ಕೆಎಸ್‌ಆರ್‌ಟಿಸಿಯಲ್ಲಿ ಹೆಚ್ಚು ಬಾರಿ ಪ್ರಯಾಣಿಸಿದ ಪ್ರಯಾಣಿಕರಿಗೆ ಸನ್ಮಾನ
ಈ ಮೂಲಕ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್ ಸೇವೆ ಬಳಸುವಂತೆಯೇ ಪ್ರೋತ್ಸಾಹ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗಿರುವ ಕೆಎಸ್‌ಆರ್‌ಟಿಸಿ ನೀವು ಕೂಡಾ ಕೆಎಸ್‌ಆರ್‌ಟಿಸಿಯಲ್ಲಿ ಪಯಣಿಸಿ ಬಹುಮಾನ ಗೆಲ್ಲಿರಿ ಎಂಬ ಆಹ್ವಾನ ನೀಡಿದೆ.
ಇ-ಟಿಕೆಟ್ ಮೂಲಕ ಅತಿ ಹೆಚ್ಚು ಆಸನ ಕಾಯ್ದಿರಿಸಿದ ಒಟ್ಟು 20 ಪ್ರಯಾಣಿಕರನ್ನು ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರಮಾಣ ಪತ್ರ ಜತೆ ಹಿಂತಿರುಗಿ ಹೋಗಲು ಉಚಿತ ಟಿಕೆಟ್‌ಗಳನ್ನು ನೀಡಲಾಯಿತು. ದೂರದ ಊರುಗಳಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಗ್ರಾಮಕ್ಕೆ ಹಿಂತಿರುಗಲು ಕೆಎಸ್‌ಆರ್‌ಟಿಸಿ ಸೇವೆಯನ್ನು ಬಳಸುತ್ತಾರೆ. ಪಯಣಿಕರಿಗೆ ಉತ್ತಮ ಸೇವೆ ಖಾತ್ರಿಪಡಿಸುವಲ್ಲಿ ಕೆಎಸ್‌ಆರ್‌ಟಿಸಿ ಸದಾ ಬದ್ಧವಾಗಿದೆ.
ಇದೀಗ ಹೆಚ್ಚಿನ ಬಾರಿ ಪ್ರಯಾಣಿಸಿದ ಯಾತ್ರಿಕರಿಗೆ ಸನ್ಮಾನಿಸುವ ಮೂಲಕ ಹೆಸರು ಗಿಟ್ಟಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವಂತಾಗಲಿ ಎಂಬುದು ಡ್ರೈವ್ ಸ್ಪಾರ್ಕ್ ಶುಭ ಹಾರೈಕೆ!


Click it and Unblock the Notifications









