ಹೋಂಡಾದಿಂದ ಇಕೊಸ್ಪೋರ್ಟ್, ಡಸ್ಟರ್‌ಗೆ ಪ್ರತಿಸ್ಪರ್ಧಿ ಸಿದ್ಧ

Written By:

ಕಳೆದೊಂದು ವರ್ಷದಲ್ಲಿ ದೇಶದ ಕಾರು ಮಾರುಕಟ್ಟೆಯ ಚಿತ್ರಣವೇ ಬದಲಾಗಿಬಿಟ್ಟಿದೆ. ಈ ಅವಧಿಯಲ್ಲಿ ಹೊಸದಾಗಿ ಆರಂಭಗೊಂಡಿರುವ ಕಾಂಪಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ಗೆ ವಿಪರೀತ ಬೇಡಿಕೆ ಕಂಡುಬಂದಿದೆ.

ವಾಹನೋದ್ಯಮದ ಕ್ಷಣಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಈ ಪಟ್ಟಿಯಲ್ಲಿ ಪ್ರಮುಖವಾಗಿ ರೆನೊ ಡಸ್ಟರ್, ಫೋರ್ಡ್ ಇಕೊಸ್ಪೋರ್ಟ್ ಹಾಗೂ ನಿಸ್ಸಾನ್ ಟೆರನೊ ಕಾರುಗಳು ಕಾಣಿಸಿಕೊಂಡಿದ್ದವು. ಇದಕ್ಕೊಂದು ಸೇರ್ಪಡೆಯಂಬಂತೆ ಹೋಂಡಾದಿಂದ ನೂತನ ಅರ್ಬನ್ ಕಾರು ಭಾರತದತ್ತ ಮುಖ ಮಾಡಿದೆ.

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯನ್ನು ಕೇಂದ್ರಿಕರಿಸಿರುವ ಹೋಂಡಾದ ನೂತನ ಅರ್ಬನ್ ಎಸ್‌ಯುವಿ ಮುಂದಿನ ವರ್ಷ ಭಾರತ ಪ್ರವೇಶ ಪಡೆಯಲಿದೆ.

ಹೋಂಡಾದಿಂದ ಇಕೊಸ್ಪೋರ್ಟ್, ಡಸ್ಟರ್‌ಗೆ ಪ್ರತಿಸ್ಪರ್ಧಿ ಸಿದ್ಧ

ಹೋಂಡಾದಿಂದ ಆಗಮನವಾಗಲಿರುವ ನೂತನ ಕಾಂಪಾಕ್ಟ್ ಎಸ್‌ಯುವಿ ವೆಜೆಲ್ (vezel) ಎಂದು ಹೆಸರಿಸಿಕೊಳ್ಳಲಿದೆ. ಅಲ್ಲದೆ ಜಪಾನ್ ಮಾರುಕಟ್ಟೆಯನ್ನು ಮುಂದಿನ ತಿಂಗಳಲ್ಲೇ ಪ್ರವೇಶಿಸಲಿದೆ.

ಹೋಂಡಾದಿಂದ ಇಕೊಸ್ಪೋರ್ಟ್, ಡಸ್ಟರ್‌ಗೆ ಪ್ರತಿಸ್ಪರ್ಧಿ ಸಿದ್ಧ

ಹಾಗಿದ್ದರೂ ಕಾರಿನ ನಾಮಕರಣ ಬಗ್ಗೆ ಇನ್ನಷ್ಟು ಗೊಂದಲಗಳು ಮುಂದುವರಿದಿದೆ. ಇವೆಲ್ಲಕ್ಕೂ ಬಿಡುಗಡೆ ವೇಳೆಯಷ್ಟೇ ಉತ್ತರ ಲಭಿಸಲಿದೆ. ಯಾಕೆಂದರೆ ಕೆಲವು ವರದಿಗಳ ಪ್ರಕಾರ ಹೋಂಡಾ ನೂತನ ಕಾರು ಸಿಆರ್-ಯು ಎಂದು ಹೆಸರಿಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದೆ.

ಹೋಂಡಾದಿಂದ ಇಕೊಸ್ಪೋರ್ಟ್, ಡಸ್ಟರ್‌ಗೆ ಪ್ರತಿಸ್ಪರ್ಧಿ ಸಿದ್ಧ

ಪ್ರಮುಖವಾಗಿಯೂ ರೆನೊ ಡಸ್ಟರ್, ಫೋರ್ಡ್ ಇಕೊಸ್ಪೋರ್ಟ್, ಮಹೀಂದ್ರ ಎಕ್ಸ್‌ಯುವಿ500 ಮತ್ತು ನಿಸ್ಸಾನ್ ಟೆರನೊ ಕಾರುಗಳಿಗೆ ಹೋಂಡಾ ನೂತನ ಕಾಂಪಾಕ್ಟ್ ಎಸ್‌ಯುವಿ ಪೈಪೋಟಿ ಒಡ್ಡಲಿದೆ.

ಹೋಂಡಾದಿಂದ ಇಕೊಸ್ಪೋರ್ಟ್, ಡಸ್ಟರ್‌ಗೆ ಪ್ರತಿಸ್ಪರ್ಧಿ ಸಿದ್ಧ

ಈಗಾಗಲೇ 2013 ಟೊಕಿಯೋ ಮೋಟಾರ್ ಶೋದಲ್ಲಿ ಜಾಗತಿಕ ಎಂಟ್ರಿ ಕೊಟ್ಟಿರುವ ಹೋಂಡಾ ಅರ್ಬನ್ ಎಸ್‌ಯುವಿ, ಹೋಂಡಾ ಸಿಟಿಗೆ ಸಮಾನವಾದ 1.5 ಲೀಟರ್ ಐ-ವಿಟೆಕ್ ಮತ್ತು 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್‌ ಹೊಂದಿರಲಿದೆ.

ಹೋಂಡಾದಿಂದ ಇಕೊಸ್ಪೋರ್ಟ್, ಡಸ್ಟರ್‌ಗೆ ಪ್ರತಿಸ್ಪರ್ಧಿ ಸಿದ್ಧ

2014 ಹೋಂಡಾ ಜಾಝ್ ತಲಹದಿಯಲ್ಲಿ ನೂತನ ಕಾರು ರೂಪುಗೊಂಡಿದೆ. ಇದು ಹೋಂಡಾದ ನೂತನ 'ಎಚ್ ಡಿಸೈನ್' ವಿನ್ಯಾಸವನ್ನು ಹಿಂಬಾಲಿಸಲಿದೆ.

ಹೋಂಡಾದಿಂದ ಇಕೊಸ್ಪೋರ್ಟ್, ಡಸ್ಟರ್‌ಗೆ ಪ್ರತಿಸ್ಪರ್ಧಿ ಸಿದ್ಧ

ಜಪಾನ್‌ನಲ್ಲಿ ಹೈಬ್ರಿಡ್ ಸೇರಿದಂತೆ ಗ್ಯಾಸೋಲೈನ್ ಮಾದರಿಗಳು ಮಾರಾಟಕ್ಕೆ ಲಭ್ಯವಿರಲಿದೆ. ಇನ್ನು ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ.

ಹೋಂಡಾದಿಂದ ಇಕೊಸ್ಪೋರ್ಟ್, ಡಸ್ಟರ್‌ಗೆ ಪ್ರತಿಸ್ಪರ್ಧಿ ಸಿದ್ಧ

ನೂತನ ಹೋಂಡಾ ಅರ್ಬನ್ ಕಾರು ಜನಪ್ರಿಯ ಸಿಆರ್‌-ವಿ ಆವೃತ್ತಿಗಿಂತಲೂ ಚಿಕ್ಕದಾಗಿರಲಿದೆ.

ಹೋಂಡಾದಿಂದ ಇಕೊಸ್ಪೋರ್ಟ್, ಡಸ್ಟರ್‌ಗೆ ಪ್ರತಿಸ್ಪರ್ಧಿ ಸಿದ್ಧ

ಇನ್ನು ದರದ ಬಗ್ಗೆ ಮಾತನಾವುಡುದಾದ್ದಲ್ಲಿ ನೂತನ ಕಾರು 9ರಿಂದ 10 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ.

ಹೋಂಡಾದಿಂದ ಇಕೊಸ್ಪೋರ್ಟ್, ಡಸ್ಟರ್‌ಗೆ ಪ್ರತಿಸ್ಪರ್ಧಿ ಸಿದ್ಧ

ಒಟ್ಟಿನಲ್ಲಿ ಈ ಕಾರಿನ ಮುಖಾಂತರ ಎಸ್‌ಯುವಿ, ಕೂಪೆ ಹಾಗೂ ಮಿನಿವ್ಯಾನ್ ವಿನ್ಯಾಸವನ್ನು ಸಾರುವ ಪ್ರಯತ್ನವನ್ನು ಹೋಂಡಾ ಮಾಡಿದೆ. ಅಲ್ಲದೆ ಎಲ್ಲ ಹಂತದಲ್ಲಿಯೂ ಪ್ರೀಮಿಯಂ ಲುಕ್ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

English summary
Honda Vezel is a compact SUV unveiled by the Japanese automaker at the Tokyo Motor Show. The compact SUV or more a crossover, is a planned global model with an unspecified launch date.
Story first published: Thursday, November 21, 2013, 4:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark