ವಾಹನಗಳ ಸಮಾಜವಾಗಿ ಮಾರ್ಪಡುಗೊಳ್ಳುತ್ತಿರುವ ಚೀನಾ
ಜಗತ್ತಿನ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಚೀನಾ, ಸದೃಢ ಆರ್ಥಿಕ ಪರಿಸ್ಥಿತಿಯನ್ನು ಹೊಂದಿರುವುದು ಮಾತ್ರವಲ್ಲದೆ ವಾಹನ ಹಾಗೂ ಚಾಲಕರ ಸಂಖ್ಯೆಗಳಲ್ಲೂ ಶಿಪ್ರಗತಿಯ ಪ್ರಗತಿಯನ್ನು ಸಾಧಿಸುತ್ತಿದೆ.
ಚೀನಾ ಸಾರ್ವಜನಿಕ ಭದ್ರತಾ ಸಹ ಸಚಿವ ಹುವಾಂಗ್ ಮಿಂಗ್ ಪ್ರಕಾರ, ಕಳೆದ ಏಳು ತಿಂಗಳುಗಳಲ್ಲಿ ಚೀನಾದ ವಾಹನ ಹಾಗೂ ಚಾಲಕರ ಸಂಖ್ಯೆಯು ಅನುಕ್ರಮವಾಗಿ 9.53 ಹಾಗೂ 9.04 ದಶಲಕ್ಷಗಳಿಗೆ ಹೆಚ್ಚಳಗೊಂಡಿದೆ. ಇದು ಈ ವರ್ಷದ ಲೆಕ್ಕಾಚಾರ ಮಾತ್ರವಾಗಿದೆ. ಒಟ್ಟಿನಲ್ಲಿ ಚೀನಾ ವಾಹನಗಳ ಸಮಾಜವಾಗಿ ಮಾರ್ಪಡುಗೊಳ್ಳುತ್ತಿದ್ದು, ಇವೆಲ್ಲವೂ ದೇಶ ಆರ್ಥಿಕವಾಗಿ ಸಾಧಿಸಿರುವ ಅಭಿವೃದ್ಧಿಯೇ ಕಾರಣ ಎಂದು ಮೂಲಗಳು ಹೇಳಿವೆ.
ನಿಮ್ಮ ಮಾಹಿತಿಗಾಗಿ 1986ನೇ ಇಸವಿಯಲ್ಲಿ ಚೀನಾದಲ್ಲಿ 3.62 ಮಿಲಿಯನ್ ವಾಹನ ಹಾಗೂ 5.17 ಮಿಲಿಯನ್ ಚಾಲಕರು ಮಾತ್ರವಿದ್ದರು. ಇದು 2012ರ ಅಂತ್ಯದ ವೇಳೆಯಾಗುವಾಗ 120 ದಶಲಕ್ಷ ವಾಹನ ಹಾಗೂ ಚಾಲನಾ ಪರವಾನಗಿ ಗಿಟ್ಟಿಸಿಕೊಳ್ಳುವವರ ಸಂಖ್ಯೆ 200 ದಶಲಕ್ಷವಾಗುವ ಸಾಧ್ಯತೆಯಿದೆ ಎಂದಿದೆ.
ವಿಶ್ವದ ಅತಿ ಉದ್ದದ ಹೆದ್ದಾರಿ ಹೊಂದಿರುವ ಚೀನಾ ರಾಷ್ಟ್ರವು ಒಟ್ಟು 4.24 ದಶಲಕ್ಷ ಕೀ.ಮೀ. ರಸ್ತೆ ಸೇವೆಯನ್ನು ಹೊಂದಿದೆ. ಇದು 1986ರಲ್ಲಿ ಕೇವಲ 1 ಮಿಲಿಯನ್ ರಸ್ತೆ ಮಾತ್ರ ಹೊಂದಿತ್ತು. ಹಾಗಿದ್ದರೂ ಟ್ರಾಫಿಕ್ ಅಪಘಾತ ವಿಷಯದಲ್ಲಿ ದೇಶವೂ ತುಂಬಾನೇ ಹಿನ್ನಡೆಯಲ್ಲಿದೆ ಎಂದು ಸಚಿವಾಲಯವು ಆತಂಕ ವ್ಯಕ್ತಪಡಿಸಿದೆ.


Click it and Unblock the Notifications









