ಹಿಂದೂಸ್ತಾನ್ ಘಟಕದಲ್ಲಿ ಇಸುಝು ಎಸ್‌ಯುವಿ ಟಚಪ್
ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿರುವ ಜಪಾನ್ ಮೂಲದ ವಾಹನ ಉತ್ಪಾದಕ ಸಂಸ್ಥೆಯಾಗಿರುವ ಇಸುಝು ದೇಶದಲ್ಲಿ ಸ್ಥಳೀಯವಾಗಿ ವಾಹನ ಉತ್ಪಾದಿಸುವ ಬೃಹತ್ ಯೋಜನೆ ಹೊಂದಿದೆ. ಇದರ ಅಂಗವಾಗಿ ಚೆನ್ನೈನಲ್ಲಿ ನೂತನ ಘಟಕದ ತೆರೆದುಕೊಳ್ಳುವ ಇರಾದೆಯಲ್ಲಿದೆ.
ನೂತನ ಘಟಕ ಕಾರ್ಯಾರಂಭಗೊಳ್ಳಲು ಕೆಲವು ಸಮಯ ಬೇಕಾಗಿರುವುದರಿಂದ ಅಲ್ಲಿಯ ವರೆಗೆ ತಮ್ಮ ವಾಣಿಜ್ಯ ವಾಹನಗಳನ್ನು ಹಿಂದೂಸ್ತಾನ್ ಮೋಟಾರ್ಸ್ ಘಟಕದಲ್ಲಿ ಜೋಡಣೆ ಮಾಡಲು ಕಂಪನಿ ನಿರ್ಧರಿಸಿದೆ. ಪ್ರಸ್ತುತ ಒಪ್ಪಂದ ಪ್ರಕಾರ ಇಸುಝು ಎಂಯು-7 ಎಸ್‌ಯುವಿ ಹಾಗೂ ಡಿ ಮ್ಯಾಕ್ಸ್ ಪಿಕ್ ಅಪ್ ಟ್ರಕ್‌ಗಳು ತಿರುವಲ್ಲೂರಿನ ಹಿಂದೂಸ್ತಾನ್ ಮೋಟಾರ್ಸ್ ಘಟಕದಲ್ಲಿ ಉತ್ಪಾದನೆಯಾಗಲಿದೆ.
ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ವ್ಯವಸ್ಥೆ ಮೂಖಾಂತರ ಥಾಯ್ಲೆಂಡ್‌ನಿಂದ ಭಾರತಕ್ಕೆ ಸಾಗಾಣೆಯಾಗಲಿರುವ ಇಸುಝು ವಾಹನಗಳು ಹಿಂದೂಸ್ತಾನ್ ಮೋಟಾರ್ಸ್ ಘಟಕದಲ್ಲಿ ಜೋಡಣೆಯಾಗಲಿದೆ.
ನಿಮ್ಮ ಮಾಹಿತಿಗಾಗಿ, ಹಿಂದೂಸ್ತಾನ್ ಮೋಟಾರ್ಸ್ ಚೆನ್ನೈ ಘಟಕದಲ್ಲೇ ಮಿಟ್ಸುಬಿಸಿ ವಾಹನಗಳು ಸಹ ಉತ್ಪಾದನೆಯಾಗುತ್ತಿದೆ. ಇದರಿಂದ ಭಾರತದ ಕಾರು ಉದ್ದಿಮೆಯು ಸಂಕಷ್ಟದ ಪರಿಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ ಉತ್ತಮ ಲಾಭಾಂಶವನ್ನು ಕಾಪಾಡಿಕೊಳ್ಳಲು ಇದರಿಂದ ಹಿಂದೂಸ್ತಾನ್ ಮೋಟಾರ್ಸ್‌ಗೆ ನೆರವಾಗಲಿದೆ.

Isuzu MU-7 SUV
ಇಸುಝು ಎಂಯು-7 ಎಸ್‌ಯುವಿ

Isuzu D-Max pickup truck
ಇಸುಝಉ ಡಿ ಮ್ಯಾಕ್ಸ್ ಪಿಕಪ್ ಟ್ರಕ್


Click it and Unblock the Notifications








