ಮಾರ್ಚ್‌ನಿಂದ ಹೋಂಡಾ ಮೊಬಿಲಿಯೊ ಉತ್ಪನ್ನ ಆರಂಭ
ದೇಶದ ಗ್ರಾಹಕರು ತೀವ್ರ ಕುತೂಹಲದಿಂದ ಕಾಯುತ್ತಿರುವ ಹೋಂಡಾ ಮೊಬಿಲಿಯೊ ಮಲ್ಟಿ ಪರ್ಪಸ್ ವೆಹಿಕಲ್ ಮಾರುಕಟ್ಟೆ ಪ್ರವೇಶಿಸಲು ಸರ್ವ ಸನ್ನದ್ಧವಾಗಿರುವಂತೆಯೇ ಇನ್ನು ಹೆಚ್ಚಿನ ಮಾಹಿತಿಗಳು ಹೊರಬಂದಿವೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಹೋಂಡಾ ಮೊಬಿಲಿಯೊ ಉತ್ಪಾದನೆ ರಾಜಸ್ತಾನದ ಟಪುಕರ ಘಟಕದಲ್ಲಿ ಮಾರ್ಚ್‌ನಿಂದ ಆರಂಭವಾಗಲಿದೆ. ಹಾಗೆಯೇ ವಿತರಣೆ ಕಾರ್ಯವು ಎಪ್ರಿಲ್ ಅಥವಾ ಮೇನಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಈ ಅತ್ಯಾಕರ್ಷಕ ಕಾರು ಲೋಕರ್ಪಣೆಯಾಗಲಿದೆ. ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣುವುದು ಬಹುತೇಕ ಖಚಿತವಾಗಿದೆ.

ಅಂದ ಹಾಗೆ ಮೊಬಲಿಯೊ 2014ನೇ ಸಾಲಿನಲ್ಲಿ ಹೋಂಡಾದಿಂದ ಆಗಮನವಾಗಲಿರುವ ಮೂದಲ ಮಾದರಿಯಾಗಿರಲಿದೆ. ಇದನ್ನು 2014 ಜಾಝ್ ಹಿಂಬಾಲಿಸಲಿದೆ. ಇದು 2014 ದೀಪಾವಳಿ ಹಬ್ಬದ ಆವೃತ್ತಿ ವೇಳೆಯಲ್ಲಿ ಲಾಂಚ್ ಆಗುವ ಸಂಭವವಿದೆ.
ಹೋಂಡಾ ಮೊಬಿಲಿಯೊ ವೈಶಿಷ್ಟ್ಯತೆಗಳಿಗಾಗಿ
ಥಾಯ್ಲೆಂಡ್ ಹಾಗೂ ಜಪಾನ್‌ನಲ್ಲಿ ಅಭಿವೃದ್ಧಿಪಡಿಸಲಾಗಿರುವ ಹೋಂಡಾ ಮೊಬಿಲಿಯೊ ಎಂಪಿವಿ, ಇಂಡೋನೇಷ್ಯಾದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಅನಾವರಣಗೊಂಡಿತ್ತು. ಇದು ಅಮೇಜ್ ಜತೆ ಫ್ಲ್ಯಾಟ್‌ಫಾರ್ಮ್ ಹಂಚಿಕೊಂಡಿದೆ. ಅಂದರೆ ಅಮೇಜ್ ಇಂಟಿರಿಯರ್ ಟಚ್ ಮೊಬಿಲಿಯೊಗೆ ನೀಡಲಾಗಿದೆ. ಅದೇ ರೀತಿ ಎಂಜಿನ್ ಮತ್ತು ಗೇರ್ ಬಾಕ್ಸ್ ಹೋಂಡಾಗೆ ಸಾಮತ್ಯೆ ಪಡೆಯಲಿದೆ.
ನೂತನ ಹೋಂಡಾ ಮೊಬಿಲಿಯೊ, ಸಿಟಿಗೆ ಸಮಾನವಾದ 1.5 ಲೀಟರ್ ಐ-ಡಿಟೆಕ್ ಅರ್ಥ್ ಡ್ರೀಮ್ಸ್ ಡೀಸೆಲ್ ಮತ್ತು 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಪ್ರಮುಖವಾಗಿಯೂ ಮಾರುತಿ ಎರ್ಟಿಗಾ ಮತ್ತು ಷೆವರ್ಲೆ ಎಂಜಾಯ್‌ಗೆ ಪ್ರತಿಸ್ಪರ್ಧಿಯಾಗಿರಲಿದೆ. ಅಂದ ಹಾಗೆ ದರ ಏಳು ಲಕ್ಷ ರು.ಗಳ ಅಸುಪಾಸಿನಲ್ಲಿರುವ ಸಾಧ್ಯತೆಯಿದೆ.


Click it and Unblock the Notifications








