ಹೋಂಡಾ ಬ್ರಿಯೊ 'ವಿಎಕ್ಸ್' ಟಾಪ್ ವೆರಿಯಂಟ್ ಸೇರ್ಪಡೆ
ನೂತನ ವೆರಿಯಂಟ್‌ನಲ್ಲಿ ಹೆಚ್ಚಿನ ವೈಶಿಷ್ಟ್ಯಗಳಿಲ್ಲ. ಆದರೂ ಚಾಲಕ ಸೀಟ್ ಎತ್ತರ ಹೊಂದಾಣಿಸಿಬಹುದಾದ ಹಾಗೂ ಹಿಂದುಗಡೆ ವಿಂಡ್ ಶೀಲ್ಡ್ ಡಿಫಾಗರ್ ಆಯ್ಕೆಗಳು ಲಭ್ಯವಿರುತ್ತದೆ.
ಹೋಂಡಾ ಬ್ರಿಯೊ ಫೋರ್ ಸಿಲಿಂಡರ್ 1.2 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ 88 ಪಿಎಸ್ (109 ಎನ್‌ಎಂ) ಪವರ್ ಉತ್ಪಾದಿಸಲಿದೆ. ಹಾಗೆಯೇ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ವರ್ಷನ್‌ಗಳಲ್ಲಿ ಫೈವ್ ಸ್ಪೀಡ್ ಯುನಿಟ್ ಲಭ್ಯವಿದೆ.
ಕಳೆದ ಆರ್ಥಿಕ ಸಾಲಿನಲ್ಲಿ 32,000 ಸಂತೃಪ್ತ ಗ್ರಾಹಕರನ್ನು ಹೊಂದಿರುವ ಹೋಂಡಾ ಬ್ರಿಯೊ, ದೇಶದಲ್ಲಿ ಪ್ರಮುಖವಾಗಿಯೂ ಮಾರುತಿ ಸ್ವಿಫ್ಟ್‌ಗಳಂತಹ ಜನಪ್ರಿಯ ಮಾಡೆಲ್‌ಗಳ ವಿರುದ್ಧ ಸ್ಪರ್ದೆ ನಡೆಸುತ್ತಿದೆ. ಇದೀಗ ನೂತನ ವೆರಿಯಂಟ್ ಕಂಪನಿಯ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಯನ್ನು ಹೋಂಡಾ ಹೊಂದಿದೆ.
ವೆರಿಯಂಟ್, ದರ ಮಾಹಿತಿ:
EMT- 4,12,000 ಲಕ್ಷ ರು.
EX MT- 4,28,000 ಲಕ್ಷ ರು.
S MT - 4,60,500 ಲಕ್ಷ ರು.
V MT- 5,06,000 ಲಕ್ಷ ರು.
VX MT- 5,34,500 ಲಕ್ಷ ರು.
VX AT- 6,12,500 ಲಕ್ಷ ರು.


Click it and Unblock the Notifications









