ಇಕೊಸ್ಪೋರ್ಟ್ ಟೆಸ್ಟ್ ಡ್ರೈವಲ್ಲೇ ಅಪಘಾತ; ಮಾಧ್ಯಮ ಮಿತ್ರರು ಪಾರು

Posted By:

ಗೋವಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಟೆಸ್ಟ್ ಡ್ರೈವ್‌ನಲ್ಲಿ ಭಾರಿ ಅಪಘಾತ ಸಂಭವಿಸಿದ್ದು, ಮಾಧ್ಯಮ ಮಿತ್ರರು ಸ್ವಲ್ಪದರಲ್ಲೇ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಕಾರಿನಲ್ಲಿ ಒಟ್ಟು ಇಬ್ಬರು ಮಂದಿ ಸಂಚರಿಸುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಇಲ್ಲಿ ಫೋರ್ಡ್ ಇಕೊಸ್ಪೋರ್ಟ್ ನೂತನ ತಂತ್ರಜ್ಞಾನ ನೆರವಿಗೆ ಬಂದಿರುವುದು ಗಮನಾರ್ಹವಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಇಕೊಸ್ಪೋರ್ಟ್ ತುರ್ತು ಸಹಾಯ ಸೇವೆ ಬಗ್ಗೆ ನಾವು ವರದಿ ಮಾಡಿದ್ದೆವು. ಅಕ್ಷರಶ: ನೂತನ ತಂತ್ರಜ್ಞಾನ ಮಾಧ್ಯಮ ವರದಿಗಾರರನ್ನು ಪ್ರಾಣಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದೆ.

ದೇಶದಲ್ಲಿ ಇದೇ ಮೊದಲ ಬಾರಿಯೆಂಬಂತೆ ಫೋರ್ಡ್ ಇಕೊಸ್ಪೋರ್ಟ್‌ನಲ್ಲಿ ನೂತನ ಎಮರ್ಜನ್ಸಿ ಅಸಿಸ್ಟ್ ಸಿಸ್ಟಂ (Ford EcoSport Emergency Assist) ಆಳವಡಿಸಲಾಗಿದೆ. ಇದರಂತೆ ಕಾರು ಅಪಘಾತಕ್ಕೀಡಾದ್ದಲ್ಲಿ ದೇಶದ ತುರ್ತು ಸಹಾಯ ಸೇವೆ ಆದ 108ಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಮಾಧ್ಯಮ ಮಿತ್ರರು ಅಪಘಾತಕ್ಕೀಡಾದ ಕ್ಷಣಾರ್ಧದಲ್ಲೇ ಎಮರ್ಜನ್ಸಿ ಅಸಿಸ್ಟ್ ಸಿಸ್ಟಂ ಕಾರ್ಯಾಚರಣೆ ಆರಂಭಿಸಿತ್ತಲ್ಲದೆ, ಸ್ಮಾರ್ಟ್ ಫೋನ್ ಮೂಖಾಂತರ 108 ತುರ್ತು ಸಹಾಯವಾಣಿ ಸಂಖ್ಯೆಗೆ ಸಂದೇಶ ರವಾನೆಯಾಗಿತ್ತು. ಇನ್ನೇನೂ ಐದು ನಿಮಿಷದೊಳಗೆ ಧಾವಿಸಿ ಬಂದ ಅಂಬುಲೆನ್ಸ್ ಮಾಧ್ಯಮ ಮಿತ್ರರನ್ನು ಯಾವುದೇ ಹೆಚ್ಚಿನ ತೊಂದರೆಯಿಲ್ಲದೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಕೊಸ್ಪೋರ್ಟ್ ಟೆಸ್ಟ್ ಡ್ರೈವಲ್ಲೇ ಅಪಘಾತ; ಮಾಧ್ಯಮ ಮಿತ್ರರು ಪಾರು

ಅದೃಷ್ಟವಶಾತ್ ಈ ಕಾರು ಅಪಘಾತದಲ್ಲಿ ಯಾರು ಕೂಡಾ ಗಾಯಗೊಂಡಿಲ್ಲ. ಫೋರ್ಡ್ ಇಕೊಸ್ಪೋರ್ಟ್ ನೂತನ ತಂತ್ರಜ್ಞಾನಕ್ಕೆ ಹಾಟ್ಸ್ ಅಪ್ ಹೇಳಲೇ ಬೇಕಾಗುತ್ತದೆ.

ಇಕೊಸ್ಪೋರ್ಟ್ ಟೆಸ್ಟ್ ಡ್ರೈವಲ್ಲೇ ಅಪಘಾತ; ಮಾಧ್ಯಮ ಮಿತ್ರರು ಪಾರು

ಅಂದ ಹಾಗೆ ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಜೂನ್ ತಿಂಗಳಲ್ಲಿ ಭಾರತ ಪ್ರವೇಶ ಪಡೆಯಲಿದೆ.

ಇಕೊಸ್ಪೋರ್ಟ್ ಟೆಸ್ಟ್ ಡ್ರೈವಲ್ಲೇ ಅಪಘಾತ; ಮಾಧ್ಯಮ ಮಿತ್ರರು ಪಾರು

ಇದರೊಂದಿಗೆ ಕಾರಿನ ಸುರಕ್ಷಾ ಮಾನದಂಡ ಬಗ್ಗೆಯಿದ್ದ ಗ್ರಾಹಕರ ಗೊಂದಲಕ್ಕೆ ಈ ನೈಜ ಅಪಘಾತದಿಂದ ಉತ್ತರ ದೊರಕಿದಂತಾಗಿದೆ.

ಇಕೊಸ್ಪೋರ್ಟ್ ಟೆಸ್ಟ್ ಡ್ರೈವಲ್ಲೇ ಅಪಘಾತ; ಮಾಧ್ಯಮ ಮಿತ್ರರು ಪಾರು

ಅಂದ ಹಾಗೆ ಫೋರ್ಡ್ ಇಕೊಸ್ಪೋರ್ಟ್ ಅನಧಿಕೃತ ಬುಕ್ಕಿಂಗ್ ಬಲು ಜೋರಾಗಿಯೇ ನಡೆಯುತ್ತಲೇ ಇದೆ. ಇದೀಗ ಈ ಘಟನೆಯು ಇನ್ನಷ್ಟು ಗ್ರಾಹಕರನ್ನು ಸೆಳೆಯುವ ಸಾಧ್ಯತೆಯಿದೆ.

ಇಕೊಸ್ಪೋರ್ಟ್ ಟೆಸ್ಟ್ ಡ್ರೈವಲ್ಲೇ ಅಪಘಾತ; ಮಾಧ್ಯಮ ಮಿತ್ರರು ಪಾರು

ಫೋರ್ ಸಬ್ ಮೀಟರ್‌ನಲ್ಲಿ ಆಗಮನವಾಗಲಿರುವ ಫೋರ್ಡ್ ಇಕೊಸ್ಪೋರ್ಟ್, ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಹಾಗೆಯೇ ಬೇಸ್ ವೆರಿಯಂಟ್‌ಗೆ ಆರು ಲಕ್ಷ ರು. ಅಂದಾಜಿಸಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

English summary
Ford EcoSport’s Emergency Assist system was demonstrated first hand during a media drive in Goa. A Ford EcoSport SUV was involved in an accident, with two auto journalists on board. Fortunately, both occupants survived without any serious injuries. Incidentally, the accident provided a perfect opportunity for Ford’s Emergency System to demonstrate its capability.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark