ಹೋಳಿ - ಟ್ರಾಫಿಕ್ ಉಲ್ಲಂಘಿಸಿದರೆ ಶಿಕ್ಷೆ ಗ್ಯಾರಂಟಿ
ಈ ಬಾರಿಯ ಹೋಳಿ ಬರಮಾಡಿಕೊಳ್ಳಲು ದೇಶದ ಜನತೆ ಪ್ರಮುಖವಾಗಿಯೂ ಉತ್ತರ ಭಾರತೀಯರು ಸನ್ನದ್ಧವಾಗಿದ್ದಾರೆ. ಆದರೆ ಕಳೆದ ವರ್ಷಗಳಂತೆ ಈ ಬಾರಿಯ ಹೋಳಿಯಲ್ಲಿ ಟ್ರಾಫಿಕ್ ನಿಯಮ ಮಾತ್ರ ಸಡಿಲವಾಗಿರುವುದಿಲ್ಲ.
ಹಾಗೊಂದು ವೇಳೆ ಹೋಳಿ ಹಬ್ಬದ ಸಂದರ್ಭದಲ್ಲಿ ನೀವು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ಕೇವಲ ದಂಡ ಪಾವತಿ ಮಾತ್ರವಲ್ಲದೆ ಜೈಲು ಕೂಡಾ ಸೇರಬೇಕಾದಿತು. ಅಷ್ಟೇ ಯಾಕೆ ವಾಹನಗಳನ್ನು ಮುಟ್ಟುಗೋಲು ಮಾಡಲಿದ್ದೇವೆ ಎಂದು ದೆಹಲಿ ಟ್ರಾಫಿಕ್ ಪೊಲೀಸ್ ಎಚ್ಚರಿಕೆ ರವಾನಿಸಿದೆ.
ಹೋಳಿ ಹಬ್ಬ ಸಂಬಂಧ ಪ್ರಕಟಣೆ ಹೊರಡಿಸಿರುವ ದೆಹಲಿ ಪೊಲೀಸ್, ಟ್ರಾಫಿಕ್ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಓವರ್ ಸ್ಪೀಡಿಂಗ್, ಪಾನಮತ್ತ ಡ್ರೈವಿಂಗ್, ಮೂವರು ಸವಾರರ ಡ್ರೈವಿಂಗ್, ಹೆಲ್ಮೆಟ್ ರಹಿತ ಡ್ರೈವಿಂಗ್ ಇವೆಲ್ಲವೂ ಟ್ರಾಫಿಕ್ ನಿಯಮದ ಉಲ್ಲಂಘನೆಯಾಗಿರಲಿದೆ ಎಂದಿದೆ.
ಕಳೆದ ವರ್ಷ ಹೋಳಿ ಹಬ್ಬದ ಸಂದರ್ಭದಲ್ಲಿ ಮೇಲೆ ಸೂಚಿಸಲಾದ ಎಲ್ಲ ವಿಭಾಗಗಳಲ್ಲಾಗಿ ಒಟ್ಟು 8,526 ಪ್ರಕರಣಗಳು ದಾಖಲಾಗಿದ್ದವು. ಇದರಿಂದಾಗಿ ಈ ಬಾರಿ ದೆಹಲಿ ಪೊಲೀಸ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.


Click it and Unblock the Notifications









