ಮತ್ತೆ ರೋಡ್‌ಗಿಳಿಯಲಿರುವ ದೇಶದ ರಸ್ತೆಗಳ ರಾಜ 'ಅಂಬಿ'

By Nagaraja

ಇಂದಿನ ಹೊಸ ಪೀಳಿಗೆಯು ಅಂಬಾಸಿಡರ್ ಕಾರು ಬಗ್ಗೆ ಹೆಚ್ಚು ತಿಳಿದುಕೊಂಡಿರಲಾರರು. ಆದರೂ ಹಳೆ ಸಿನೆಮಾ ನೋಡುವವರಿಗೆ ಖಂಡಿತವಾಗಿಯೂ ಅಂಬಾಸಿಡರ್ ಕಾರಿನ ಬಗ್ಗೆ ಸ್ಪಷ್ಟ ಅರಿವಿರಬಹುದು.

'ಭಾರತೀಯ ರಸ್ತೆಯ ರಾಜ' ಎಂದೇ ಬನ್ನಿಸಲ್ಪಟ್ಟಿರುವ ಅಂಬಾಸಿಡರ್ ಕಾರುಗಳನ್ನು 'ಅಂಬಿ' ಎಂಬ ನೆಚ್ಚಿನ ಹೆಸರಿನಿಂದ ಕರೆಯಲಾಗುತ್ತದೆ. ಅಂದ ಹಾಗೆ ಒಂದು ಕಾಲಘಟ್ಟದಲ್ಲಿ ದೇಶದ ಫೇವರಿಟ್ ಅಥವಾ ಪ್ರಖ್ಯಾತ ಕಾರು ಮಾಡೆಲ್ ಎನಿಸಿಕೊಂಡಿದ್ದ ಅಂಬಾಸಿಡರ್ ನೂತನ ವಿನ್ಯಾಸದೊಂದಿಗೆ ಮತ್ತೆ ರಸ್ತೆಗಿಳಿಯಲು ಸಜ್ಜಾಗುತ್ತಿದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ಮುಂದಿನ ವರ್ಷ ಅಂಬಾಸಿಡರ್ ಹ್ಯಾಚ್‌ಬ್ಯಾಕ್ ವರ್ಷನ್ ರಸ್ತೆ ಪ್ರವೇಶಿಸಲಿದೆ.

ಹಿಂದೂಸ್ತಾನ್ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿರುವ ಉತ್ತಮ್ ಬೋಸ್ ಇದನ್ನು ಸ್ಪಷ್ಟಪಡಿಸಿದ್ದು, ಪ್ರಸ್ತುತ ಸಂಶೋಧನಾ ಹಾಗೂ ಅಭಿವೃದ್ಧಿ ಹಂತದಲ್ಲಿದೆ ಎಂದಿದ್ದಾರೆ.


ಏನಿರಲಿದೆ ಸ್ಪೆಷಲ್..?
ನೂತನ ಅಂಬಾಸಿಡರ್ ಹ್ಯಾಚ್‌ಬ್ಯಾಕ್ ವರ್ಷನ್‌ ಆಧುನಿಕ ಗ್ರಾಹಕರು ಬಯಸುವಂತಹ ಸುಧಾರಿತ ಇಂಟಿರಿಯರ್ ಫೀಚರ್ಸ್ ಹೊಂದಿರಲಿದೆ. ಆದರೆ ಜನಪ್ರಿಯ ಬ್ರಾಂಡ್ ಹೆಸರು ಮಾತ್ರ ಉಳಿಸಿಕೊಳ್ಳಲಿದೆ. ಈಗಿರುವ ಪ್ಲಾಟ್ ಫಾರ್ಮ್‌ನಲ್ಲೇ ಅಂಬಾಸಿಡರ್ ಹ್ಯಾಚ್‌ಬ್ಯಾಕ್ ಕಾರು ನಿರ್ಮಾಣವಾಗಲಿದೆ. ಪ್ರಸ್ತುತ ಕಾರು ಸದ್ಯ ಡಿಸೈನ್ ಹಂತದಲ್ಲಿದೆ.

ಇದೇ ಸಂದರ್ಭದಲ್ಲಿ ಮುಂಬರುವ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಈಗಿರುವ ಮಾಡೆಲ್‌ಗೆ ನೂತನ ಬಿಎಸ್ IV ಕಂಪ್ಲೈಂಟ್ ಡೀಸೆಲ್ ಎಂಜಿನ್ ಆಳವಡಿಸುವುದಾಗಿ ಬೋಸ್ ತಿಳಿಸಿದ್ದಾರೆ. ಪ್ರಸ್ತುತ ಬಿಎಸ್ III ಕಂಪ್ಲೈಂಟ್ ಡೀಸೆಲ್ ಎಂಜಿನ್ ಬಳಸಲಾಗುತ್ತಿದೆ.

ಮಾತು ಮುಂದುವರಿಸಿದ ಬೋಸ್, ಮುಂದಿನ ಆರ್ಥಿಕ ಸಾಲಿನ ಎರಡನೇ ತ್ರೈಮಾಸಿಕ ಅವಧಿಯ ಅಂತ್ಯದಲ್ಲಿ ನಾಲ್ಕು ಮೀಟರ್ ವರ್ಷನ್ ಹಾಗೆಯೇ ಮುಂದಿನ ಆರ್ಥಿಕ ಸಾಲಿನ ಅಂತ್ಯದಲ್ಲಿ ಸಂಪೂರ್ಣವಾಗಿಯೂ ಹೊಸ ಮಾಡೆಲ್ ಆಗಮನವಾಗಲಿದೆ ಎಂದಿದ್ದಾರೆ.

ಈ ಎಲ್ಲ ಘೋಷಣೆಗಳು ಮಾರಾಟದಲ್ಲೂ ಪ್ರಗತಿ ಸಾಧಿಸಲು ನೆರವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಾಗ (310) ಈ ಬಾರಿಯ ಫೆಬ್ರವರಿ ತಿಂಗಳಲ್ಲಿ 826 ಯುನಿಟ್ ಮಾರಾಟ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.

More from DriveSpark

Article Published On: Wednesday, March 20, 2013, 10:45 [IST]
English summary
India's iconic car model, the good old Ambassador will soon have a younger and smaller cousin. Coming late this year or early next year will be a new hatchback version of the sedan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+