ಫೆರಾರಿ ಸೂಪರ್ ಕಾರು ಸುಂದರ ಹೆಣ್ಣಿನಂತೆ: ಫೆರಾರಿ ಬಾಸ್
ಜಾಗತಿಕ ಆರ್ಥಿಕ ಹಿಂಜರಿತದಿಂದ ಪಾರಾಗಿರುವ ಫೆರಾರಿ ಇದೀಗ ಬೆಳೆದು ಬರುತ್ತಿರುವ ಮಾರುಕಟ್ಟೆ ಮೇಲೆ ಕಣ್ಣಾಯಿಸಿದೆ. ಆದರೆ ಆಕರ್ಷಕ ಕಾನ್ಸೆಪ್ಟ್ ತಯಾರಿಸುವ ನಿಟ್ಟಿನಲ್ಲಿ ಉತ್ಪನ್ನಗಳನ್ನು ಕಡಿಮೆ ಮಾಡಬೇಕಾಗುತ್ತದೆ ಎಂದು ಫೆರಾರಿ ಬಾಸ್ ಅಭಿಪ್ರಾಯಪಟ್ಟಿದ್ದಾರೆ.
"ಫೆರಾರಿ ಒಂದು ಸುಂದರ ಹೆಣ್ಣಿನಂತೆ. ಅದರತ್ತ ನಿಮ್ಮ ಆಸೆ ಇರಬೇಕು. ಇದಕ್ಕಾಗಿ ತುಡಿಯುತ್ತಿರಬೇಕು" ಎಂದು ಮುಖ್ಯಸ್ಥ ಲುಕಾ ಡಿ ಮೊಂಟೆಝೆಮೊಲೊ ತಿಳಿಸಿದ್ದಾರೆ.
ಮಾತು ಮುಂದುವರಿಸಿದ್ದ ಅವರು, ಸಂಪೂರ್ಣ ವಿದ್ಯುತ್ ಚಾಲಿತ ವಾಹನ ಸೃಷ್ಟಿ ಸಾಧ್ಯವೇ ಇಲ್ಲ. ಫೆರಾರಿಯಲ್ಲಿ ತಾನು ಮುಖ್ಯಸ್ಥನಾಗಿರುವ ಕಾಲದಲ್ಲಂತೂ ಇದು ಅಸಾಧ್ಯ ಎಂದಿದ್ದಾರೆ.
ಮುಂಬರುವ ಲಾ ಫೆರಾರಿ ಬಗ್ಗೆ ಮಾತನಾಡಿದ ಅವರು, ಇದು ಇತರ ಹೈಬ್ರಿಡ್ ಕಾರುಗಳಿಗಿಂತಲೂ ವಿಭಿನ್ನವಾಗಿರಲಿದೆ. ಇಂದು ಸಂಪೂರ್ಣ ವಿದ್ಯುತ್ ಚಾಲಿತ ಕಾರಲ್ಲಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
2012ನೇ ಆರ್ಥಿಕ ಸಾಲು ಫೆರಾರಿ ಪಾಲಿಗೆ ಶುಭಕರವಾಗಿತ್ತು. ಈ ಅವಧಿಯಲ್ಲಿ 7,318 ಯುನಿಟ್ ಮಾರಾಟವಾಗಿದ್ದವು. ಪ್ರಸಕ್ತ ಸಾಲಿನಲ್ಲಿ ಈ ವರೆಗೆ 1,798 ಯುನಿಟ್‌ಗಳಷ್ಟೇ ಸೇಲ್ ಆಗಿವೆ.


Click it and Unblock the Notifications









