ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಕೆ‍ಎಸ್‍ಆರ್‍‍ಟಿಸಿ

ಭಾರತದಲ್ಲಿ ಮಳೆಗಾಲದಲ್ಲಿ ಭೂ ಕುಸಿತದಿಂದ ಅಥವಾ ಬೇರೆ ಕಾರಣಗಳಿಂದ ರೈಲು ಸೇವೆಯಲ್ಲಿ ವ್ಯತ್ಯಾಸವಾಗುವುದು ಅಥವಾ ಕೆಲವು ಬಾರಿ ರೈಲುಗಳ ಸಂಚಾರವನ್ನೇ ರದ್ದು ಪಡಿಸುವುದು ಸಾಮಾನ್ಯ ಸಂಗತಿಯಾಗಿದೆ. ಇದರಿಂದಾಗಿ ಬಹಳಷ್ಟು ಜನ ತೊಂದರೆಗೀಡಾಗುತ್ತಿದ್ದಾರೆ.

ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಕೆ‍ಎಸ್‍ಆರ್‍‍ಟಿಸಿ

ಇದರ ಜೊತೆಗೆ ನಿರಂತರ ಮಳೆಯ ಕಾರಣ ರಸ್ತೆ ಪ್ರಯಾಣವು ಸಹ ಅಷ್ಟು ಸುರಕ್ಷಿತವಲ್ಲ. ಇಳಿಜಾರು ರಸ್ತೆಗಳು, ಮರಗಳು ಬೇರು ಸಹಿತ ಕೆಳಗೆ ಬೀಳುವುದು, ಮಳೆಯಿಂದಾಗಿ ರಸ್ತೆಯಲ್ಲಿರುವ ವಾಹನಗಳು ಕಾಣದೇ ಇರುವ ಕಾರಣ ಅಪಘಾತಗಳೂ ಉಂಟಾಗುತ್ತಿವೆ. ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಅಧಿಕಾರಿಗಳು ತಮ್ಮ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ.

ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಕೆ‍ಎಸ್‍ಆರ್‍‍ಟಿಸಿ

ಕೆ‍ಎಸ್‍ಆರ್‍‍ಟಿ‍‍ಸಿ ಬಸ್ಸುಗಳಲ್ಲಿ ಕಂಡು ಬರುವ ಮೆಕಾನಿಕಲ್ ತೊಂದರೆಗಳನ್ನು ಪತ್ತೆಹಚ್ಚಿ ಬಸ್‌ಗಳನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸುವುದರ ಜೊತೆಗೆ, ಎಲ್ಲಾ ಚಾಲಕರು ಚಾಲನೆ ಮಾಡುವಾಗ ಹೆಚ್ಚಿನ ಪ್ರಮಾಣದ ಸುರಕ್ಷತೆಯನ್ನು ಅನುಸರಿಸುವಂತೆ ಸೂಚಿಸಲಾಗಿದೆ.

ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಕೆ‍ಎಸ್‍ಆರ್‍‍ಟಿಸಿ

ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಪ್ರತಿ ಬಸ್ ಹೊರಡುವ ಮುನ್ನ ಮೇಲಾಧಿಕಾರಿಗಳು ಎಲ್ಲಾ ಚಾಲಕರಿಗೆ ಸಲಹೆ ನೀಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ಸುಗಳು 65 ಕಿ.ಮೀ ವೇಗವನ್ನು ಮೀರಬಾರದು ಎಂಬ ಕಾರಣಕ್ಕೆ, ಎಲ್ಲಾ ಬಸ್‌ಗಳಲ್ಲಿ ಸ್ಪೀಡ್ ಮಾನಿಟರ್‌ಗಳನ್ನು ಅಳವಡಿಸಿದ್ದರೂ ಮಳೆಗಾಲದಲ್ಲಿ ಚಾಲನೆ ಮಾಡುವುದು ನಿಜಕ್ಕೂ ಸವಾಲಿನ ಕೆಲಸ.

ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಕೆ‍ಎಸ್‍ಆರ್‍‍ಟಿಸಿ

ಕೆಎಸ್ಆರ್‍‍ಟಿಸಿ ಮೈಸೂರಿನ ಗ್ರಾಮೀಣ ವಿಭಾಗದಲ್ಲಿ ವೋಲ್ವೊ ಬಸ್ಸುಗಳು ಸೇರಿದಂತೆ 700 ಬಸ್ಸುಗಳಿವೆ. ಇವುಗಳು ಪ್ರತಿದಿನ 677 ಟ್ರಿಪ್ ಪ್ರಯಾಣ ಮಾಡುತ್ತವೆ. ಪಕ್ಕದ ಜಿಲ್ಲೆಗಳಲ್ಲಿ ಮಳೆಯಿಂದ ಹೆಚ್ಚಿನ ಪ್ರಮಾಣದ ಅವಘಡಗಳಾದ ಹಿನ್ನೆಲೆಯಲ್ಲಿ, ಅಪಘಾತಗಳನ್ನು ತಡೆಗಟ್ಟಲು ಜಿಲ್ಲೆಯ ಕೆ‍ಎಸ್‍ಆರ್‍‍ಟಿ‍‍ಸಿ ಅಧಿಕಾರಿಗಳು ಮುಂಜಾಗೃತಾ ಕ್ರಮ ವಹಿಸಿದ್ದಾರೆ.

ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಕೆ‍ಎಸ್‍ಆರ್‍‍ಟಿಸಿ

ಪ್ರತಿ ಬಾರಿ ಬಸ್ ಹೊರಡುವ ಮುನ್ನ ಪ್ರತಿಕೂಲ ಹವಾಮಾನವನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಚಾಲಕರಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಮೈಸೂರಿನ ಗ್ರಾಮೀಣ ವಿಭಾಗದ ನಿಯಂತ್ರಕ ಆರ್ ಅಶೋಕ್ ಕುಮಾರ್‍‍ರವರು ತಿಳಿಸಿದ್ದಾರೆ.

ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಕೆ‍ಎಸ್‍ಆರ್‍‍ಟಿಸಿ

ಈ ಕುರಿತು ಮಾತನಾಡಿರುವ ಅವರು ಕೆಎಸ್‌ಆರ್‌ಟಿಸಿ ಚಾಲಕರು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಬಸ್ ಚಲಾಯಿಸಲು ಬೇಕಾದ ಕೌಶಲ್ಯಗಳನ್ನು ಹೊಂದಿದ್ದಾರೆ. ಆದರೆ ಮಳೆಗಾಲದಲ್ಲಿ, ಬಸ್ಸುಗಳು ರಸ್ತೆಯಿಂದ ಹೊರಹೋಗುವ ಸಾಧ್ಯತೆಗಳು ಹೆಚ್ಚು.

MOST READ: ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯವಂತೆ..!

ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಕೆ‍ಎಸ್‍ಆರ್‍‍ಟಿಸಿ

ಇದಕ್ಕಾಗಿ ಈ ರೀತಿಯ ಪರಿಸ್ಥಿತಿಗಳನ್ನು ಹೇಗೆ ಎದುರಿಸಬೇಕೆಂಬ ಬಗ್ಗೆ ಚಾಲಕರಿಗೆ ಸಲಹೆ ನೀಡಲು ನಾವು ಎಲ್ಲಾ ಡಿಪೋ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು. ಈ ರೀತಿಯ ಹವಾಮಾನದಲ್ಲಿ ಬಸ್ಸುಗಳನ್ನು ಚಲಾಯಿಸಲು ಮಾನಸಿಕವಾಗಿ ಚಾಲಕರನ್ನು ಸಿದ್ಧಪಡಿಸುವುದರ ಜೊತೆಗೆ, ವಾಹನದ ಉಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿ ಬಸ್ಸಿನ ಪ್ರತಿಯೊಂದು ಭಾಗವನ್ನು ಪರೀಕ್ಷಿಸುತ್ತಿದ್ದಾರೆ.

MOST READ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಕೆ‍ಎಸ್‍ಆರ್‍‍ಟಿಸಿ

ವೈಪರ್‌, ಹೆಡ್‌ಲೈಟ್‌, ರೂಫ್ ಹಾಗೂ ಕಿಟಕಿಗಳನ್ನು ಪರಿಶೀಲಿಸಿ ಅವುಗಳಲ್ಲಿ ಯಾವುದೇ ಲೋಪವಿಲ್ಲ ಎಂಬುದನ್ನು ಖಚಿತಪಡಿಸಿ ಕೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ, ವೈಪರ್‌ ಹಾಗೂ ಹೆಡ್‌ಲೈಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಇದರ ಜೊತೆಗೆ ಬಸ್ಸುಗಳ ಮೇಲ್ಛಾವಣಿ ಸೋರುತ್ತಿಲ್ಲ ಎಂಬುದನ್ನು ಸಹ ಪರೀಕ್ಷಿಸುತ್ತೇವೆ ಎಂದು ಕುಮಾರ್‍‍ರವರು ಹೇಳಿದ್ದಾರೆ.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಕೆ‍ಎಸ್‍ಆರ್‍‍ಟಿಸಿ

ಕೆಎಸ್‌ಆರ್‌ಟಿಸಿಯ ಮೈಸೂರು ಗ್ರಾಮೀಣ ವಿಭಾಗದ ಬಸ್‌ಗಳು 2016-2018ರ ನಡುವೆ 158 ಅಪಘಾತಗಳಲ್ಲಿ ಭಾಗಿಯಾಗಿವೆ. ಈ ಪೈಕಿ 76 ಅಪಘಾತಗಳು 2016-17ರಲ್ಲಿ ವರದಿಯಾಗಿದ್ದರೆ, 2017-18ರಲ್ಲಿ 82 ಅಪಘಾತ ಪ್ರಕರಣಗಳು ವರದಿಯಾಗಿದೆ. ಈ ಅವಧಿಯಲ್ಲಿ 120ಕ್ಕೂ ಹೆಚ್ಚು ಬಸ್ಸುಗಳು ರಸ್ತೆಗಳಲ್ಲಿ ಮುರಿದು ಬಿದ್ದಿದ್ದವು.

Most Read Articles

Kannada
English summary
Rain effect ksrtc takes Safety measures - Read in kannada
Story first published: Friday, August 9, 2019, 14:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more