ಹ್ಯುಂಡೈನಿಂದ ಇಕೊಸ್ಪೋರ್ಟ್, ಡಸ್ಟರ್ ಪ್ರತಿಸ್ಪರ್ಧಿ ಸಿದ್ಧ
ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಕ್ರೀಡಾ ಬಳಕೆಯ ವಾಹನಗಳಿಗೆ ಭಾರಿ ಬೇಡಿಯಿದೆ. ಇದನ್ನು ನಿಜವೆಂದು ನಿರೂಪಿಸಿದ್ದ ರೆನೊ ಇಂಡಿಯಾ, ಡಸ್ಟರ್ ಮೂಲಕ ಭಾರಿ ಯಶ ಸಾಧಿಸಿತ್ತು.
ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ಫೋರ್ಡ್ ಇಕೊಸ್ಪೋರ್ಟ್ ಕೂಡಾ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿದೆ. ಹಾಗಿರುವಂತೆಯೇ ದಕ್ಷಿಣ ಕೊರಿಯಾ ಕಾರು ತಯಾರಕ ಸಂಸ್ಥೆಯಾದ ಹ್ಯುಂಡೈ ಸುಮ್ಮನೆ ಕೈಕಟ್ಟಿ ಕೂತಿರುವಂತಿಲ್ಲ. ಈ ಕಾರು ತಯಾರಕ ಸಂಸ್ಥೆಯು ಪೋರ್ಡ್ ಹಾಗೂ ರೆನೊಗೆ ಪ್ರತಿಸ್ಪರ್ಧಿ ಕಾರನ್ನು ಸಿದ್ಧಗೊಳಿಸುತ್ತಿದೆ.
ಮೂಲಗಳ ಪ್ರಕಾರ ಹ್ಯುಂಡೈ ಕಾರು ತಯಾರಕ ಸಂಸ್ಥೆಯು ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಭಾರತಕ್ಕೆ ಪರಿಚಯಿಸಲಿದೆ. ಭಾರತೀಯ ರಸ್ತೆಗಳಲ್ಲಿ ಎಸ್‌ಯುವಿ ಕಾರುಗಳಿಗೆ ಹೆಚ್ಚು ಹೊಂದಿಕೆಯಾಗುತ್ತಿರುವುದು ಇದಕ್ಕೆ ಕಾರಣವಾಗಿದೆ.
ನೂತನ ಹ್ಯುಂಡೈ ಎಸ್‌ಯುವಿ ಫ್ಲೂಯಿಡಿಕ್ ವಿನ್ಯಾಸ ಪಡೆದುಕೊಳ್ಳುವ ನಿರೀಕ್ಷೆಯಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ 2014ರ ಆರಂಭದಲ್ಲಿ ಮಾರುಕಟ್ಟೆ ಪ್ರವೇಶ ಪಡೆಯಲಿದೆ.


Click it and Unblock the Notifications









