ಷೆವರ್ಲೆ ಸ್ಪಾರ್ಕ್ ಅಲ್ಲಲ್ಲ ಹೊಸ ಬೀಟ್ ಆಗಮನ ಖಚಿತ
ವಾಹನ ಪ್ರಿಯರಿಗೆ ಇಲ್ಲಿ ಎರಡು ಸುದ್ದಿಗಳಿವೆ. ಒಂದು ಸಿಹಿಯಾದರೆ ಇನ್ನೊಂದು ಕಹಿ. ಒಂಥರ ಬೇವು ಬೆಲ್ಲದ ಬೆರಕೆ. ಅಮೆರಿಕದ ಪ್ರತಿಷ್ಠಿತ ವಾಹನ ತಯಾರಕ ಕಂಪನಿಯಾಗಿರುವ ಜನರಲ್ ಮೋಟಾರ್ಸ್ ಮುಂದಿನ ಜನಾಂಗದ ನೂತನ ಷೆವರ್ಲೆ ಸ್ಪಾರ್ಕ್ (ಭಾರತದಲ್ಲಿ ಬೀಟ್) ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ.
ಆದರೆ 2015ರ ವೇಳೆಗಷ್ಟೇ ಇದನ್ನು ಪಡೆಯುವ ಅವಕಾಶ ಗ್ರಾಹಕರಿಗಿರಲಿದೆ ಎಂಬುದು ಸ್ವಲ್ಪ ಬೇಸರದ ಸಂಗತಿಯಾಗಿದೆ.
2009ರಲ್ಲಿ ಜಾಗತಿಕವಾಗಿ ಬಿಡುಗಡೆಗೊಂಡಿದ್ದ ಷೆವರ್ಲೆ ಬೀಟ್ ಭಾರತದಲ್ಲಿ ನಿರೀಕ್ಷಿಸಿದಷ್ಟು ಯಶ ಸಾಧಿಸುವಲ್ಲಿ ಸಾಧ್ಯವಾಗಲಿಲ್ಲ. ಆದರೆ ಇದರ ಕಾಂಪಾಕ್ಟ್ ಹಾಗೂ ಸ್ಪೋರ್ಟಿ ಲುಕ್‌ನಿಂದಾಗಿ ಇತರ ರಾಷ್ಟ್ರಗಳಲ್ಲಿ ಉತ್ತಮ ನಿರ್ವಹಣೆ ನೀಡುವಲ್ಲಿ ಯಶಸ್ವಿಯಾಗಿತ್ತು.
ಅಂದ ಹಾಗೆ ಜಾಗತಿಕವಾಗಿ ಷೆವರ್ಲೆ ಸ್ಪಾರ್ಕ್ ಫೇಸ್‌ಲಿಫ್ಟ್ ವರ್ಷನ್ ಪರಿಚಯವಾಗಿದ್ದರೂ ಭಾರತದಲ್ಲಿ ಮಾತ್ರ ಇನ್ನು ಬದಲಾಗಿರಲಿಲ್ಲ. ಇದೀಗ ಮುಂದಿನ ಜನಾಂಗದ ಷೆವಿ ಬೀಟ್ ಆಗಮನದೊಂದಿಗೆ ಈ ಕೊರತೆಯನ್ನು ನೀಗಿಸಲಿದೆ.


Click it and Unblock the Notifications









