ನಿರೀಕ್ಷಿಸಿ; ಹೋಂಡಾ ಎಟಿವಿ ವಾಹನ ಭಾರತಕ್ಕೆ

By Nagaraja

ಜಗತ್ತಿನ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಕಂಪನಿ, ಭಾರತದಲ್ಲಿ ವರ್ಧಿಸುತ್ತಿರುವ ಬೇಡಿಕೆಯನ್ನು ಪರಿಗಣಿಸಿ ಹೈ ಎಂಡ್ ಆಲ್ ಟರೈನ್ ವೆಹಿಕಲ್ (ಎಲ್ಲ ಭೂಪ್ರದೇಶಕ್ಕೆ ಹೊಂದಿಕೆಯಾಗುವ ವಾಹನ) ಪರಿಚಿಸುವ ಇರಾದೆ ಹೊಂದಿದೆ.

ಭಾರತದಲ್ಲಿ ಆಲ್ ಟರೈನ್ ವಹೆಕಲ್ ಮಾರಾಟ ವಾರ್ಷಿಕವಾಗಿ 1,200ರಷ್ಟಿದೆ. ನಿಮ್ಮ ಮಾಹಿತಿಗಾಗಿ, ಸಿಂಗಲ್ ಸೀಟಿನ ಈ ವಾಹನ 8ರಿಂದ 13 ಲಕ್ಷ ರು.ಗಳಷ್ಟು ದುಬಾರಿಯಾಗಿದೆ. ಹಾಗೆಯೇ ನಾಲ್ಕರಿಂದ ಆರು ಜನರು ಕುಳಿತುಕೊಳ್ಳುವ ದೊಡ್ಡ ಎಟಿವಿ ವಾಹನಗಳು 28 ಲಕ್ಷ ರು.ಗಳಷ್ಟು ಬೆಲೆಬಾಳುತ್ತಿದೆ. ಅಂದರೆ ಇದು ಲಗ್ಷುರಿ ಸೆಡಾನ್ ಕಾರಿಗಿಂತಲೂ ದುಬಾರಿಯಾಗಲಿದೆ.

ಹೋಂಡಾ ಆಲ್ ಟರೈನ್ ವೆಹಿಕಲ್

ನಿಮಗೆಲ್ಲರಿಗೂ ತಿಳಿದಿದ್ದ ಹಾಗೆ ದೇಶದ ದ್ವಿಚಕ್ರ ಪ್ರಯಾಣಿಕ ವಾಹನ ವಿಭಾಗದಲ್ಲಿ ಹೋಂಡಾ ಬಹುದೊಡ್ಡ ಪಾತ್ರ ವಹಿಸುತ್ತಿದೆ. ಇನ್ನೊಂದೆಡೆ ಜಾಗತಿಕವಾಗಿ ಎಟಿವಿ ವಿಭಾಗದಲ್ಲಿ ಅಮೆರಿಕ ಮೂಲಕ ಪೊಲರಿಸ್ ನಂತರದ ಎರಡನೇ ಸ್ಥಾನ ಪಡೆದುಕೊಂಡಿದೆ.

ಹೋಂಡಾ ಆಲ್ ಟರೈನ್ ವೆಹಿಕಲ್

ಕಳೆದ ಒಂದೆರಡು ವರ್ಷಗಳಲ್ಲಿ ಪೊಲರಿಸ್ ವಾಹನಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚುತ್ತಲೇ ಇವೆ. ಇದು ಸತ್ಕಾರ ವಲಯ, ಸಾಹಸ ಉದ್ಯಾನವನ ಹಾಗೂ ಆಫ್ ರೋಡಿಂಗ್ ಉತ್ಸಾಹಿಗಳಿಂದ ಸ್ಥಿರ ಬೇಡಿಕೆಯನ್ನು ಕಾಯ್ದುಕೊಂಡಿದೆ.

ಹೋಂಡಾ ಆಲ್ ಟರೈನ್ ವೆಹಿಕಲ್

ಇದೀಗ ಭಾರತದ ಎಟಿವಿ ಹೈ ಎಂಡ್ ವಾಹನ ವಿಭಾಗದಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಹೊರಟಿರುವ ಹೋಂಡಾವು ಸಕ್ರಿಯ ಮಾರುಕಟ್ಟೆ ಹೊಂದುವ ನಿರೀಕ್ಷೆಯಲ್ಲಿದೆ.

ಹೋಂಡಾ ಆಲ್ ಟರೈನ್ ವೆಹಿಕಲ್

ತೆರೆದುಕೊಂಡಿರುವ ವಿನ್ಯಾಸ ಹೊಂದಿರುವ ಎಟಿವಿ ವಾಹನಗಳು ದೊಡ್ಡದಾದ ಚಕ್ರಗಳನ್ನು ಹೊಂದಿರುತ್ತವೆ. 2011ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಟಿದ್ದ ಪೊಲರಿಸ್ ಈಗಾಗಲೇ ಭಾರತದಲ್ಲಿ ಉತ್ತಮ ಮಾರಾಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹೋಂಡಾ ಆಲ್ ಟರೈನ್ ವೆಹಿಕಲ್

ಇವೆಲ್ಲವೂ ಆಲ್ ಟರೈನ್ ವೆಹಿಕಲ್ ಯಶಸ್ಸಿಗೆ ಸಾಕ್ಷಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಭಾಗದಲ್ಲೂ ಹೆಚ್ಚಿನ ಪೈಪೋಟಿ ಕಂಡುಬರುವ ನಿರೀಕ್ಷೆಯಿದೆ.

Article Published On: Tuesday, October 15, 2013, 13:57 [IST]
English summary
Honda Motor Company is planing to bring its high-end all terrain vehicles (ATVs) to India to cash in on the rising demand for such vehicles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+