ನೀವು ಪಯಣಿಸಲು ಬಯಸುವ ಸೂಪರ್ ಲಗ್ಷುರಿ ಬಸ್ಸಿದು!
ನೀವು ನಿಮ್ಮ ದೂರದ ಊರುಗಳಿಗೆ ತೆರಳಲು ಯಾವ ದರ್ಜೆಯ ಬಸ್ಸುಗಳನ್ನು ಆಶ್ರಯಿಸುತ್ತೀರಾ? ಐಷಾರಾಮಿ ಬಸ್ಸುಗಳಲ್ಲಿ ತೆರಳಬೇಕೆಂಬುದು ಪ್ರತಿಯೊಬ್ಬರ ಹಂಬಲವಾಗಿರುತ್ತದೆ. ಆದರೆ ಹಣಕಾಸು ಸಮಸ್ಯೆಯಿಂದಾಗಿ ಸಾಮಾನ್ಯ ದರ್ಜೆಯ ಬಸ್ಸುಗಳಲ್ಲಿ ಪಯಣಿಸಬೇಕಾಗುತ್ತದೆ.
ಪ್ರಮುಖ ಅಂತರಾಷ್ಟ್ರೀಯ ಖ್ಯಾತಿಯ ವಾಹನ ಡಿಸೈನಾರ್ ದಿಲೀಪ್ ಛಾಬ್ರಿಯಾ ಕೂಡಾ ಕಸ್ಟಮೈಸ್ಡ್ ಕಾರು, ವ್ಯಾನ್, ಎಸ್‌ಯುವಿ ಹಾಗೂ ಎಂಪಿವಿ ವಿನ್ಯಾಸಗೊಳಿಸುವುದರಲ್ಲಿ ನಿಸ್ಸೀಮರು. ಇದೀಗ ಛಾಬ್ರಿಯಾ ಅವರು ಕಸ್ಟಮೈಸ್ಡ್ ಸೂಪರ್ ಲಗ್ಷುರಿ ಕಾನ್ಸೆಪ್ಟ್ ಬಸ್ಸುಗಳನ್ನು ವಿನ್ಯಾಸಗೊಳಿಸಿದ್ದಾರೆ. ಇಲ್ಲೊಮ್ಮೆ ಕಣ್ಣಾಯಿಸಿ ನೋಡಿ ನಿಮಗೂ ಈ ಬಸ್ಸಲ್ಲಿ ಪಯಣಿಸಬೇಕೆಂಬ ಆಸೆ ಖಂಡಿತವಾಗಿಯೂ ಮೂಡಲಿದೆ.

ಸೂಪರ್ ಲಗ್ಷುರಿ ಬಸ್
ಈ ಪ್ರಥಮ ದರ್ಜೆಯ ಐಷಾರಾಮಿ ಬಸ್ ಆರಾಮದಾಯಕ ಪಯಣವನ್ನು ನಿಮಗೆ ನೀಡಲಿದೆ. ಇದರ ಐಷಾರಾಮಿ ಕ್ಯಾಬಿನ್ ಎಂತವರನ್ನು ಒಮ್ಮೆ ಕಣ್ಣು ಕುಕ್ಕುವಂತೆ ಮಾಡಲಿದೆ.

ಸೂಪರ್ ಲಗ್ಷುರಿ ಬಸ್
ದೂರದ ಊರಿಗೆ ತೆರಳಲು ದಿಲೀಪ್ ಛಾಬ್ರಿಯಾ ವಿನ್ಯಾಸಗೊಳಿಸಿರುವ ಈ ಬಸ್ ಪರಿಪೂರ್ಣವೆನಿಸತ್ತಿದೆ.

ಸೂಪರ್ ಲಗ್ಷುರಿ ಬಸ್
ಪ್ರತಿಯೊಂದು ಸೀಟ್‌ನಲ್ಲೂ ಎಲ್‌ಇಡಿ ಸ್ಕ್ರೀನ್ ಹೊಂದಿರುವುದು ಇದರ ವಿಶೇಷತೆಯಾಗಿದೆ. ಹಾಗೆಯೇ ಸೀಟುಗಳು ಉತ್ತಮ ಸ್ಥಳವಕಾಶವನ್ನು ಹೊಂದಿದೆ.

ಸೂಪರ್ ಲಗ್ಷುರಿ ಬಸ್
ಸೂಪರ್ ಲಗ್ಷುರಿ ಬಸ್ಸಲ್ಲಿ ಪಯಣಿಸುವಾಗ ನಿಮಗೆ ವಿಮಾನದಲ್ಲಿ ಹಾರಾಡುವ ಅನುಭವ ನೀಡಲಿದೆ.

ಸೂಪರ್ ಲಗ್ಷುರಿ ಬಸ್
ಈ ಐಷಾರಾಮಿ ಬಸ್ಸಿನ ಎಡಭಾಗದಲ್ಲಿ ಸಿಂಗಲ್ ಸೀಟ್ ವ್ಯವಸ್ಥೆ ಹೊಂದಿದೆ. ಹಾಗೆಯೇ ಮೇಲ್ಗಡೆ ಹೆಚ್ಚಿನ ಲಗ್ಗೇಜ್ ಸ್ಪೇಸ್ ನೀಡಲಾಗಿದೆ. ಅಂತೆಯೇ ಸೈಡ್ ವಾಲ್‌ಗೆ ವುಡನ್ ಟಚ್ ನೀಡಲಾಗಿದೆ.

ಸೂಪರ್ ಲಗ್ಷುರಿ ಬಸ್
ಎಲ್‌ಇಡಿ ಸ್ಕ್ರೀನ್ ಹಾಗೂ ಹೆಡ್ ಫೋನ್ ಸೌಲಭ್ಯಗಳು ನಿಮ್ಮನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯಲಿದೆ.

ಸೂಪರ್ ಲಗ್ಷುರಿ ಬಸ್
ಲಗ್ಷುರಿ ಪ್ರಯಾಣಿಕರ ಅಗತ್ಯಗಳನ್ನು ಪರಿಗಣಿಸಿ ದಿಲೀಪ್ ಛಾಬ್ರಿಯಾ ಬಸ್ಸನ್ನು ವಿನ್ಯಾಸಗೊಳಿಸಿದ್ದಾರೆ.

ಸೂಪರ್ ಲಗ್ಷುರಿ ಬಸ್
ಈ ಸೂಪರ್ ಲಗ್ಷುರಿ ಬಸ್ಸನ್ನು ಮಿನಿ ಆಫೀಸ್ ಎಂದೇ ಪರಿಗಣಿಸಬಹುದು. ಯಾಕೆಂದರೆ ಇದರಲ್ಲಿ ವಿಂಡೋಸ್ ಓಪರೇಟಿಂಗ್ ಸಿಸ್ಟಂ ಕೂಡಾ ಸೌಲಭ್ಯವಿದೆ.

ಸೂಪರ್ ಲಗ್ಷುರಿ ಬಸ್
ಈ ಪ್ರಥಮ ದರ್ಜೆಯ ಬಸ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿರಿ


Click it and Unblock the Notifications








