ಮೊಬಿಲಿಯೊ, ವೆಜೆಲ್, ಜಾಝ್ ಇಂಡಿಯಾ ಲಾಂಚ್ ಖಚಿತ
2014ರ ಫ್ರೆಬವರಿ ತಿಂಗಳಲ್ಲಿ ನಡೆಯಲಿರುವ ಇಂಡಿಯಾ ಆಟೋ ಎಕ್ಸ್ ಪೋ ಹೇಗೆ ಭಾರತೀಯ ಮಾರುಕಟ್ಟೆಯ ದೃಷ್ಟಿಕೋನದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಗಿಟ್ಟಿಸಿಕೊಂಡಿದೆಯೋ ಅದೇ ರೀತಿ ಇದರಲ್ಲಿ ಭಾಗವಹಿಸಲಿರುವ ಜಪಾನ್‌ನ ದೈತ್ಯ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಪಾಲಿಗೂ ಮುಂಬರುವ ಆಟೋ ಶೋ ಅಷ್ಟೇ ಮಹತ್ವದೆನಿಸಿದೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಯಾಕೆಂದರೆ ಈ ಬಹುನಿರೀಕ್ಷಿತ ವಾಹನ ಪ್ರದರ್ಶನ ಮೇಳದಲ್ಲಿ ಹೊಸ ಸಗ್ಮೆಂಟ್‌ಗಳಿಗೆ ಕಾಲಿಡಲು ಹೋಂಡಾ ಮುಹೂರ್ತ ಫಿಕ್ಸ್ ಮಾಡಲಿದೆ. ಅಂದರೆ ಮಲ್ಟಿ ಪರ್ಪಸ್ ಹಾಗೂ ಕ್ರೀಡಾ ಉತ್ಪಾದಕ ವಾಹನಗಳ ವಿಭಾಗಗಳಿಗೆ ಪ್ರವೇಶಿಸಲಿರುವ ಹೋಂಡಾ ನೂತನ ಕಾರುಗಳನ್ನು ದೇಶಕ್ಕೆ ಪರಿಚಯಿಸಲಿದೆ.

ಹೋಂಡಾ ಮೊಬಿಲಿಯೊ
ಈ ಹಿಂದೆಯೂ ಹಲವು ಬಾರಿ ವರದಿ ಮಾಡಿರುವುದಂತೆಯೇ ಹೋಂಡಾ ಮೊಬಿಲಿಯೊ, ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿರಲಿದೆ. ಹಾಗೆಯೇ ಟೊಯೊಟಾ ಇನ್ನೋವಾ ಹಿಮ್ಮೆಟ್ಟಿಸುವ ಗುರಿ ಹೊಂದಿದೆ.

ಹೋಂಡಾ ವೆಜೆಲ್
ಹೋಂಡಾ ನೂತನ ಎಸ್‌ಯುವಿ ವೆಜೆಲ್ ಎಂದು ಗುರುತಿಸಿಕೊಳ್ಳಲಿದೆ. ಈಗಾಗಲೇ ಟೊಕಿಯೊ ಮೋಟಾರ್ ಶೋದಲ್ಲಿ ಕಾಣಿಸಿಕೊಂಡಿರುವ ಹೋಂಡಾ ವೆಜೆಲ್ ಕಾಂಪಾಕ್ಟ್ ಎಸ್‌ಯುವಿ, ಫೋರ್ಡ್ ಇಕೊಸ್ಪೋರ್ಟ್, ರೆನೊ ಡಸ್ಟರ್ ಮತ್ತು ನಿಸ್ಸಾನ್ ಟೆರನೊ ಸವಾಲುಗಳನ್ನು ಎದುರಿಸಲಿದೆ.

ಹೋಂಡಾ ಜಾಝ್
ಇನ್ನು ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿರುವ 2014 ಹೋಂಡಾ ಜಾಝ್ ಭಾರತ ಮಾರುಕಟ್ಟೆಗೆ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಜಪಾನ್ ಮಾರುಕಟ್ಟೆಯಲ್ಲಿ ಫಿಟ್ ಎಂಬ ಹೆಸರಿನಿಂದ ಮಾರಾಟವಾಗುತ್ತಿರುವ ಹೋಂಡಾ ಜಾಝ್ ಅತಿ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.


Click it and Unblock the Notifications








