ಜನರಲ್ ಮೋಟಾರ್ಸ್ ಇಂಡಿಯಾ ಸಂಸ್ಥೆಗೆ ಹೊಸ ಸಾರಥಿ ನೇಮಕ

Written By:

ಜನರಲ್ ಮೋಟಾರ್ಸ್ ಇಂಡಿಯಾ ಸಂಸ್ಥೆಯ ನಾಯಕತ್ವ ಬದಲಾವಣೆ ಮಾಡುವುದಾಗಿ ಘೋಷಣೆ ಮಾಡಿದ್ದು, ಈ ಮೊದಲು ಇದ್ದ ಕಹಿರ್ ಖಾಜಿಮ್ ಬದಲಾಗಿ ಭಾರತೀಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಜನರಲ್ ಮೋಟಾರ್ಸ್ ಇಂಡಿಯಾ ಸಂಸ್ಥೆಗೆ ಹೊಸ ಸಾರಥಿ ನೇಮಕ

ಹೌದು, ಇಷ್ಟು ವರ್ಷಗಳ ಕಾಲ ಜನರಲ್ ಮೋಟಾರ್ಸ್ ಇಂಡಿಯಾ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ, ಕಹಿರ್ ಖಾಜಿಮ್ ಅವರನ್ನು ಕೊರಿಯಾ ಜಿಎಂ ಘಟಕದ ಅಧ್ಯಕ್ಷ ಮತ್ತು ಸಿಇಓ ಆಗಿ ನೇಮಕ ಮಾಡಿರುವ ಜನರಲ್ ಮೋಟಾರ್ಸ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಜನರಲ್ ಮೋಟಾರ್ಸ್ ಇಂಡಿಯಾ ಸಂಸ್ಥೆಗೆ ಹೊಸ ಸಾರಥಿ ನೇಮಕ

ತೆರವಾಗಿರುವ ಪ್ರತಿಷ್ಠಿತ ಸ್ಥಾನಕ್ಕೆ ಸಂಜೀವ್ ಗುಪ್ತಾ ಅವರನ್ನು ನೇಮಕ ಮಾಡಿದ್ದು, ಮುಂಬರುವ ದಿನಗಳಲ್ಲಿ ಜನರಲ್ ಮೋಟಾರ್ಸ್ ಇಂಡಿಯಾ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಜನರಲ್ ಮೋಟಾರ್ಸ್ ಇಂಡಿಯಾ ಸಂಸ್ಥೆಗೆ ಹೊಸ ಸಾರಥಿ ನೇಮಕ

ಜನರಲ್ ಮೋಟಾರ್ಸ್ ಇಂಡಿಯಾ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿರುವ ಸಂಜೀವ್ ಗುಪ್ತಾ ಮುಂಬರುವ ಸೆಪ್ಟೆಂಬರ್ ತಿಂಗಳಿನಿಂದ ಹೊಸ ಕಾರ್ಯಕ್ಕೆ ಕೈಹಾಕಲಿದ್ದಾರೆ.

ಜನರಲ್ ಮೋಟಾರ್ಸ್ ಇಂಡಿಯಾ ಸಂಸ್ಥೆಗೆ ಹೊಸ ಸಾರಥಿ ನೇಮಕ

ಸಂಜೀವ್ ಗುಪ್ತಾ ಅವರು ಹಣಕಾಸಿನ ಹೊಣೆಗಾರಿಕೆಯ ಜೊತೆಗೆ ಜಿಎಂ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಪಾತ್ರವಹಿಸಲಿದ್ದಾರೆ ಎಂದು ಕಂಪನಿ ತಿಳಿಸಿದೆ.

ಜನರಲ್ ಮೋಟಾರ್ಸ್ ಇಂಡಿಯಾ ಸಂಸ್ಥೆಗೆ ಹೊಸ ಸಾರಥಿ ನೇಮಕ

"ಸಂಜೀವ್ ಗುಪ್ತಾ ಒಬ್ಬ ಅನುಭವಿ ನಾಯಕರಾಗಿದ್ದು, ನಮ್ಮ ಕಾರ್ಯತಂತ್ರಕ್ಕೆ ವೇಗ ನೀಡುವ ಎಲ್ಲಾ ರೀತಿಯ ಪ್ರೇರಕಶಕ್ತಿಯನ್ನು ಇವರು ನೀಡಲಿದ್ದಾರೆ ಹಾಗು ಉತ್ತಮ ಹಣಕಾಸು ಸಾಧನೆ ಮಾಡುವ ಯೋಜನೆಗೆ ಸಹಕಾರಿಯಾಗಲಿದೆ" ಎಂದು ಜಿಎಂ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಜಿಎಂ ಅಂತರರಾಷ್ಟ್ರೀಯ ಅಧ್ಯಕ್ಷರಾದ ಸ್ಟೀಫನ್ ಜಾಕಬ್ಯ್ ತಿಳಿಸಿದ್ದಾರೆ.

ಜನರಲ್ ಮೋಟಾರ್ಸ್ ಇಂಡಿಯಾ ಸಂಸ್ಥೆಗೆ ಹೊಸ ಸಾರಥಿ ನೇಮಕ

ಜನರಲ್ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಮಾರಾಟ ಯೋಜನೆಗಳನ್ನು ಹಿಂಪಡೆದಿರುವುದಾಗಿ ಘೋಷಿಸಿತು. ಆದಾಗ್ಯೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಾರುಗಳನ್ನು ಜಿಎಂ ರಫ್ತು ಮಾಡುತಿದ್ದು, ನಾಯಕತ್ವ ಬದಲಾವಣೆ ಹೆಚ್ಚು ಸುದ್ದಿ ಪಡೆದುಕೊಂಡಿತ್ತು.

English summary
General Motors India has announced a change in leadership — Sanjiv Gupta will take over the position as the President and Managing Director.
Story first published: Thursday, August 17, 2017, 19:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark