ವಿದ್ಯುತ್ ಕಾರಿಗೆ ನೊ ಎಂದ ಫೆರಾರಿಯಿಂದ ಹೈಬ್ರಿಡ್ ಆಗಮನ
ವಿದ್ಯುತ್ ಚಾಲಿತ ಕಾರುಗಳನ್ನು ಉತ್ಪಾದಿಸುವುದಿಲ್ಲ ಎಂಬುದನ್ನು ಖಚಿತಪಡಿಸಿರುವ ಇಟಲಿ ಮೂಲದ ಐಕಾನಿಕ್ ಕಾರು ತಯಾರಕ ಸಂಸ್ಥೆಯಾಗಿರುವ ಫೆರಾರಿ, ಈ ದಶಕಕ್ಕೆ ಯೋಜಿತವಾದ ಹೈಬ್ರಿಡ್ ಕಾರುಗಳನ್ನು ಹೆಚ್ಚು ಉತ್ಪಾದಿಸುವುದಾಗಿ ಘೋಷಿಸಿದೆ.
ವಿದ್ಯುನ್ಮಾನ ನಿಯಂತ್ರಿತ ಕಾರುಗಳ ವಿರುದ್ಧದ ತನ್ನ ನಿಲುವನ್ನು ಮಗದೊಮ್ಮೆ ಖಾತ್ರಿಪಡಿಸಿರುವ ಫೆರಾರಿ, ಇದು ಹೈಬ್ರಿಡ್ ಕಾರುಗಳ ದಶಕವಾಗಿದೆ. ಸದ್ಯ ವಾಹನ ಜಗತ್ತಿನ ಭವಿಷ್ಯ ಪರಿಸರ ಸ್ನೇಹಿ ಹೈಬ್ರಿಡ್ ಕಾರುಗಳಲ್ಲಿ ನಿರ್ಭರವಾಗಿದೆ ಎಂದಿದೆ.
ಇದರಂತೆ 2013 ಮಾರ್ಚ್‌ನಲ್ಲಿ ಜಿನವಾದಲ್ಲಿ ಮೆಕ್‌ಲ್ಯಾರೆನ್ ಪಿ1 ಹಾಗೂ ಫೆರಾರಿ ಲಾಫೆರಾರಿ ಹೈಬ್ರಿಡ್ ಹೈಪರ್ ಪ್ರದರ್ಶಿಸಲಾಗಿತ್ತು. ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಮತ್ತೊಂದು ಹೈಬ್ರಿಡ್ ಕಾರಾದ ಪೋರ್ಷೆ ಸ್ಪೈಡರ್ ಆಗಮನವಾಗಲಿದೆ.
ಅದೆ ಹೊತ್ತಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೈಬ್ರಿಡ್ ಕಾರುಗಳನ್ನು ಉತ್ಪಾದಿಸುವುದಾಗಿ ಫೆರಾರಿ ಘೋಷಿಸಿದೆ. ಎಲೆಕ್ಟ್ರಿಕ್ ಕಾರುಗಳಲ್ಲಿ ನಂಬಿಕೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.


Click it and Unblock the Notifications









