ಸಣ್ಣ ಕಾರು ಲಾಂಚ್ ಮಾಡಲು ಫೋರ್ಡ್ ಯೋಜನೆ

By Nagaraja

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಸಣ್ಣ ಕಾರುಗಳಿಗೆ ಅತಿ ಹೆಚ್ಚು ಮಾರಾಟವಿದೆ. ಇದನ್ನು ಗಮನಿಸಿರುವ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ದೇಶಕ್ಕೆ ಸಣ್ಣ ಕಾರು ಪರಿಚಯಿಸಲು ಹೊರಟಿದೆ. 2015ರ ವೇಳೆಗೆ ಎಂಟು ನೂತನ ಮಾದರಿಯಗಳನ್ನು ಪರಿಚಯಿಸುವ ಯೋಜನೆಯ ಅಂಗವಾಗಿ ನೂತನ ಫೋರ್ಡ್ ಕಾರು ಆಗಮನವಾಗಲಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಇದೇ ಸಂದರ್ಭದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಕಾಯುವಿಕೆ ಅವಧಿಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಉತ್ಪನ್ನವನ್ನು ಹೆಚ್ಚಿಸುವ ಕುರಿತಾಗಿಯೂ ಕಂಪನಿ ಕಾರ್ಯಮಗ್ನವಾಗಿದೆ.

Ford plans to launch new small car in India

ವಿವಿಧ ಮಾದರಿಗಳನ್ನು ಪರಿಚಯಿಸಲು ನಾವು ಸನ್ನದ್ಧರಾಗಿದ್ದೇವೆ. ಇದು ಎಲ್ಲ ಸೆಗ್ಮೆಂಟ್ ಕಾರುಗಳನ್ನು ಹೊಂದಿರಲಿದೆ ಎಂದು ಫೋರ್ಡ್ ತಿಳಿಸಿದೆ. ಫೋರ್ಡ್ ಪಾಲಿಗೆ ಭಾರತದ ಪ್ರಯಾಣಿಕ ಕಾರು ಮಾರುಕಟ್ಟೆ ಅತಿ ಹೆಚ್ಚು ಪ್ರಾಧಾನ್ಯತೆಯನ್ನು ವಹಿಸುತ್ತಿದೆ ಎಂದು ಫೋರ್ಡ್ ಇಂಡಿಯಾ ಕಾರ್ಯನಿರ್ವಾಹಕ ಅಧ್ಯಕ್ಷ (ಮಾರ್ಕೆಟಿಂಗ್, ಸೇಲ್ಸ್ ಆಂಡ್ ಸರ್ವೀಸ್) ವಿನಯ್ ಪಿಪರ್ಸಾನಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಗಿದ್ದರೂ ಸಣ್ಣ ಕಾರು ಯಾವಾಗ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದಕ್ಕೆ ನಿಖರ ಮಾಹಿತಿ ನೀಡುವುದಕ್ಕೆ ಕಂಪನಿ ನಿರಾಕರಿಸಿದೆ. ಪ್ರಸ್ತುತ ದೇಶದಲ್ಲಿ ಫೋರ್ಡ್ ಸಣ್ಣ ಕಾರುಗಳ ಪೈಕಿ ಫಿಗೊ ಆವೃತ್ತಿ ಮಾತ್ರ ಲಭ್ಯವಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿದೆ.

More from DriveSpark

Article Published On: Thursday, December 5, 2013, 10:24 [IST]
English summary
Car maker Ford India said it is looking at introducing a small car model in the country as part of its strategy to roll out eight new products by 2015
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+