ದೆಹಲಿ ಆಟೋ ಎಕ್ಸ್ ಪೋದಲ್ಲಿ ಹ್ಯುಂಡೈ ಐ10 ಸೆಡಾನ್ ಲಾಂಚ್

By Nagaraja

2014 ಇಂಡಿಯಾ ಆಟೋ ಎಕ್ಸ್‌ಪೋದಲ್ಲಿ ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, ಎರಡು ನೂತನ ಮಾಡೆಲ್‌ಗಳನ್ನು ಲಾಂಚ್ ಮಾಡಲಿದೆ.

ಅವುಗಳೆಂದರೆ,

  • ಹ್ಯುಂಡೈ ಸಾಂಟಾಫೆ ಎಸ್‌ಯುವಿ ಮತ್ತು
  • ಹ್ಯುಂಡೈ ಗ್ರಾಂಡ್ ಐ10 ಸೆಡಾನ್

Hyundai Grand i10
ಈ ಪೈಕಿ ಈಗಾಗಲೇ ಮಾರುಕಟ್ಟೆಯಲ್ಲಿ ಭರ್ಜರಿ ಯಶ ಕಂಡಿರುವ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರಿನ ಸೆಡಾನ್ ಆವೃತ್ತಿಯನ್ನು ಪರಿಚಯಿಸಲು ಹ್ಯುಂಡೈ ಸಜ್ಜಾಗುತ್ತಿದೆ. ಹೊಸತಾದ ಹ್ಯುಂಡೈ ಕಾಂಪಾಕ್ಟ್ ಸೆಡಾನ್ ಕಾರು ಯಾವ ಹೆಸರಿನಿಂದ ಗುರುತಿಸಿಕೊಳ್ಳಲಿದೆ ಎಂಬುದು ತಿಳಿದು ಬಂದಿಲ್ಲ. ಹಾಗಿದ್ದರೂ ಈ ಹೊಸ ಕಾರು ಈಗಾಗಲೇ ಸ್ಥಗಿತಗೊಂಡಿರುವ ಆಸೆಂಟ್ ಆವೃತ್ತಿಯ ಬದಲಿಯಾಗಿರಲಿದೆ.

ಹೆಸರಲ್ಲೇ ಸೂಚಿಸಿರುವಂತೆಯೇ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ತಲಹದಿಯಲ್ಲಿಯೇ ಹೊಸ ಕಾಂಪಾಕ್ಟ್ ಸೆಡಾನ್ ಕಾರು ರೂಪುಗೊಳ್ಳಲಿದೆ. ಇದು ಪ್ರಮುಖವಾಗಿಯೂ ಹೋಂಡಾ ಅಮೇಜ್ ಹಾಗೂ ಮಾರುತಿ ಡಿಜೈರ್ ಆವೃತ್ತಿಗಳಿಗೆ ಪ್ರತಿಸ್ಪರ್ಧೆ ಒಡ್ಡಲಿದೆ. ಇನ್ನು ನಾಲ್ಕು ಮೀಟರ್ ಪರಿಧಿಯೊಳಗೆ ಆಗಮನವಾಗುವುದರಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗಲಿದೆ. ಹಾಗೆಯೇ ಗ್ರಾಂಡ್ ಐ10ಗೆ ಸಮಾನವಾದ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಇದು 1.2 ಲೀಟರ್ ಮತ್ತು 1.1 ಲೀಡರ್ ಡೀಸೆಲ್ ಎಂಜಿನ್‌ ಒಳಗೊಂಡಿರಲಿದೆ. ಅದೇ ಹೊತ್ತಿಗೆ ಪೆಟ್ರೋಲ್ ವೆರಿಯಂಟ್ 4 ಸ್ಪೀಡ್ ಆಟೋಮ್ಯಾಟಿಕ್ ವೆರಿಯಂಟ್‌ನಲ್ಲಿ ಆಗಮನವಾಗುವ ನಿರೀಕ್ಷೆಯಿದೆ. ಅಲ್ಲದೆ ಎಲ್ಲ ವೆರಿಯಂಟ್‌ಗಳಲ್ಲೂ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸ್ಟಾಂಡರ್ಡ್ ಆಗಿ ಲಭಿಸಲಿದೆ.

ಅಂತಿಮವಾಗಿ ಬಹುತೇಕ ಕಾರಿನ ಒಳಮೈ ಹಾಗೂ ಹೊರಮೈ ಗ್ರಾಂಡ್ ಐ10ಗೆ ಸಾಮ್ಯತೆಯನ್ನು ಪಡೆದುಕೊಳ್ಳಲಿದ್ದು, ಸ್ಮರ್ಧಾತ್ಮಕ ದರಗಳಲ್ಲಿ ಆಗಮಿಸಲಿದೆ. ಹಾಗಿದ್ದರೂ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾರಾಟವನ್ನು ಕೊಳ್ಳೆ ಹೊಡೆಯಲಿದೆಯೇ ಎಂಬುದು ಆತಂಕಕ್ಕೆ ಕಾರಣವಾಗಿದೆ.

More from DriveSpark

Article Published On: Thursday, December 19, 2013, 11:29 [IST]
English summary
Hyundai India will launch two new models at the 2014 Indian Auto Expo. Debuting at the auto show on Feb 6 will be the much awaited compact sedan model based on the Grand i10 hatchback.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+