ಹೋಂಡಾದ ಮೊದಲ ಡೀಸೆಲ್ ಕಾರು ಸದ್ಯದಲ್ಲೇ ನಿರೀಕ್ಷಿಸಿ

ಮುಂಬರುವ ಎಪ್ರಿಲ್ 16ರಂದು ನೂತನ ಹೋಂಡಾ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರು ಲಾಂಚ್ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಅನ್ವಯವಾಗಿರುವಂತೆಯೇ ದೇಶದ್ಯಾಂತ ಸ್ಥಿತಗೊಂಡಿರುವ ಹೋಂಡಾ ಡೀಲರ್‌ಶಿಪ್‌ಗಳಲ್ಲಿ ಈಗಾಗಲೇ ಬುಕ್ಕಿಂಗ್ ಕಾರ್ಯ ಆರಂಭಗೊಂಡಿದೆ.

ಹಾಗಿದ್ದರೂ ಕಂಪನಿಯಿಂದ ಯಾವುದೇ ಅಧಿಕೃತ ದಿನಾಂಕ ಬಿಡುಗಡೆಗೊಂಡಿಲ್ಲ. ಹೋಂಡಾ ಕಂಪನಿಯಿಂದ ದೇಶದಲ್ಲಿ ಬಿಡುಗಡೆಯಾಗಲಿರುವ ಮೊದಲ ಡೀಸೆಲ್ ಎಂಜಿನ್ ಕಾರು ಇದಾಗಿರಲಿದೆ. ಇದು ದೇಶದ ಎಂಟ್ರಿ ಲೆವೆಲ್ ಸೆಡಾನ್ ಕಾರುಗಳಲ್ಲಿ ದೊಡ್ಡ ಪರಿಣಾಮ ಬೀರುವ ನಿರೀಕ್ಷೆಯಿದೆ.

ಬ್ರಿಯೊ ಸಣ್ಣ ಕಾರು ಆಧಾರವಾಗಿಟ್ಟುಕೊಂಡು ಹೋಂಡಾ ಅಮೇಜ್ ನಿರ್ಮಿಸಲಾಗಿದೆ. ಹಾಗಿದ್ದರೂ ಗ್ರಾಹಕರು ಸೆಡಾನ್ ವರ್ಷನಲ್ಲಿರುವ ಕಾರನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪರಿಷ್ಕೃತ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್ ಹಾಗೂ ಒಳಾಂಗಣ ಭಾಗದಲ್ಲಿ ಹೆಚ್ಚಿನ ಸ್ಥಳಾವಕಾಶವನ್ನು ಹೊಂದಿದೆ. ಪ್ರಸ್ತುತ ಕಾರು ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್‌ಗೆ ಕಠಿಣ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಹೋಂಡಾ ಅಮೇಜ್ 1.5 ಲೀಟರ್ ಡೀಸೆಲ್ ಹಾಗೂ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. 2013-14 ಸಾಲಿನ ಬಜೆಟ್‌ನಲ್ಲಿ 1500 ಸಿಸಿಗಿಂತಲೂ ಮೇಲ್ಪಟ್ಟ ಎಂಜಿನ್‌ಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಿರುವುದರಿಂದ ಹೋಂಡಾ ಅಮೇಜ್ ಸ್ವಲ್ಪ ದುಬಾರಿಯಾಗುವ ಸಾಧ್ಯತೆಯಿದೆ.

More from DriveSpark

Article Published On: Wednesday, March 13, 2013, 14:12 [IST]
English summary
Honda will launch its Amaze compact sedan on April 16th, says Autocar India citing sources. While Honda dealerships in many parts of the country have already started accepting bookings, the automaker has still not let out the official word about the launch date.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+