ಕ್ರೀಡಾ ಬಳಕೆಯ ವಾಹನ; ಡಸ್ಟರ್ ಇದೀಗ ನಂ. 2

By Nagaraja

ಬಿಡುಗಡೆಗೊಂಡಿರುವ ಕೇವಲ 10 ತಿಂಗಳೊಳಗೆ ರೆನೊ ಡಸ್ಟರ್, ಅತ್ಯುತ್ತಮ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಎಂದೆನಿಸಿಕೊಂಡಿದೆ. ಅಷ್ಟೇ ಯಾಕೆ ಇನ್ನು ಸ್ವಲ್ಪ ಸಮಯದಲ್ಲೇ ನಂ.1 ಪಟ್ಟ ಆಲಂಕರಿಸುವ ಸಾಧ್ಯತೆ ನಿಚ್ಚಳವಾಗಿ ಕಂಡುಬರುತ್ತಿದೆ.

ಕಳೆದ ಜುಲೈ ತಿಂಗಳಲ್ಲಿ ದೇಶದ ರಸ್ತೆಗೆ ಡಸ್ಟರ್ ಎಸ್‌‍ಯುವಿ ಕಾರು ಪರಿಚಯವಾಗಿತ್ತು. ವಾಹನ ಮಾರಾಟ ಕುಸಿತದ ನಡುವೆಯೂ ಉತ್ತಮ ಆವೇಗ ಕಾಯ್ದುಕೊಂಡಿದ್ದ ಡಸ್ಟರ್, ಎಪ್ರಿಲ್ ತಿಂಗಳಲ್ಲಿ ಮಹೀಂದ್ರ ಆಂಡ್ ಮಹೀಂದ್ರದ ಸ್ಕಾರ್ಪಿಯೊ ಎಸ್‌ಯುವಿ ಆವೃತ್ತಿಯನ್ನು ಹಿಂದಿಕ್ಕಿತ್ತು.

ಭಾರತೀಯ ಆಟೋಮೊಬೈಲ್ ಉತ್ಪಾದಕರ (ಸಿಯಾಮ್) ವರದಿ ಪ್ರಕಾರ ಎಪ್ರಿಲ್ ತಿಂಗಳಲ್ಲಿ ಡಸ್ಟರ್ 5,362 ಯುನಿಟ್ ಮಾರಾಟವಾಗಿದೆ. ಇದು ಯುಟಿಲಿಟಿ ವಾಹನಗಳ ಮಾರಾಟಗಳ ಪೈಕಿ (ಎಸ್‌ಯುವಿ ಹಾಗೂ ಯುವಿ) ಎರಡನೇಯದ್ದಾಗಿದೆ. ಕಳೆದ ವರ್ಷ ಟಾಪ್ 5 ಯುಲಿಟಿಲಿ ವಾಹನಗಳ ಪಟ್ಟಿಯಲ್ಲಿ ಬೊಲೆರೊ, ಟೊಯೊಟಾ ಇನ್ನೋವಾ, ಎರ್ಟಿಗಾ, ಸ್ಕಾರ್ಪಿಯೊ ಹಾಗೂ ಮಹೀಂದ್ರ ಎಕ್ಸ್‌ಯುವಿ 500 ಕಾಣಿಸಿಕೊಂಡಿತ್ತು.

ಹಾಗಿದ್ದರೂ ಮುಂದಿನ ತಿಂಗಳಲ್ಲಿ ಫೋರ್ಡ್ ಇಕೊಸ್ಪೋರ್ಟ್ ಲಾಂಚ್ ಆಗುತ್ತಿರುವಂತೆಯೇ ಡಸ್ಟರ್‌ಗೆ ಪ್ರಬಲ ಪೈಪೋಟಿ ನಿರೀಕ್ಷಿಸಲಾಗುತ್ತಿದೆ. ಇದು ಭಾರತೀಯ ಮಾರುಕಟ್ಟೆ ದೃಷ್ಟಿಕೋನದಿಂದ ಉತ್ತಮ ಬೆಳವಣಿಗೆಯಾಗಿದೆ.

More from DriveSpark

Article Published On: Thursday, May 16, 2013, 15:55 [IST]
English summary
Duster is now the No.2 utility vehicle (UV), a category that encompasses SUVs and multi utility vehicles (MUVs).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+