ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

2017ರಲ್ಲಿ ಭಾರತವು ವಿಶ್ವದ ಅತಿದೊಡ್ಡ ವಾಹನ ತಯಾರಕರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಅಂದಿನಿಂದ ಇಂದಿನವರೆಗೆ ವಾಹನಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ವಿಶ್ವದ ಬಹುತೇಕ ಎಲ್ಲ ಕಾರು ಹಾಗೂ ಬೈಕ್ ತಯಾರಕರು ದೇಶಿಯ ಮಾರುಕಟ್ಟೆಗೆ ಕಾಲಿಡುತ್ತಿದ್ದಾರೆ. ಅವುಗಳಲ್ಲಿ ಫೆರಾರಿ, ಆಸ್ಟನ್ ಮಾರ್ಟಿನ್, ಡುಕಾಟಿ ಹಾಗೂ ಎಂ.ವಿ. ಅಗಸ್ಟಗಳಂತಹ ದೊಡ್ಡ ದೊಡ್ಡ ಕಂಪನಿಗಳು ಸೇರಿವೆ. ಆದರೆ ನಮ್ಮ ದೇಶದಲ್ಲಿ ಸರಿಯಾದ ರಸ್ತೆಗಳಂತಹ ಮೂಲಸೌಕರ್ಯಗಳ ಕೊರತೆಯಿದೆ.

ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಇರುವ ರಸ್ತೆಗಳೆಲ್ಲವೂ ಹಾಳಾಗಿದ್ದು, ಹಾಳಾಗಿರುವ ರಸ್ತೆಗಳಲ್ಲಿಯೇ ನಮ್ಮ ದೇಶದ ವಾಹನಗಳು ಚಲಿಸುತ್ತಿವೆ. ಇತ್ತೀಚಿಗೆ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದ್ದರೂ ಅಡ್ಡಾದಿಡ್ಡಿಯಾಗಿ ಓಡಾಡುವವರು, ರಸ್ತೆ ಗುಂಡಿಗಳು, ಪ್ರಾಣಿಗಳು ಹಾಗೂ ಎಲ್ಲವೂಗಳಿಗಿಂತ ಮುಖ್ಯವಾಗಿ ಜನರ ಕೆಟ್ಟ ಚಾಲನಾ ಅಭ್ಯಾಸಗಳು ವಾಹನ ಸವಾರರನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಗಳಾಗಿವೆ. ಈ ಕಾರಣಗಳಿಗಾಗಿ ಭಾರತದಲ್ಲಿ ನಿಗದಿತ ವೇಗದಲ್ಲಿ ವಾಹನ ಚಲಾಯಿಸುವಂತೆ ಸೂಚಿಸಲಾಗಿದೆ.

ನಿಗದಿತ ವೇಗದಲ್ಲಿ ವಾಹನ ಚಲಾಯಿಸುವುದರಿಂದ, ಅಪಘಾತಗಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಗ್ಯಾಲಿವಾಂಟರ್07 ಅಪ್‍‍ಲೋಡ್ ಮಾಡಿರುವ ವೀಡಿಯೊದಲ್ಲಿ ಯಮಹಾ ಆರ್15 ವಿ3 ಸವಾರನು ಹೆದ್ದಾರಿಯಲ್ಲಿ ಸವಾರಿ ಮಾಡುತ್ತಿದ್ದ ವೇಳೆಯಲ್ಲಿ ತನ್ನ ಅದೃಷ್ಟದಿಂದ ಪಾರಾದ ದೃಶ್ಯವನ್ನು ತೋರಿಸಲಾಗಿದೆ. ವೀಡಿಯೊದಲ್ಲಿ ತೋರಿಸಲಾದಂತೆ, ಬೈಕ್ ಚಾಲಕನು ಹೆದ್ದಾರಿಯಲ್ಲಿ ಅತಿ ವೇಗದಲ್ಲಿ ಹೋಗುತ್ತಿದ್ದಾನೆ.

ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಇದು ನಮ್ಮ ದೇಶದಲ್ಲಿ ಸಾಮಾನ್ಯ ಸಂಗತಿಯಾಗಿದೆ. ವೀಡಿಯೊ ಪ್ರಕಾರ, ಬೈಕ್ ಸುಮಾರು 128 ಕಿ.ಮೀ ವೇಗವನ್ನು ಹೊಂದಿತ್ತು. ರಸ್ತೆ ದಾಟಬೇಕೊ, ಬೇಡವೋ ಎಂಬ ಗೊಂದಲದಲ್ಲಿದ್ದ ಇಬ್ಬರು ಮಹಿಳೆಯರು, ಆರ್15 ಸವಾರನ ಹಾದಿಯಲ್ಲಿ ಬರುತ್ತಾರೆ. ಇದನ್ನು ನೋಡಿದಾಗ ಭಯವಾಗದೇ ಇರದು. ಇದನ್ನು ಅದೃಷ್ಟವೆನ್ನ ಬೇಕೊ ಅಥವಾ ಸವಾರನ ಕೌಶಲ್ಯವೆನ್ನ ಬೇಕೊ ಗೊತ್ತಿಲ್ಲ. ಆದರೆ ಒಂದು ಭೀಕರ ಅಪಘಾತವಾಗುವುದು ತಪ್ಪಿದೆ.

ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಚಾಲಕನು ಇಬ್ಬರು ಮಹಿಳೆಯರ ಮಧ್ಯೆ ಬೈಕ್ ಚಲಾಯಿಸಿಕೊಂಡು ಹೋಗುತ್ತಾನೆ. ಈ ಘಟನೆಯಿಂದ ಸವಾರ ಹಾಗೂ ಮಹಿಳೆಯರಿಬ್ಬರಿಗೂ ಸಾವಿನ ಅಂಚಿನಿಂದ ಪಾರಾದ ಅನುಭವವಾಗಿದೆ. ಸಾವಿನ ಸಮೀಪಕ್ಕೆ ಬಂದ ಯಾರಿಗಾದರೂ ಒಂದು ಕ್ಷಣ ಆಘಾತವಾಗದೇ ಇರದು. ಕಾರು ಚಾಲನೆ ಮಾಡುವ ಅಥವಾ ಬೈಕ್ ಸವಾರಿ ಮಾಡುವ ಪ್ರತಿಯೊಬ್ಬರೂ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ರಸ್ತೆಯಲ್ಲಿ ವಾಹನವನ್ನು ನಿಗದಿಪಡಿಸಿದ ವೇಗದಲ್ಲಿ ಏಕೆ ಚಲಾಯಿಸಬೇಕು ಎಂಬುದನ್ನು ಈ ವೀಡಿಯೊ ತೋರಿಸುತ್ತದೆ.

ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಸಾಮಾನ್ಯವಾಗಿ, ಭಾರತದ ಹೆದ್ದಾರಿಗಳಲ್ಲಿ 80ಕಿ.ಮೀ ವೇಗವನ್ನು ನಿಗದಿಪಡಿಸಲಾಗಿದೆ. ಕೆಲವು ಹೈವೇಗಳಲ್ಲಿ 120ಕಿ.ಮೀ ಮಿತಿಯನ್ನು ನಿಗದಿಪಡಿಸಲಾಗಿದೆ. ಈ ವೀಡಿಯೊದಲ್ಲಿರುವ ಯಮಹಾ ಆರ್15 ವಿ3 ನಂತಹ ಬೈಕುಗಳು 120 ಕಿ.ಮೀ ವೇಗದಲ್ಲಿ ಚಲಿಸಿ ಸಾವುನೋವುಗಳಿಗೆ ಕಾರಣವಾಗುತ್ತವೆ. ವಾಹನವನ್ನು ನೀವು ಎಷ್ಟು ಚೆನ್ನಾಗಿ ಓಡಿಸುತ್ತಿರಿ, ಸವಾರಿ ಮಾಡುತ್ತಿರಿ ಅಥವಾ ನಿಮ್ಮ ಕೌಶಲ್ಯಗಳು ಎಷ್ಟು ಚೆನ್ನಾಗಿವೆ ಎಂಬುದು ಲೆಕ್ಕಕೇ ಬರುವುದಿಲ್ಲ.

ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಯಾವುದೋ ಅನಿರೀಕ್ಷಿತ ಅಂಶಗಳು ಎದುರಾದರೆ ಹಣೆಬರಹ ಅಥವಾ ಅದೃಷ್ಟದಿಂದಷ್ಟೇ ಪಾರಾಗಬೇಕು. ವಾಹನವು ಅತಿ ವೇಗದಲ್ಲಿರುವಾಗ ಬೇರೆ ಯಾವುದೇ ವಾಹನವು ಸ್ವಲ್ಪ ಸ್ಪರ್ಶಿಸಿದರೂ ಕೂಡ ಸವಾರರ ಜೀವ ಹೋಗಬಹುದು. ಭಾರತದಲ್ಲಿರುವ ಬಹುತೇಕ ಬೈಕುಗಳು 125 ಸಿಸಿಗಿಂತ ಹೆಚ್ಚಿನ ಎಂಜಿನ್ ಹೊಂದಿವೆ. ಆದ ಕಾರಣ ಭಾರತ ಸರ್ಕಾರವು 125 ಸಿಸಿಗಿಂತ ಹೆಚ್ಚಿನ ಎಂಜಿನ್ ಹೊಂದಿರುವ ಬೈಕುಗಳಲ್ಲಿ ಎ‍‍ಬಿಎಸ್ ಕಡ್ಡಾಯವಾಗಿ ಅಳವಡಿಸುವಂತೆ ಆದೇಶ ನೀಡಿದೆ.

ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಈ ಆದೇಶದ ನಂತರ, 2019ರ ಏಪ್ರಿಲ್ ನಂತರ ತಯಾರಾಗುವ 125ಸಿಸಿಗಿಂತ ಹೆಚ್ಚಿನ ಎಂಜಿನ್ ಹೊಂದಿರುವ ಬೈಕುಗಳಲ್ಲಿ ಎಬಿಎಸ್ ಅನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತಿದೆ. ಈ ರೀತಿಯ ಆಕಸ್ಮಿಕ ಸಂದರ್ಭಗಳಲ್ಲಿ ಎಬಿಎಸ್ ಹೊಂದಿದ್ದರೆ ಅನುಕೂಲವಾಗಲಿದೆ. ಇದು ಜೀವ ಹಾಗೂ ಸಾವಿನ ನಡುವೆ ವ್ಯತ್ಯಾಸವನ್ನು ಉಂಟುಮಾಡಲಿದೆ. ಸರ್ಕಾರವು ಕಾರುಗಳನ್ನು ಸಹ ಸುರಕ್ಷಿತವಾಗಿಸಲು ಬಿಎನ್‌ಎಸ್‌ವಿಎಪಿ ಸೇರಿದಂತೆ ಹಲವು ಸುರಕ್ಷಾ ಫೀಚರ್‍‍ಗಳನ್ನು ಅಳವಡಿಸಿ ಕೊಳ್ಳುವಂತೆ ಕಾರು ತಯಾರಕರಿಗೆ ಆದೇಶ ನೀಡಿದೆ.

ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಏನೇ ಸುರಕ್ಷಾ ಫೀಚರ್‍‍‍ಗಳಿದ್ದರೂ ವಾಹನ ಸವಾರರು ಈ ನಿಟ್ಟಿನಲ್ಲಿ ಹೆಚ್ಚು ಜಾಗರೂಕರಾಗಿರದಿದ್ದರೆ, ಯಾವುದೇ ಸುರಕ್ಷಾ ಫೀಚರ್‍‍‍ಗಳು ಸಹ ನಮ್ಮನ್ನು ಕಾಪಾಡಲಾರವು. ಈ ವೀಡಿಯೊದಲ್ಲಿರುವ ಆರ್15 ಸವಾರನದು ಯಾವುದೇ ತಪ್ಪಿಲ್ಲ ಎಂದು ಹಲವರು ವಾದಿಸಬಹುದು. ಆ ಮಹಿಳೆಯರದೇ ತಪ್ಪು ಎಂದು ಹೇಳಬಹುದು. ಭಾರತೀಯ ರಸ್ತೆಗಳಲ್ಲಿ 128 ಕಿ.ಮೀ ವೇಗದಲ್ಲಿ ಸವಾರಿ ಮಾಡುವುದು ಅಪಾಯಕಾರಿ ಮಾತ್ರವಲ್ಲದೆ, ಕಾನೂನಿನ ಪ್ರಕಾರ ಶಿಕ್ಷಾರ್ಹವೂ ಆಗಿದೆ.

ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಇಂತಹ ಅಜಾಗರೂಕತನವನ್ನು ಪ್ರೋತ್ಸಾಹಿಸಬಾರದು. ನಿಮ್ಮ ಬೈಕ್‌ನ ಮಿತಿಗಳನ್ನು ಪರೀಕ್ಷಿಸಲು ಬಯಸುವುದಾದರೆ, ಟ್ರ್ಯಾಕ್‍‍ಗಳಲ್ಲಿ ಅಥವಾ ಯಾವುದೇ ಖಾಲಿ ರಸ್ತೆಗಳಲ್ಲಿ ಪರೀಕ್ಷಿಸಿರಿ. ಆ ರೀತಿಯಾಗಿ ಪರೀಕ್ಷಿಸುವುದು ಕಷ್ಟದ ಕೆಲಸವೆನಿಸಬಹುದು. ಇದರಿಂದ ನಿಮ್ಮ ವಾಹನದ ವೇಗ ಹಾಗೂ ಕಾರ್ಯಕ್ಷಮತೆಯ ಬಗ್ಗೆ ನಿಮಗೆ ತಿಳಿಯಲಿದೆ. ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತವಾಗಿರಿ ಎಂಬುದು ನಮ್ಮ ಕಳಕಳಿ.

Most Read Articles

Kannada
English summary
Yamaha R15 rider’s near miss at 128 Kph shows why speeding is so RISKY - Read in kannada
Story first published: Friday, July 19, 2019, 18:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more