1,400ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಜನರಲ್ ಮೋಟಾರ್ಸ್

ಕರೋನಾ ವೈರಸ್'ನಿಂದಾಗಿ ಹಲವು ಆಟೋ ಮೊಬೈಲ್ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಿವೆ. ಜನರಲ್ ಮೋಟಾರ್ಸ್ ಕಂಪನಿಯು ತನ್ನ ತಲೇಗಾಂವ್ ಉತ್ಪಾದನಾ ಘಟಕದಲ್ಲಿ ಇನ್ನೂ ಕಾರ್ಯನಿರ್ವಹಿಸುತ್ತಿತ್ತು.

1,400ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಜನರಲ್ ಮೋಟಾರ್ಸ್

ಈ ಘಟಕವನ್ನು ಕಳೆದ ಡಿಸೆಂಬರ್‌ನಲ್ಲಿ ಮುಚ್ಚಲಾಗಿತ್ತು ಎಂದು ವರದಿಗಳಾಗಿದ್ದವು. ತಲೇಗಾಂವ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ 1,419 ಉದ್ಯೋಗಿಗಳನ್ನು ಜನರಲ್ ಮೋಟಾರ್ಸ್ ಇಂಡಿಯಾ ವಜಾ ಮಾಡಿದೆ ಎಂದು ಈಗ ವರದಿಯಾಗಿದೆ. ಈ ಬಗ್ಗೆ ಎಲ್ಲಾ ಉದ್ಯೋಗಿಗಳಿಗೂ ಇ ಮೇಲ್ ಮೂಲಕ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

1,400ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಜನರಲ್ ಮೋಟಾರ್ಸ್

ಈ ನಿರ್ಧಾರದ ಪ್ರತಿಯನ್ನು ಜನರಲ್ ಮೋಟಾರ್ಸ್ ನೌಕರರ ಸಂಘದ ಕಾರ್ಯದರ್ಶಿ ಹಾಗೂ ಅಧ್ಯಕ್ಷರಿಗೂ ಕಳುಹಿಸಲಾಗಿದೆ. ಜನರಲ್ ಮೋಟಾರ್ಸ್ ನೌಕರರ ಸಂಘವು ಈ ಕಂಪನಿಯ ನಿರ್ಧಾರದ ಕಾನೂನು ಕ್ರಮಕ್ಕೆ ಮುಂದಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

1,400ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಜನರಲ್ ಮೋಟಾರ್ಸ್

ಈ ನಿರ್ಧಾರಕ್ಕೆ ಕಂಪನಿಯು ಕೋವಿಡ್ 19 ಕಾರಣವೆಂದು ಹೇಳಿದೆ. ಕೋವಿಡ್ 19 ನೈಸರ್ಗಿಕ ವಿಪತ್ತು ಹಾಗೂ ಕೈಗಾರಿಕಾ ವಿವಾದ ಕಾಯ್ದೆಯ ಸೆಕ್ಷನ್ 25 ಎಂ ಅಡಿಯಲ್ಲಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಯಾವುದೇ ಮಾಹಿತಿಯನ್ನು ಮೊದಲೇ ನೀಡುವ ಅಗತ್ಯವಿಲ್ಲವೆಂದು ಕಂಪನಿ ಹೇಳಿದೆ.

1,400ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಜನರಲ್ ಮೋಟಾರ್ಸ್

ಈ ಬಗ್ಗೆ ಪುಣೆಯ ನೌಕರರ ಸಂಘದ ಹೆಚ್ಚುವರಿ ಆಯುಕ್ತರಿಗೆ ಮಾಹಿತಿ ನೀಡಲಾಗಿದೆ. ಕೈಗಾರಿಕಾ ವಿವಾದ ಕಾಯ್ದೆ 1947ರಡಿಯಲ್ಲಿ ಕಂಪನಿಯ ನೌಕರರಿಗೆ ಪರಿಹಾರ ನೀಡಲಾಗುವುದು. ನೌಕರರಿಗೆ ನಾವು ಪರಿಹಾರ ನೀಡಲಿದ್ದೇವೆ ಎಂದು ಕಂಪನಿ ಹೇಳಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

1,400ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಜನರಲ್ ಮೋಟಾರ್ಸ್

ಈ ಪರಿಹಾರದಲ್ಲಿ 50%ನಷ್ಟು ಮೂಲ ವೇತನ ಹಾಗೂ ಹಿಂದಿನ ತಿಂಗಳುಗಳಲ್ಲಿ ನೀಡಲಾಗುವ ಭತ್ಯೆಗಳು ಸೇರಿವೆ. ಕಳೆದ ನಾಲ್ಕು ತಿಂಗಳಿನಿಂದ ಉತ್ಪಾದನೆ ಮಾಡದಿದ್ದರೂ ತನ್ನ ಉದ್ಯೋಗಿಗಳಿಗೆ ಸಂಬಳ ನೀಡಿರುವುದಾಗಿ ಜನರಲ್ ಮೋಟಾರ್ಸ್ ತಿಳಿಸಿದೆ.

1,400ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಜನರಲ್ ಮೋಟಾರ್ಸ್

2020ರ ಡಿಸೆಂಬರ್‌ ವೇಳೆಗೆ ಕಂಪನಿಯು ಪ್ರತಿ ತಿಂಗಳು ಸುಮಾರು ರೂ.10 ಕೋಟಿಗಳನ್ನು ನೌಕರರಿಗೆ ಸಂಬಳ ಪಾವತಿಸಲು ಖರ್ಚು ಮಾಡುತ್ತಿದೆ ಎಂದು ಹೇಳಲಾಗಿತ್ತು. ಶಾಸನಬದ್ಧ ಅಗತ್ಯಕ್ಕಾಗಿ ಉದ್ಯೋಗಿಗಳಿಗೆ ಹೆಚ್ಚುವರಿ ಬೇರ್ಪಡಿಕೆ ಪ್ಯಾಕೇಜ್ ಸಹ ಒದಗಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

1,400ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಜನರಲ್ ಮೋಟಾರ್ಸ್

ಕಂಪನಿಯು 2020ರ ಡಿಸೆಂಬರ್ 24ರಂದು ತಲೇಗಾಂವ್ ಘಟಕದಲ್ಲಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತು. ಈ ಬಗ್ಗೆ ಒಂದು ವರ್ಷ ಮುಂಚಿತವಾಗಿ ನೌಕರರಿಗೆ ನೋಟಿಸ್ ನೀಡಿರುವುದಾಗಿ ಕಂಪನಿ ತಿಳಿಸಿದೆ.

1,400ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಜನರಲ್ ಮೋಟಾರ್ಸ್

2020ರ ಆರಂಭದಲ್ಲಿ ಚೀನಾದ ಎಸ್‌ಯು‌ವಿ ತಯಾರಕ ಕಂಪನಿಯಾದ ಗ್ರೇಟ್ ವಾಲ್ ಮೋಟಾರ್ಸ್, ಜನರಲ್ ಮೋಟಾರ್ಸ್ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ತಿಳಿಸಿತ್ತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

1,400ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಜನರಲ್ ಮೋಟಾರ್ಸ್

ಆದರೆ ಕರೋನಾ ವೈರಸ್‌ ಕಾರಣದಿಂದಾಗಿ ಜಾರಿಗೊಳಿಸಲಾದ ಲಾಕ್‌ಡೌನ್'ನಿಂದಾಗಿ ಈ ಯೋಜನೆಯನ್ನು ಮುಂದೂಡಲಾಯಿತು. ಭಾರತ - ಚೀನಾ ನಡುವೆ ಗಡಿ ವಿವಾದ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಜಿಡಬ್ಲ್ಯೂಎಂ ಭಾರತದಲ್ಲಿನ ತನ್ನ ಯೋಜನೆಗಳನ್ನು ಕೈಬಿಟ್ಟಿದೆ. ಇದರಿಂದಾಗಿ ಜನರಲ್ ಮೋಟಾರ್ಸ್ ಘಟಕದ ಸ್ವಾಧೀನವನ್ನು ಸಹ ಕೈಬಿಡಲಾಗಿದೆ.

ಮೂಲ: ಇಟಿ ಆಟೋ

Most Read Articles

Kannada
English summary
General Motors dismisses more than 1400 employees. Read in Kannada.
Story first published: Monday, April 19, 2021, 15:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X