ಕೋಟಿ ಬೆಲೆ ಬಾಳುವ ಕಾರಲ್ಲಿ ಡ್ರೈವ್‌ಸ್ಪಾರ್ಕ್ ಟೆಸ್ಟ್ ಡ್ರೈವ್
ನಿಮ್ಮ ಮಾಹಿತಿಗಾಗಿ ಕೆಲವು ದಿನಗಳ ಹಿಂದೆಯಷ್ಟೇ ಗೋವಾದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಟೆಸ್ಟ್ ಡ್ರೈವ್ ಸಂದರ್ಭದಲ್ಲಿ ಅವಘಡ ಸಂಭವಿಸಿದ ಬಗ್ಗೆ ನಾವು ವರದಿ ಮಾಡಿದ್ದೆವು. ಅಂದು ಕಾರಲ್ಲಿದ್ದ ನಮ್ಮ ಡ್ರೈವ್ ಸ್ಪಾರ್ಕ್ ಮುಖ್ಯ ಸಂಪಾದಕರು ಸ್ವಲ್ಪದ್ದರಲ್ಲೇ ಪ್ರಾಣಪಾಯದಿಂದ ಪಾರಾಗಿದ್ದರು.
ಈ ನಡುವೆ ಡ್ರೈವ್ ಸ್ಪಾರ್ಕ್ ಮುಂದಿನ ಟೆಸ್ಟ್ ಡ್ರೈವ್ ಯಾವುದು ಎಂಬುದನ್ನು ತಿಳಿಯುವ ಕುತೂಹಲ ಓದುಗರಲ್ಲಿದೆ. ನಿಮ್ಮ ಕಾಯುವಿಕೆ ಇದೀಗ ಅಂತ್ಯಗೊಂಡಿದ್ದು, ಡ್ರೈವ್ ಸ್ಪಾರ್ಕ್ ತಂಡದ ಮುಂದಿನ ಟೆಸ್ಟ್ ಡ್ರೈವ್ ಕೋಟಿ ಬೆಲೆ ಬಾಳುವ ಬಿಎಂಡಬ್ಲ್ಯು ಕಾರಿನಲ್ಲಾಗಿದೆ.
ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಬಿಎಂಡಬ್ಲ್ಯು ಎಂ5 ಸೆಡಾನ್ ಗರಿಷ್ಠ ನಿರ್ವಹಣೆ ಖಾತ್ರಿಪಡಿಸುತ್ತದೆ. ಇದರ 4.4 ವಿ8 ಎಂಜಿನ್ 560 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಕೇವಲ 4.4 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸಲಿದ್ದು, ಪ್ರತಿ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗತೆಯಲ್ಲಿ ಚಲಿಸಲಿದೆ.
ಅಷ್ಟಕ್ಕೂ ಬಿಎಂಡಬ್ಲ್ಯು ಎಂ5 ಟೆಸ್ಟ್ ಡ್ರೈವ್ ವರದಿ ನೋಡುವ ಕುತೂಹಲ ನಿಮ್ಮಲ್ಲಿದೆಯೇ? ಸದ್ಯದಲ್ಲೇ ನಾವಿದನ್ನು ವಿಸೃತ ಲೇಖನದಲ್ಲಿ ಪ್ರಸ್ತುತಪಡಿಸಲಿದ್ದೇವೆ. ಇದಕ್ಕಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ...


Click it and Unblock the Notifications
