ಹೋಂಡಾ ಅಮೇಜ್ ಬರಮಾಡಿಕೊಳ್ಳಲು ಸನ್ನದ್ಧರಾಗಿ

ಭಾರತೀಯ ಆಟೋ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿರುವ ಬಹುನಿರೀಕ್ಷಿತ ಹೋಂಡಾ ಅಮೇಜ್ ಸೆಡಾನ್ ಡೀಸೆಲ್ ಕಾರು ನಾಳೆ ಅಂದರೆ ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಲಾಂಚ್ ಆಗಲಿದೆ.

ಈಗಾಗಲೇ ಭಾರಿ ಸಂಖ್ಯೆಯಲ್ಲಿ ಮುಂಗಡ ಬುಕ್ಕಿಂಗ್ ಗಿಟ್ಟಿಸಿಕೊಂಡಿರುವ ಹೋಂಡಾ ಅಮೇಜ್ ಸ್ಪರ್ಧಾತ್ಮಕ ದರದಲ್ಲಿ ಆಗಮನವಾದರೆ ಮಾರುಕಟ್ಟೆಯಲ್ಲಿ ಇನ್ನಷ್ಟು ಹೆಚ್ಚು ಸದ್ದು ಮಾಡಲಿದೆ. ಹಾಗಾಗಿ ಕಾರು ವಿಶ್ಲೇಷಕರು ಇದರ ದರವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಇದು ಜಪಾನ್ ವಾಹನ ತಯಾರಕ ಕಂಪನಿಯಿಂದ ದೇಶಕ್ಕೆ ಪರಿಚಯವಾಗಲಿರುವ ಮೊದಲ ಡೀಸೆಲ್ ಕಾರಾಗಿದೆ. ಇದರಲ್ಲಿ 1.5 ಡೀಸೆಲ್ ಐ-ಡಿಟೆಕ್ ಎಂಜಿನ್ ಆಳವಡಿಸಲಾಗಿದೆ.

ಇನ್ನು ಕಾರಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆಗೊಳಿಸದಿರುವುದು ಇನ್ನಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರಮುಖವಾಗಿಯೂ ಮಾರುತಿ ಸ್ವಿಫ್ಟ್ ಡಿಜೈರ್ ಪ್ರತಿಸ್ಪರ್ಧಿಯಾಗಿ ಹೋಂಡಾ ಅಮೇಜ್ ಕಾಣಿಸಿಕೊಂಡಿದೆ.

ಕಂಪನಿಯ ಪ್ರಕಾರ 98 ಹಾರ್ಸ್ ಪವರ್ ಉತ್ಪಾದಿಸುವ ಹೋಂಡಾ ಅಮೇಜ್ ಪ್ರತಿ ಲೀಟರ್‌ಗೆ ಗರಿಷ್ಠ 25.8 ಕೀ.ಮೀ. ಮೈಲೇಜ್ ನೀಡುವ ಕ್ಷಮತೆ ಹೊಂದಿದೆ. ಇಲ್ಲೂ ಸ್ವಿಫ್ಟ್ ಮೀರಿಸುವಲ್ಲಿ ಹೋಂಡಾ ಯಶಸ್ವಿಯಾಗಿದೆ.

ಮೂಲಗಳ ಪ್ರಕಾರ ಹೋಂಡಾ ಅಮೇಜ್ ಆಕರ್ಷಕ ಆಫರ್‌ಗಳೊಂದಿಗೆ ಆಗಮನವಾಗಲಿದೆ. ಇದರಲ್ಲಿ ಎರಡು ವರ್ಷಗಳ ನಿರ್ವಹಣಾ ಪ್ಯಾಕೇಜ್, ವಿಸ್ತರಿತ ವ್ಯಾರಂಜಿ ಸ್ಕೀಮ್, ರೋಡ್ ಸೈಡ್ ಅಸಿಸ್ಟಂಟ್ ಪ್ರೋಗ್ರಾಂ ಸೇರಿಕೊಳ್ಳುವ ನಿರೀಕ್ಷೆಯಿದೆ.
ತಾಜಾ ಸುದ್ದಿಗಾಗಿ ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿರಿ

More from DriveSpark

Article Published On: Wednesday, April 10, 2013, 15:44 [IST]
English summary
Automobile major Honda will launch its entry level sedan 'Amaze' on Thursday. The booking of the car that has already been made open has garnered a lot of attraction from the buyers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+