ಭಾರತದ ವಿವಿಧ ರಾಜ್ಯಗಳ ಪೊಲೀಸರು ಬಳಸುವ ಕಾರುಗಳಿವು

ಭಾರತ ಸ್ವಾತಂತ್ರ್ಯ ಪಡೆದ ನಂತರದ ಕಾಲದಲ್ಲಿ ಪೊಲೀಸರು ಗಸ್ತು ತಿರುಗಲು ಹಾಗೂ ಕಾರ್ಯಚರಣೆ ನಡೆಸಲು ಅಧಿಕೃತವಾಗಿ ಜೀಪ್‍‍ಗಳನ್ನು ಬಳಸುತ್ತಿದ್ದರು. ಕಾಲ ಕಳೆದಂತೆ ಇಂದಿನ ಆಧುನಿಕ ಯುಗದಲ್ಲಿ ಪೊಲೀಸರು ಕೂಡ ನಾವು ಯಾವುದಕ್ಕೂ ಕಡಿಮೆ ಇಲ್ಲವೆಂದು ಮತಷ್ಟು ಚುರುಕು ಆಗಲು ಮಾ‍ರ್ಡನ್ ವಾಹನಗಳ ಮೊರೆಹೋಗಿದ್ದಾರೆ.

ಭಾರತದ ವಿವಿಧ ರಾಜ್ಯಗಳ ಪೊಲೀಸರು ಬಳಸುವ ಕಾರುಗಳಿವು

ಪೊಲೀಸರು ಗಸ್ತು ತಿರುಗಲು ಮತ್ತು ಕಳ್ಳ ಖದೀಮರ ಹೆಡೆ ಮುರಿ ಕಟ್ಟಲು ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನ, ಬಲಿಷ್ಠ ಎಂಜಿನ್ ಹೊಂದಿರುವ ಕಾರುಗಳನ್ನ ಹೊಂದಿದೆ. ಆಗ ಆದ್ರೆ ಭಾರತದ ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಯು ಯಾವುದೆಲ್ಲಾ ಕಾರುಗಳನ್ನು ಬಳಸುತ್ತಾರೆ ಎಂಬುವುದನ್ನು ನೋಡೋಣ.

ಭಾರತದ ವಿವಿಧ ರಾಜ್ಯಗಳ ಪೊಲೀಸರು ಬಳಸುವ ಕಾರುಗಳಿವು

ಟೊಯೊಟಾ ಇನೊವಾ

ಭಾರತದ್ಯಾಂತ ಪೊಲೀಸರು ಹೆಚ್ಚು ಬಳಸುತ್ತಿರುವ ಕಾರುಗಳಲ್ಲಿ ಟೊಯೊಟಾ ಇನೊವಾ ಕೂಡ ಒಂದಾಗಿದೆ. ಇನೊವಾ ಕಾರಿನಲ್ಲಿ ಸುಲುಭವಾಗಿ 7 ಜನ ಪ್ರಯಾಣಿಕರು ಸಾಗಬಹುದು ಮತ್ತು ವಿಶ್ವಾಸಾರ್ಹತೆಯನ್ನು ಹೊಂದಿರುವುದರಿಂದ ಭಾರತದ್ಯಾಂತ ಪೊಲೀಸರು ಸಮಾನ್ಯವಾಗಿ ಬಳಸುತ್ತಿದ್ದಾರೆ. ಪೊಲೀಸರು ಗಸ್ತು ತಿರುಗಲು ಹಾಗೂ ಪೊಲೀಸ್ ಉನ್ನತ ಅಧಿಕಾರಿಗಳು ಕೂಡ ಸಂಚಾರಿಸಲು ಇನೊವಾ ಕಾರನ್ನು ಬಳಸುತ್ತಿದ್ದಾರೆ. ಇನೊವಾ ಕಾರನ್ನು ಹೆಚ್ಚಾಗಿ ಬಳಸುವ ರಾಜ್ಯಗಳೆಂದರೆ - ದೆಹಲಿ, ಉತ್ತರ ಪ್ರದೇಶ, ಆಂಧ್ರ ಪ್ರದೇಶ ಮತ್ತು ತಮಿಳುನಾಡು.

ಭಾರತದ ವಿವಿಧ ರಾಜ್ಯಗಳ ಪೊಲೀಸರು ಬಳಸುವ ಕಾರುಗಳಿವು

ಮಾರುತಿ ಜಿಪ್ಸಿ

ದೇಶದ ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಪೊಲೀಸರು ಜಿಪ್ಸಿ ವಾಹನವನ್ನು ಬದಲಿಸಿ ಇತರ ವಾಹನದ ಕಡೆ ಮುಖ ಮಾಡಿರುವುದು. ಇನ್ನೂ ಉಳಿದ ಕಡೆಗಳಲ್ಲಿ ಈಗಲೂ ಪೊಲೀಸ್ ಪಡೆಯ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಅಲ್ಲದೇ ಪೊಲೀಸರು ತಮ್ಮ ಕಾರ್ಯಚರಣೆಗೆ ನಂಬಿಕೆಯಿಂದ ಈ ವಾಹನವನ್ನು ಬಳಸುತ್ತಿದಾರೆ. ದೆಹಲಿ ಮತ್ತು ಹರಿಯಾಣ ರಾಜ್ಯದ ಪೋಲಿಸರು ಇಂದಿಗೂ ಹೆಚ್ಚಾಗಿ ಈ ವಾಹನವನ್ನು ಬಳಸುತ್ತಿದ್ದಾರೆ.

ಭಾರತದ ವಿವಿಧ ರಾಜ್ಯಗಳ ಪೊಲೀಸರು ಬಳಸುವ ಕಾರುಗಳಿವು

ಮಾರುತಿ ಎರ್ಟಿಗಾ

ಟೊಯೊಟಾ ಇನೊವಾ ಕಾರಿನ ಬಳಿಕ ಭಾರತದ ಮಾರಟದಲ್ಲಿ ಎರಡನೇ ಅತ್ಯುತ್ತಮ ಎಂಪಿವಿಯಾಗಿದೆ. ಇದು ಗಾತ್ರದಲ್ಲಿ ಟೊಯೊಟಾ ಇನೊವಾ ಕಾರಿಗಿಂತ ಚಿಕ್ಕದಾಗಿದ್ದರು ಒಳಭಾಗದಲ್ಲಿ ಉತ್ತಮವಾಗಿ ಸ್ಪೇಸ್ ಇದ್ದು, 7ಜನ ಅಧಿಕಾರಿಗಳಿಗೆ ತೆರಳಬಹುದಾಗಿದೆ. ಸಿಟಿಯ ಟ್ರಾಫಿಕ್ ನಡುವೆ ಇನೊವಾಕ್ಕಿಂತ ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಇದರ ಪ್ರಯೋಜನವನ್ನು ನೀಡುತ್ತದೆ. ಈ ವಾಹನವನ್ನು ಚಂಡಿಗಢ, ಹರಿಯಾಣ, ಮುಂಬೈ, ಬೆಂಗಳೂರು ಪೊಲೀಸರು ಬಳಸುತ್ತಿದ್ದಾರೆ.

ಭಾರತದ ವಿವಿಧ ರಾಜ್ಯಗಳ ಪೊಲೀಸರು ಬಳಸುವ ಕಾರುಗಳಿವು

ಮಹೀಂದ್ರಾ ರೇವಾ

ವಿಶ್ವದ ಅತ್ಯಂತ ವಿಚಿತ್ರವಾದ ಪೊಲೀಸ್ ಕಾರುಗಳಲ್ಲಿ ಒಂದಾದ ಮಹೀಂದ್ರಾ ರೇವಾವನ್ನು ಚಂಡೀಗಢ ಪೊಲೀಸರು ಬಳಸುತ್ತಿದ್ದಾರೆ. ರೇವಾ ಭಾರತದಲ್ಲಿ ಕಮರ್ಷಿಯಲ್‍‍ಯಾಗಿ ಮಾರಾಟವಾದ ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ. ಇದರ ಕಾಂಪ್ಯಾಕ್ಟ್ ಗಾತ್ರವು ಸಿಟಿಯ ಜನನಿಬಿಡ ರಸ್ತೆಗಳಲ್ಲಿ ಗಸ್ತು ತಿರುಗಲು ಹೆಚ್ಚು ಸಹಕಾರಿಯಾಗಿದೆ. ಶೂನ್ಯ ಮಾಲಿನ್ಯ ಹೊಂದಿರುವ ಪೊಲೀಸ್ ಕಾರು ಇದಾಗಿದೆ.

ಭಾರತದ ವಿವಿಧ ರಾಜ್ಯಗಳ ಪೊಲೀಸರು ಬಳಸುವ ಕಾರುಗಳಿವು

ಮಹೀಂದ್ರಾ ಸ್ಕಾರ್ಪಿಯೋ

ಮಹೀಂದ್ರಾ ಸ್ಕಾರ್ಪಿಯೋ ಉತ್ತಮ ಕ್ಷಮತೆಯ ಡೀಸೆಲ್ ಎಂಜಿನ್ ಮತ್ತು ಗಟ್ಟಿಯಾದ ಬಾಡಿಯನ್ನು ಹೊಂದಿದೆ. ಗಣ್ಯವ್ಯಕ್ತಿಗಳಿಗೆ ರಕ್ಷಣೆಯನ್ನು ನೀಡುವ ಪೊಲೀಸ್ ಬೆಂಗಾವಲು ಪಡೆ ಹೆಚ್ಚಾಗಿ ಸ್ಕಾರ್ಪಿಯೋವನ್ನು ಉಪಯೋಗಿಸುತ್ತಾರೆ. ಆಂಧ್ರ ಪ್ರದೇಶ ಪೊಲೀಸರು ಹಿಂದಿನ ತಲೆಮಾರಿನ ಸ್ಕಾರ್ಪಿಯೋವನ್ನು ಬಳಿಸಿದರೆ ತೆಲಂಗಾಣ ಪೊಲೀಸರು ಪ್ರಸ್ತುತ ಸ್ಕಾರ್ಪಿಯೋ ಆವೃತ್ತಿಯನ್ನು ಬಳಸುತ್ತಿದ್ದಾರೆ.

ಭಾರತದ ವಿವಿಧ ರಾಜ್ಯಗಳ ಪೊಲೀಸರು ಬಳಸುವ ಕಾರುಗಳಿವು

ಸಫಾರಿ ಸ್ಟಾರ್ಮ್

ಸಫಾರಿ ಸ್ಟಾರ್ಮ್ ಕಾರನ್ನು ಇತ್ತೀಚೆಗೆ ಭಾರತೀಯ ಸೈನ್ಯಕ್ಕೆ ಸೇರಿಸಲಾಯಿತು ಮತ್ತು ಇದನ್ನು ಮಧ್ಯಪ್ರದೇಶದ ಪೊಲೀಸರು ಬಳಸುತ್ತಿದ್ದಾರೆ. ಸಫಾರಿ ಶಕ್ತಿಯುತ ಡೀಸೆಲ್ ಎಂಜಿನ್ ಹೊಂದಿದ್ದು, ಒಳಭಾಗದಲ್ಲಿ ಸಾಕಷ್ಟು ಸ್ಥಳಾವಕಾಶ ಮತ್ತು ಆರಾಮದಾಯಕ ಜರ್ನಿಗೆ ಸುಕ್ತವಾದ ವಾಹನವಾಗಿದೆ.

ಭಾರತದ ವಿವಿಧ ರಾಜ್ಯಗಳ ಪೊಲೀಸರು ಬಳಸುವ ಕಾರುಗಳಿವು

ಟಾಟಾ ಇಂಡಿಗೊ

ಟಾಟಾ ಮೋಟಾರ್ಸ್ ಸಂಸ್ಥೆಯು ಮೊದಲ ಬಾರಿ ಮಾರಟ ನಡೆಸಿದ ಸೆಡಾನ್ ಟಾಟಾ ಇಂಡಿಗೊ ಆಗಿದೆ. ಕಾರಿನ ಒಳಭಾಗದಲ್ಲಿ ಸಾಕಷ್ಟು ಸ್ಥಳಾವಕಾಶ ಹೊಂದಿದ್ದು, ಕೋಲ್ಕತಾ ಮತ್ತು ಆಗ್ರಾ ಪೋಲಿಸ್ ಪಡೆಗಳು ಗಸ್ತು ತಿರುಗಲು ಬಳಸುತ್ತಿದ್ದಾರೆ.

ಭಾರತದ ವಿವಿಧ ರಾಜ್ಯಗಳ ಪೊಲೀಸರು ಬಳಸುವ ಕಾರುಗಳಿವು

ಮಹೀಂದ್ರಾ ಬೊಲೆರೊ

ಬೊಲೆರೊ ದೇಶದ ಹೆಚ್ಚು ಜನಪ್ರಿಯ ಯುವಿಯಾಗಿದ್ದು, ಹೆಚ್ಚು ಮಾರಾಟವಾಗುತ್ತಿದೆ. ಬೊಲೆರೊ ಕಾರು ಬಲಶಾಲಿಯಾದ ಬಾಡಿ, ವಿಶ್ವಾಸಾರ್ಹ ಡೀಸೆಲ್ ಎಂಜಿನ್ ಮತ್ತು ಇದರ ಮೆಂಟೆನೆನ್ಸ್ ಸುಲಭವಾಗಿದೆ. ದೇಶಾದ್ಯಂತ ಅನೇಕ ಪೊಲೀಸರು ಬಳಿಸುತ್ತಿದ್ದು, ಪೊಲೀಸರ ನೆಚ್ಚಿನ ವಾಹನವು ಕೂಡ ಆಗಿದೆ. ಬೊಲೆರೊವನ್ನು ಬಳಸುವ ರಾಜ್ಯಗಳೆಂದರೆ - ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕೇರಳ ಮತ್ತು ಕರ್ನಾಟಕ.

ಭಾರತದ ವಿವಿಧ ರಾಜ್ಯಗಳ ಪೊಲೀಸರು ಬಳಸುವ ಕಾರುಗಳಿವು

ಫೋರ್ಡ್ ಇಕೋಸ್ಪೋರ್ಟ್

ಇದು ಕಾಂಪ್ಯಾಕ್ಟ್ ಎಸ್‍‍ಯುವಿಯಾಗಿದ್ದು, ಇದನ್ನು ಚಾಲನೆ ಮಾಡಲು ಆರಾಮದಾಯಕ ಮತ್ತು ಪವರ್‍‍ಪುಲ್ ವಾಹನವಾಗಿದೆ. ಹೆದ್ದಾರಿಗಳಲ್ಲಿ, ಕಿರಿದಾದ ದಾರಿಗಳಲ್ಲಿ ಮತ್ತು ಸಿಟಿಯ ಜನನಿಬಿಡ ಪ್ರದೇಶದಲ್ಲೂ ಸುಲಭವಾಗಿ ನಿಭಾಯಿಸಬಲ್ಲ ಕಾರು ಇದಾಗಿದೆ. ಆಂಧ್ರ ಪ್ರದೇಶದ ಪೊಲೀಸರು ಈ ವಾಹನವನ್ನು ಬಳಸುತ್ತಿದ್ದಾರೆ.

ಭಾರತದ ವಿವಿಧ ರಾಜ್ಯಗಳ ಪೊಲೀಸರು ಬಳಸುವ ಕಾರುಗಳಿವು

ಮಹೀಂದ್ರಾ ಟಿಯುವಿ 300

ಆಕರ್ಷಕ ಲುಕ್ ಮತ್ತು ಟಫ್‍‍ನಸ್‍‍ಗೆ ಮಹೀಂದ್ರಾ ಟಿಯುವಿ 300 ಹೆಸರುವಾಸಿಯಾಗಿದೆ. ಮಹಾರಾಷ್ಟ್ರ ಪೊಲೀಸ್ ಪಡೆಯಲ್ಲಿ ಇತ್ತೀಚೆಗೆ ಸೇರ್ಪಡೆಯಾಗಿದ್ದು, ಇದನ್ನು ಗಸ್ತು ತಿರುಗಲು ಬಳಸುತ್ತಿದ್ದಾರೆ. ಈ ಎಸ್‍ಯುವಿ ಪವರ್‍‍ಫುಲ್ ಮತ್ತು ಇಕ್ಕಟ್ಟಾದ ರಸ್ತೆಗಳಲ್ಲಿಯೂ ಸಂಚರಿಸಲು ಸಹಕಾರಿಯಾಗಿದೆ. ಇದನ್ನು ಮಹಾರಾಷ್ಟ್ರ ಪೊಲೀಸರು ಬಳಸುತ್ತಿದ್ದಾರೆ.

ಭಾರತದ ವಿವಿಧ ರಾಜ್ಯಗಳ ಪೊಲೀಸರು ಬಳಸುವ ಕಾರುಗಳಿವು

ಮಹೀಂದ್ರಾ ಮಾರ್ಕ್ಸ್ ಮನ್

ಹಲವು ರಾಜ್ಯದ ಪೊಲೀಸರು ಗಲಭೆಗಳನ್ನು ನಿಭಾಯಿಸಲು ಈ ಮಹೀಂದ್ರಾ ಮಾರ್ಕ್ಸ್ ಮನ್ ವಾಹನವನ್ನು ಬಳಸುತ್ತಿದ್ದಾರೆ. ಇದು ಭಾರತದ ಮೊದಲ ಸ್ಥಳೀಯ ಲೈಟ್ ಬುಲೇಟ್‍‍ಫ್ರುಫ್ ವಾಹನವಾಗಿದ್ದು, ಇದು ಭಾರೀ ಗುಂಡಿನ ದಾಳಿಯನ್ನು ತಡೆದುಕೊಳ್ಳಬಲ್ಲದು ಮತ್ತು ಹ್ಯಾಂಡ್ ಗ್ರೆನೇಡ್‍‍ಗಳಿಂದಲೂ ರಕ್ಷಣೆ ನೀಡುತ್ತದೆ. 2.5 ಲೀಟರ್ ಸಿ‍ಆರ್‍‍ಡಿಇ ಎಂಜಿನ್ ಹೊಂದಿದ್ದು, 105 ಬಿ‍ಎಚ್‍‍ಪಿ ಮತ್ತು 228 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 3,200ಕೆಜಿ ತೂಕವನ್ನು ಹೊಂದಿದ್ದು, 6 ಜನರಿಗೆ ಪ್ರಯಾಣ ಮಾಡಬಹುದು. ಈ ವಾಹನವು ಗಂಟೆಗೆ 120 ಕಿ.ಮೀ ವೇಗ ಹೊಂದಿದ್ದು, ಈ ವಾಹನವನ್ನು ಚಿಲಿಯ ರಕ್ಷಣಾ ಮತ್ತು ಅರೆಸೈನಿಕ ಪಡೆಗಳು ಸಹ ಬಳಸುತ್ತಾರೆ. ಈ ವಾಹನ ಬಳಸುವ ರಾಜ್ಯಗಳೆಂದರೆ - ಪಶ್ಚಿಮ ಬಂಗಾಳ, ಕರ್ನಾಟಕ, ಮುಂಬೈ ಪೊಲೀಸರು ಬಳಸುತ್ತಿದ್ದಾರೆ.

ಭಾರತದ ವಿವಿಧ ರಾಜ್ಯಗಳ ಪೊಲೀಸರು ಬಳಸುವ ಕಾರುಗಳಿವು

ಪೋಲಾರಿಸ್ ಎಟಿವಿ

ಅಮೇರಿಕಾದ ಎಟಿವಿ ಸಂಸ್ಥೆಯ ಪೋಲಾರಿಸ್ ವಾಹನವನ್ನು ಕೇರಳ ಪೊಲೀಸರು ಬಳಸುತ್ತಿದ್ದಾರೆ. ಈ ವಾಹನವನ್ನು ನಕ್ಸಲರನ್ನು ಎದುರಿಸಲು ನೇಮಿಸಲಾಗಿದ್ದು, ಆದರೆ ಇದನ್ನು ನಕ್ಸಲರ ವಿರುದ್ದ ಉಪಯೋಗಿಸಲು ಸಾಧ್ಯವಾಗುವುದಿಲ್ಲವೆಂದು ಅರಿತು ಪ್ರಸ್ತುತ ಇದನ್ನು ಬೀಜ್‍‍ಗಳಲ್ಲಿ ಗಸ್ತು ತಿರುಗಲು ಬಳಸುತ್ತಿದ್ದಾರೆ. 6 ಜನ ಪ್ರಯಾಣಿಸಬಹುದಾದ ಈ ವಾಹನವು ಕೇರಳ ರಾಜ್ಯದ ಹಲವು ಬೀಜ್‍‍ಗಳಲ್ಲಿ ಕಾಣ ಸಿಗುತ್ತದೆ. ಇದರ ಬೆಲೆ ರೂ. 18 ಲಕ್ಷ ಆಗಿದೆ.

Most Read Articles

Kannada
English summary
Tata Safari Storme to Mahindra Scorpio: Indian police forces & their cars - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X