ಇಕೊಸ್ಪೋರ್ಟ್ ವಿಭಿನ್ನವಾಗಿಸಿದ ತುರ್ತು ಸಹಾಯ ಸೇವೆ

ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಮಾರುಕಟ್ಟೆಗೆ ಆಗಮಿಸಲು ಸಜ್ಜಾಗಿರುವಂತೆಯೇ ಸಹಜವಾಗಿಯೇ ಇದರಲ್ಲಿ ಆಳವಡಿಸಿರುವ ತಂತ್ರಜ್ಞಾನದ ಬಗ್ಗೆ ಕಾರು ಪ್ರಿಯರಲ್ಲಿ ಕುತೂಹಲ ಮನೆ ಮಾಡಿದೆ.

ಫೋರ್ಡ್ ಇಕೊಸ್ಪೋರ್ಟ್‌ನ ನೂತನ ಇಕೊಬೂಸ್ಟ್ ಎಂಜಿನ್ ಪ್ರಮುಖ ವೈಶಿಷ್ಟ್ಯವಾಗಿರಲಿದೆ ಎಂದು ಅಂದುಕೊಂಡಿದ್ದರೆ ತಪ್ಪಾದಿತು. ಯಾಕೆಂದರೆ ನೂತನ ಕಾರಿನಲ್ಲಿ ಇನ್ನು ಹೆಚ್ಚಿನ ಫೀಚರ್ಸ್ ಪಡೆಯುವ ಸಾಧ್ಯತೆಗಳಿವೆ.

ಇದರಲ್ಲಿ ಪ್ರಮುಖವಾಗಿರುವುದು ಫೋರ್ಡ್ ಎಮರ್ಜನ್ಸಿ ಅಸಿಸ್ಟ್ ಸಿಸ್ಟಂ ( Ford EcoSport Emergency Assist). ಇದೇ ಮೊದಲ ಬಾರಿಗೆ ಇಂತಹದೊಂದು ತಂತ್ರಗಾರಿಕೆಯನ್ನು ಬಳಕೆ ಮಾಡುವ ಸಾಧ್ಯತೆಗಳಿವೆ. ಅಂದ ಹಾಗೆ ಇದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಫೋಟೊ ಫೀಚರ್ ಮೂಲಕ ತಿಳಿದುಕೊಳ್ಳೋಣವೇ.

Ford EcoSport Emergency Assist

ಒಂದು ವೇಳೆ ಕಾರು ಅಪಘಾತಕ್ಕೀಡಾದ್ದಲ್ಲಿ ಜಿಪಿಎಸ್ ನೆರವಿನಿಂದ ಇದರಲ್ಲಿ ಆಳವಡಿಸಲಾಗಿರುವ ತಂತ್ರಜ್ಞಾನವು ಕಾರು ಅವಘಡಕ್ಕೀಡಾದ ಸ್ಥಳದ ಬಗ್ಗೆ ಫೋನ್ ಮೂಖಾಂತರ ಮಾಹಿತಿ ರವಾನಿಸಲಿದೆ. ಇದು ನೇರವಾಗಿ ದೇಶದ ತುರ್ತು ಸಹಾಯ ಸೇವೆ ಆದ 108ಕ್ಕೆ ಸಂಪರ್ಕ ಕಲ್ಪಿಸಲಿದೆ.

Ford EcoSport Emergency Assist

ಅಪಘಾತ ಸಂಭವಿಸಿದ 10 ಸೆಕೆಂಡ್ ಒಳಗಾಗಿ ಈ ಎಮರ್ಜನ್ಸಿ ಕಾಲ್ ಆಕ್ಟಿವ್ ಆಗಲಿದೆ. ಇದರಿಂದ ಸಣ್ಣ ಪುಟ್ಟ ಅಪಘಾತ ಸಂದರ್ಭಗಳಲ್ಲಿ ಚಾಲಕರು ಬಯಸಿದ್ದಲ್ಲಿ ಕಾಲ್ ರದ್ದು ಮಾಡಲು ಸಾಧ್ಯವಾಗಲಿದೆ.

Ford EcoSport Emergency Assist

ಇದು ಸಂಪೂರ್ಣ ಮುಕ್ತ ಸರ್ವಿಸ್ ಆಗಿದ್ದು ಯಾವುದೇ ರೀತಿಯ ಚಂದಾದಾರನಾಗುವ ಅಗತ್ಯವಿರುವಿಲ್ಲ. ಕೇವಲ ಇದಕ್ಕೆ ಬೇಕಾಗಿರುವುದು ಬ್ಲೂಟೂತ್ ವ್ಯವಸ್ಥೆ ಇರುವ ಮೊಬೈಲ್. ಹಾಗೊಂದು ವೇಳೆ ಚಾಲಕ ಬ್ಲೂಟೂತ್ ಕೆನೆಕ್ಟ್ ಮಾಡುವುದನ್ನು ಮರೆತು ಹೋಗಿದ್ದಲ್ಲಿ ಪಯಣ ಆರಂಭದಲ್ಲೇ ಈ ಬಗ್ಗೆ ಎಚ್ಚರಿಕೆ ರವಾನಿಸಲಿದೆ.

Ford EcoSport Emergency Assist

ಅಂದ ಹಾಗೆ ಫೋರ್ಡ್ ತುರ್ತು ನೆರವು ವ್ಯವಸ್ಥೆ ಜಾಗತಿಕವಾಗಿ ಅದರಲ್ಲೂ ಪ್ರಮುಖವಾಗಿ ಯುರೋಪ್‌ನಲ್ಲಿ ಲಭ್ಯವಿದೆ. ಸದ್ಯ ಜೂನ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಇಕೊಸ್ಪೋರ್ಟ್‌ನಲ್ಲಿ ಇದು ಲಭ್ಯವಾಗಲಿದೆಯೇ ಎಂಬುದು ತಿಳಿದು ಬಂದಿಲ್ಲ. ಹಾಗಿದ್ದರೂ ಬಲ್ಲ ಮೂಲಗಳ ಪ್ರಕಾರ ಟಾಪ್ ಎಂಡ್ ವೆರಿಯಂಟ್ ಟೈಟಾನಿಯಂಗೆ ಈ ಸೇವೆ ಲಭ್ಯವಾಗಲಿದೆ ಎಂಬ ಮಾಹಿತಿ ದೊರಕಿದೆ.

Ford EcoSport Emergency Assist

ಜಗತ್ತಿನ ವಿವಿಧ ಭಾಗಗಳಲ್ಲಿ ಫೋರ್ಡ್ ಎಮರ್ಜನ್ಸಿ ಅಸಿಸ್ಟ್ ವ್ಯವಸ್ಥೆಯು ಜೀವ ರಕ್ಷಕ ಎಂಬುದನ್ನು ಸಾಬೀತುಪಡಿಸಿದೆ. ಹಾಗಾಗಿ ಭಾರತದಲ್ಲೂ ಆಳವಡಿಕೆಯಾದ್ದಲ್ಲಿ ಖಂಡಿತ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಲಿದೆ.

Ford EcoSport Emergency Assist

ಇದೀಗ ಫೋರ್ಡ್ ಇಕೊಸ್ಪೋರ್ಟ್ ತುರ್ತು ಸಹಾಯ ಸೇವೆ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ

More from DriveSpark

Article Published On: Thursday, May 9, 2013, 11:25 [IST]
English summary
Ford launches the EcoSport in India, the EcoBoost engine will not be the only highlight of the car. Ford will also introduce its Sync infotainment system based Emergency Assist feature for the first time in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+