ತವೆರಾ ರಿಕಾಲ್; ಜನರಲ್ ಮೋಟಾರ್ಸ್‌ಗೆ ಕೋಟಿ ಕೋಟಿ ದಂಡ?

By Nagaraja

ದೇಶದ ಇತಿಹಾಸದಲ್ಲಿ ಅತಿದೊಡ್ಡ ರಿಕಾಲ್ ನಡೆಸಿದ್ದ ಜನರಲ್ ಮೋಟಾರ್ಸ್ ಇದೀಗ ಕೇಂದ್ರ ಸರಕಾರದ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ತಾಂತ್ರಿಕ ದೋಷ ಹಿನ್ನಲೆಯಲ್ಲಿ 1.14 ಲಕ್ಷಗಳಷ್ಟು ಷೆವರ್ಲೆ ತವೆರಾ ಮಾದರಿಗಳನ್ನು ಹಿಂಪಡೆಯಲು ಅಮೆರಿಕ ಮೂಲದ ಜನರಲ್ ಮೋಟಾರ್ಸ್ ನಿರ್ಧರಿಸಿತ್ತು.

ಇದೀಗ ಜನರಲ್ ಮೋಟಾರ್ಸ್ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಸಾರಿಗೆ ಸಚಿವಾಲಯವು ಈ ಸಂಬಂಧ ಜಿಎಂ ಘಟಕ ಸ್ಥಿತಗೊಂಡಿರುವ ಗುಜರಾತ್ ಹಾಗೂ ಮಹಾರಾಷ್ಟ್ರ ಸರಕಾರಗಳಿಗೆ ಲಿಖಿತ ಬರಹವನ್ನು ರವಾನಿಸಿದೆ. ಇದರಲ್ಲಿ ಶೀಘ್ರದಲ್ಲೇ ಕ್ರಮ ಕೈಗೊಳ್ಳಲು ಕೋರಲಾಗಿದ್ದು, ಸೆಂಟ್ರಲ್ ಮೋಟಾರು ವೆಹಿಕಲ್ ಕಾಯಿದೆ (ಸಿಎಂವಿಎ) ಪ್ರಕಾರ ಅಗತ್ಯವಿದ್ದಲ್ಲಿ ಕ್ರಿಮಿನಲ್ ಕೇಸು ದಾಖಲಿಸುವ ಸಾಧ್ಯತೆಯಿದೆ.


ಸೆಕ್ಷನ್ 177 ಕಾಯಿದೆ ಪ್ರಕಾರ, ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ 100 ರು. ಹಾಗೂ ಇದನ್ನು ಆವರ್ತಿಸಿದರೆ ರು. 300 ದಂಡ ಹೇರಲಾಗುತ್ತದೆ. ಇದನ್ನು ಒಟ್ಟು ಲೆಕ್ಕ ಮಾಡಿದಾಗ ಅಂದಾಜು 3.4 ಕೋಟಿ ರು. ದಂಡ ಹೇರುವ ಸಂಭವವಿದೆ.

ಹೊಗೆ ಹೊರಸೂಸುವಿಕೆ ಹಾಗೂ ಕೆಲವು ನಿರ್ದಿಷ್ಟ ಸಮಸ್ಯೆ ತಲೆದೋರಿದ್ದರಿಂದ 2005ರಿಂದ 2013ರ ವರೆಗಿನ ಮಾಡೆಲ್‌ಗಳನ್ನು ಹಿಂಪಡೆಯಲು ಜನರಲ್ ಮೋಟಾರ್ಸ್ ನಿರ್ಧರಿಸಿತ್ತು. ತವೆರಾ ಬಿಎಸ್3 ಹಾಗೂ ಬಿಎಸ್4 ವೆರಿಯಂಟ್‌ಗಳಲ್ಲಿ ಸಮಸ್ಯೆ ತಲೆದೋರಿತ್ತು. ಈ ಸಂಬಂಧ 35 ಕಾರ್ಯ ನಿರ್ವಾಹಕರನ್ನು ಜನರಲ್ ಮೋಟಾರ್ಸ್ ಕೆಲಸದಿಂದ ವಜಾಗೊಳಿಸಿತ್ತು.

More from DriveSpark

Article Published On: Wednesday, August 7, 2013, 12:36 [IST]
English summary
Seems General Motors India's troubles over the fudging of Tavera emission details have just started as the Indian Transport Ministry initiates action against the U.S carmaker. TOI reports that GM India could be fined at least INR 3.4 crores. This is going by Rs 100 for the first offence and Rs 300 for subsequent offences.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+