಾಗಳಿಗೆ 'ಸುಗಮ ಸವಾರಿ' ಎಂಬ ಹೆಸರಿನ ಸ್ಟಿಕ್ಕರುಗಳನ್ನು ಲೇಪಿಸಲಾಗುವುದು. ಇದರಿಂದ ಪ್ರಯಾಣಿಕರು ಆದ್ಯತೆಯ ಮೇರೆಗೆ ಈ ಆಟೋಗಳ್ನು ಅವರ ಸುರಕ್ಷಿತ ಪ್ರಯಾಣಕ್ಕೆ ಆಯ್ದುಕೊಳ್ಳಲು ಅನುಕೂಲವಾಗುವುದು.

ಬೆಂಗ್ಳೂರಲ್ಲಿ 'ಸುಗಮ ಸವಾರಿ' ಆಟೋರಿಕ್ಷಾ ಯೋಜನೆ ಜಾರಿಗೆ

ಈ ಆಂದೋಲನದ ಸಮಯದಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಆಟೋ ರಿಕ್ಷಾ ಚಾಲಕರ ಸಂಘಗಳ ಮತ್ತು ಆಟೋ ಚಾಲಕರುಗಳಇಗೆ ಆಟೋ ಚಾಲಕರ ವಿರುದ್ಧ ಕೇಳಿಬರುತ್ತಿರುವ ಎರಡು ಪ್ರಮುಖ ದೂರುಗಳಾದ ಕರೆದೆಡೆ ಬಾರದಿರುವ ಮತ್ತು ದುಬಾರಿ ಬಾಡಿಗೆಗೆ ಒತ್ತಾಯಗಳ ಬಗ್ಗೆ ಅವರಲ್ಲೇ ಅರಿವು ಮೂಡಿಸುವ ಉದ್ದೇಶ ಹೊಂದಿರುತ್ತದೆ.

ಬೆಂಗ್ಳೂರಲ್ಲಿ 'ಸುಗಮ ಸವಾರಿ' ಆಟೋರಿಕ್ಷಾ ಯೋಜನೆ ಜಾರಿಗೆ

ಇದಲ್ಲದೆ ಆಟೋ ಚಾಲಕರಿಗೆ ವಿಶೇಷ ತರಬೇತಿ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರ ಮೂಲಕ ಅವರಲ್ಲಿ ಮೃದು ಧೋರಣೆ ಬೆಳೆಸಿಕೊಳ್ಳುವಂತೆ ನೋಡಿಕೊಳ್ಳುವ ಉದ್ದೇಶವನ್ನು ಸಹ ನಗರ ಸಂಚಾರ ಪೊಲೀಸರು ಹೊಂದಿರುತ್ತಾರೆ.

ಬೆಂಗ್ಳೂರಲ್ಲಿ 'ಸುಗಮ ಸವಾರಿ' ಆಟೋರಿಕ್ಷಾ ಯೋಜನೆ ಜಾರಿಗೆ

ಬೆಂಗಳೂರು ಸಂಚಾರ ಪೊಲೀಸರು ಸಾರಿಗೆ ಇಲಾಖೆಯ ಸಹಭಾಗಿತ್ವದೊಂಗಿದೆ ಆಟೋ ಚಾಲಕರ ಬಾಕಿ ಇರುವ ಸಮಸ್ಯೆಗಳಾದ ಪರವಾನಿಗೆ ಇಲ್ಲದ ಆಟೋಗಳಿಗೆ ಕಡಿವಾಣ ಹಾಕುವುದು, ನಗರದಲ್ಲಿ ಆಟೋ ನಿಲ್ದಾಣಗಳನ್ನು ಸರಳೀಕರಿಸುವುದು, ಪೂರ್ವ ಪಾವತಿ/ಪೂರ್ವ ನಿಗಧಿ ಆಟೋ ನಿಲ್ದಾಣಗಳ ಸಾಧಕ ಬಾಧಕಗಳ ಬಗ್ಗೆ ಮರು ಪರಿಶೀಲನೆ ನಡೆಸುವುದು ಮುಂತಾದವುಗಳನ್ನು ಮಾಡಲಾಗುವುದು.

Article Published On: Wednesday, December 18, 2013, 17:10 [IST]
English summary
The Bangalore Traffic Police (BTP) has launched a programme to ensure easier and safer commute for passengers using three-wheeler auto rickshaws in the city "Named Sugama - Saavari".
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+