ಉ.ಕೊರಿಯಾದಿಂದ ಮತ್ತೊಂದು ಕ್ಷಿಪಣಿ ಪರೀಕ್ಷೆ- ವಿಶ್ವದ ದೊಡ್ಡಣ್ಣನಿಗೆ ನಡುಕು

Written By:

ಅಂತರಾಷ್ಟ್ರೀಯ ಸಮುದಾಯಕ್ಕೆ ಮಣಿಯದ ಉತ್ತರ ಕೊರಿಯಾ ತನ್ನ ಹಠಮಾರಿ ಧೋರಣೆ ಮುಂದುವರಿಸಿದ್ದು, ಕ್ಷಿಪಣಿ ಪರೀಕ್ಷೆ ಮೂಲಕ ಮತ್ತೊಮ್ಮೆ ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಪರೋಕ್ಷ ಎಚ್ಚರಿಕೆ ನೀಡಿದೆ.

To Follow DriveSpark On Facebook, Click The Like Button
ಉ.ಕೊರಿಯಾದಿಂದ ಮತ್ತೊಂದು ಕ್ಷಿಪಣಿ ಪರೀಕ್ಷೆ- ವಿಶ್ವದ ದೊಡ್ಡಣ್ಣನಿಗೆ ನಡುಕು

700 ಕಿಮಿ ದೂರ ಸಾಗಬಲ್ಲ ಕ್ಷಿಪಣಿ

ಉತ್ತರ ಕೊರಿಯಾದ ಕುಸೊಂಗಿಲ್ ಎಂಬಲ್ಲಿಂದ ಕ್ಷಿಪಣಿ ಪರೀಕ್ಷೆ ನಡೆಸಲಾಗಿದ್ದು, 700 ಕಿಲೋಮೀಟರ್‌ ದೂರದ ಜಪಾನ್‌ ಸಮುದ್ರದವರೆಗೆ ತಲುಪಿದೆ.

ಉ.ಕೊರಿಯಾದಿಂದ ಮತ್ತೊಂದು ಕ್ಷಿಪಣಿ ಪರೀಕ್ಷೆ- ವಿಶ್ವದ ದೊಡ್ಡಣ್ಣನಿಗೆ ನಡುಕು

ಕ್ಷಿಪಣಿ ಬಿದ್ದಿರುವ ಪ್ರದೇಶವು ರಷ್ಯಾದ ಗಡಿಯಿಂದ ಕೇವಲ 500 ಕಿಲೋ ಮೀಟರ್‌ ದೂರದಲ್ಲಿದ್ದು, ಉತ್ತರ ಕೊರಿಯಾ ಕ್ರಮಕ್ಕೆ ನೆರೆಯ ರಾಷ್ಟ್ರಗಳ ತೀವ್ರವಾಗಿ ಖಂಡಿಸಿವೆ.

ಉ.ಕೊರಿಯಾದಿಂದ ಮತ್ತೊಂದು ಕ್ಷಿಪಣಿ ಪರೀಕ್ಷೆ- ವಿಶ್ವದ ದೊಡ್ಡಣ್ಣನಿಗೆ ನಡುಕು

ಕಿಡಿಕಾರಿದ ದೊಡ್ಡಣ್ಣ ಅಮೆರಿಕ

ಇನ್ನು ಉ.ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿರುವ ಕುರಿತು ಪ್ರತಿಕ್ರಿಯೆಸಿರುವ ಅಮೆರಿಕವು, ಇದೊಂದು ಪ್ರಚೋದನಾಕಾರಿ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಉ.ಕೊರಿಯಾದಿಂದ ಮತ್ತೊಂದು ಕ್ಷಿಪಣಿ ಪರೀಕ್ಷೆ- ವಿಶ್ವದ ದೊಡ್ಡಣ್ಣನಿಗೆ ನಡುಕು

ಇದಲ್ಲದೇ ಉತ್ತರ ಕೊರಿಯಾದ ನೆರೆಯ ರಾಷ್ಟ್ರಗಳಾದ ಜಪಾನ್ ಮತ್ತು ದಕ್ಷಿಣ ಕೊರಿಯಾ ಕೂಡಾ ಕಿಮ್ ಜಂಗ್ ಉನ್ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಉ.ಕೊರಿಯಾ ಉದ್ದಟತನವನ್ನು ಬಲವಾಗಿ ಖಂಡಿಸಿವೆ.

ಉ.ಕೊರಿಯಾದಿಂದ ಮತ್ತೊಂದು ಕ್ಷಿಪಣಿ ಪರೀಕ್ಷೆ- ವಿಶ್ವದ ದೊಡ್ಡಣ್ಣನಿಗೆ ನಡುಕು

ಈ ಹಿಂದೆ ಬೃಹತ್ ಗಾತ್ರದ ಕ್ಷಿಪಣಿ ಪ್ರದರ್ಶನ ಮಾಡಿದ್ದ ಉತ್ತರ ಕೊರಿಯಾ, ತಾವು ಯುದ್ಧಕ್ಕೆ ಸಿದ್ಧ ಎನ್ನುವ ಮೂಲಕ ಅಮೆರಿಕಕ್ಕೆ ಪರೋಕ್ಷವಾಗಿ ತೊಡೆ ತಟ್ಟಿತ್ತು.

ಉ.ಕೊರಿಯಾದಿಂದ ಮತ್ತೊಂದು ಕ್ಷಿಪಣಿ ಪರೀಕ್ಷೆ- ವಿಶ್ವದ ದೊಡ್ಡಣ್ಣನಿಗೆ ನಡುಕು

ಕಿಮ್ ಜಂಗ್ ವಿರುದ್ಧ ಉರಿದು ಬಿದ್ದ ಟ್ರಂಪ್

ಉತ್ತರ ಕೊರಿಯಾ ರವಿವಾರದಂದು ನಡೆಸಿದ ಪರೀಕ್ಷಾರ್ಥ ಕ್ಷಿಪಣಿ ಪರೀಕ್ಷೆಯನ್ನು ಬಲುವಾಗಿ ಖಂಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುವಂತೆ ಕರೆ ನೀಡಿದ್ದಾರೆ.

ಉ.ಕೊರಿಯಾದಿಂದ ಮತ್ತೊಂದು ಕ್ಷಿಪಣಿ ಪರೀಕ್ಷೆ- ವಿಶ್ವದ ದೊಡ್ಡಣ್ಣನಿಗೆ ನಡುಕು

ಉ.ಕೊರಿಯಾದ ನೂತನ ಕ್ಷಿಪಣಿ ಪರೀಕ್ಷೆಯು ಭಾರೀ ಚರ್ಚೆಗೆ ಕಾರಣವಾಗಿದ್ದು, ಅಂತರ್‌ರಾಷ್ಟ್ರೀಯ ರಾಜಕೀಯ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಉ.ಕೊರಿಯಾದಿಂದ ಮತ್ತೊಂದು ಕ್ಷಿಪಣಿ ಪರೀಕ್ಷೆ- ವಿಶ್ವದ ದೊಡ್ಡಣ್ಣನಿಗೆ ನಡುಕು

ಈ ಹಿಂದೆಯೂ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆಗೆ ಮುಂದಾಗಿದ್ದಾಗ ಎಚ್ಚರಿಕೆ ನೀಡಿದ್ದ ಅಮೆರಿಕಾ, ಕ್ಷಿಪಣಿ ಉದ್ದಟತನಕ್ಕೆ ತಕ್ಕ ಪ್ರತ್ಯತ್ತರ ನೀಡುವುದಾಗಿ ಸಂದೇಹ ನೀಡಿತ್ತು.

ಉ.ಕೊರಿಯಾದಿಂದ ಮತ್ತೊಂದು ಕ್ಷಿಪಣಿ ಪರೀಕ್ಷೆ- ವಿಶ್ವದ ದೊಡ್ಡಣ್ಣನಿಗೆ ನಡುಕು

ಆದ್ರೆ ಅಮೆರಿಕ ಮಾತಿಗೆ ಜಗ್ಗದ ಉ.ಕೊರಿಯಾ, ಕ್ಷಿಪಣಿ ಪರೀಕ್ಷೆ ನಡೆಸಿ ಆ ಪ್ರದೇಶದಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ.

ಉ.ಕೊರಿಯಾದಿಂದ ಮತ್ತೊಂದು ಕ್ಷಿಪಣಿ ಪರೀಕ್ಷೆ- ವಿಶ್ವದ ದೊಡ್ಡಣ್ಣನಿಗೆ ನಡುಕು

ಹೀಗಾಗಿ ಎಲ್ಲಾ ರಾಷ್ಟ್ರಗಳು ಉತ್ತರ ಕೊರಿಯಾ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರಬೇಕಾದ ಅಗತ್ಯವಿದೆ ಎಂದು ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಸೀಯಾನ್‌ ಸ್ಪೈಸರ್‌ ಹೇಳಿಕೆ ನೀಡಿದ್ದಾರೆ.

ಉ.ಕೊರಿಯಾದಿಂದ ಮತ್ತೊಂದು ಕ್ಷಿಪಣಿ ಪರೀಕ್ಷೆ- ವಿಶ್ವದ ದೊಡ್ಡಣ್ಣನಿಗೆ ನಡುಕು

ಈ ಮೂಲಕ ಉತ್ತರ ಕೊರಿಯಾವನ್ನು ಬಗ್ಗುಬಡಿಯುವ ಐರೋಪ್ಯ ಒಕ್ಕೂಟದ ಪ್ರಯತ್ನಕ್ಕೆ ಅಮೆರಿಕವು ಕೂಡಾ ದನಿಗೂಡಿಸಿದೆ.

English summary
North Korea Tested onther One missele in close to japan See.
Story first published: Monday, May 15, 2017, 18:11 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark