ಮುಂದಿನ 3 ವರ್ಷಗಳಲ್ಲಿ 5 ನೂತನ ಹೋಂಡಾ ಕಾರುಗಳು

By Nagaraja

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯತ್ತ ದಿಟ್ಟ ಹೆಜ್ಜೆಯನ್ನಿಡುತ್ತಿರುವ ಜಪಾನ್ ಮೂಲದ ಹೋಂಡಾ ಕಂಪನಿಯು, ಮುಂದಿನ ಮೂರು ವರ್ಷಗಳಲ್ಲಿ ಐದು ನೂತನ ಮಾಡೆಲ್‌ಗಳನ್ನು ಪರಿಚಯಿಸುವ ಬೃಹತ್ ಯೋಜನೆ ಹೊಂದಿದೆ.

ಬಹುತೇಕ ಈ ಎಲ್ಲ ಕಾರುಗಳು ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಈಗಿರುವ ಮಾಹಿತಿ ಪ್ರಕಾರ ಹೋಂಡಾ ಜಾಝ್ 2014ನೇ ಇಸವಿಯಲ್ಲಿ ಆಗಮನವಾಗಲಿದೆ. ಹೋಂಡಾ ಸದ್ಯ 1.2 ಲಕ್ಷ ಯುನಿಟ್‌ಗಳನ್ನು ವಾರ್ಷಿಕವಾಗಿ ಉತ್ಪಾದಿಸುತ್ತಿದೆ. ಹೆಚ್ಚುವರಿ 2,500 ಕೋಟಿ ರುಪಾಯಿ ಹೂಡಿಕೆ ಮಾಡುವ ಮೂಲಕ ಈ ಸಂಖ್ಯೆಯನ್ನು 2.4 ಲಕ್ಷ ಯುನಿಟ್‌ಗಳಿಗೆ ಏರಿಸುವ ಇರಾದೆಯನ್ನು ಕಂಪನಿ ಹೊಂದಿದೆ.

ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿ ಸೆನ್ಸಾಷನಲ್ ಸೃಷ್ಟಿ ಮಾಡಿರುವ ಹೋಂಡಾ ಅಮೇಜ್, ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯದ ವೇಳೆಗೆ 50,000 ಯುನಿಟ್‌ ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಕೆಲವು ದಿನಗಳ ಹಿಂದೆಯಷ್ಟೇ ದೇಶಕ್ಕೆ ತನ್ನ ಮೊದಲ ಡೀಸೆಲ್ ಎಂಜಿನ್ ಕಾರನ್ನು ಜಪಾನ್ ಮೂಲದ ಹೋಂಡಾ ಪರಿಚಯಿಸಿತ್ತು. ಬಿಡುಗಡೆ ಮೊದಲೇ ವೈರಲ್ ಆಗಿ ಹರಡಿದ್ದ ಬುಕ್ಕಿಂಗ್ ಭರಾಟೆ ಕಂಪನಿಯ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಶೇಕಡಾ 66ರಷ್ಟು ಪ್ರಗತಿಯನ್ನು ಹೋಂಡಾ ಗುರಿಯಾಗಿರಿಸಿಕೊಂಡಿದೆ. ಇದು ಅಮೇಜ್‌ನಿಂದ ಮಾತ್ರ ಸಾಧ್ಯ ಎಂಬುದನ್ನು ಮನಗಂಡಿರುವ ಹೋಂಡಾ, ಪ್ರತಿ ತಿಂಗಳು 4,000ದಿಂದ 5,000ದಷ್ಟು ಯುನಿಟ್‌ಗಳನ್ನು ಉತ್ಪಾದಿಸುವ ಯೋಜನೆ ಹೊಂದಿದೆ.

More from DriveSpark

Article Published On: Wednesday, April 24, 2013, 16:00 [IST]
English summary
Honda company’s goals of launching five new models over the coming three years, most of which will be launched with diesel engine options. The next-generation Honda Jazz is slated to be launched in January 2014 and is likely to feature the Amaze’s 1.5 litre i-DTEC diesel engine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+