ಶೀಘ್ರದಲ್ಲೇ ಹ್ಯುಂಡೈ ತ್ರಿಬಲ್ ಧಮಾಕಾ ನಿರೀಕ್ಷಿಸಿ

ದೇಶದ ಪ್ರಯಾಣಿಕ ಕಾರು ಸಂಸ್ಥೆಗಳ ಪೈಕಿ ಮಾರಾಟದಲ್ಲಿ ದ್ವಿತೀಯ ಸ್ಥಾನದಲ್ಲಿರುವ ಹ್ಯುಂಡೈ ಮೋಟಾರ್ ಇಂಡಿಯಾ, ನಿಕಟ ಭವಿಷ್ಯದಲ್ಲಿ ಮೂರು ನೂತನ ಮಾಡೆಲ್‌ಗಳನ್ನು ಪರಿಚಯಿಸುವುದಾಗಿ ಘೋಷಿಸಿದೆ.

ಹ್ಯುಂಡೈ ಬ್ರಾಂಡ್ ದೇಶದಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವುದರಿಂದ ಸಹಜವಾಗಿಯೇ ಈ ಸುದ್ದಿ ಕಾರು ಪ್ರಿಯರಲ್ಲಿ ಹೆಚ್ಚು ಉತ್ಸಾಹಕ್ಕೆ ಕಾರಣವಾಗಿದೆ.

ಮುಂದಿನ ದಿನಗಳಲ್ಲಿ ಸ್ಪೋಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ), ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಹಾಗೂ ಹ್ಯಾಚ್‌ಬ್ಯಾಕ್ ಮಾದರಿಗಳು ಪರಿಚಯವಾಗಲಿದೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಸಿಇಒ ಹಾಗೂ ಮಹಾ ನಿರ್ದೇಶಕ ಬೊ ಶಿನ್ ಸಿಯೊ ತಿಳಿಸಿದ್ದಾರೆ.

ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಎಸ್‌ಯುವಿ ಹಾಗೂ ಕ್ರಾಸೋವರ್ ಕಾರುಗಳಿಗೆ ಭಾರಿ ಬೇಡಿಕೆ ಕಂಡುಬರುತ್ತಿದೆ. ಮುಂದಿನ ಕೆಲವು ವರ್ಷಗಳ ವರೆಗೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. ಮಾರುತಿ ಸುಜುಕಿ ಎರ್ಟಿಗಾ ಹಾಗೂ ರೆನೊ ಡಸ್ಟರ್ ಅತ್ಯಂತ ಹೆಚ್ಚು ಯಶ ಸಾಧಿಸಿರುವುದೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಇವೆಲ್ಲದರ ಹೊರತಾಗಿಯೂ ಹ್ಯಾಚ್‌ಬ್ಯಾಕ್ ಆವೃತ್ತಿಯನ್ನು ಬಿಡುಗಡೆ ಮಾಡಲು ಹ್ಯುಂಡೈ ಯೋಜನೆ ಹೊಂದಿದೆ. ಈ ಮಾಡೆಲ್ ಐ20 ಹಾಗೂ ಐ10 ಮಧ್ಯೆ ಇರಲಿದೆ. ಇದರಿಂದ ನೂತನ ಸೆಗ್ಮೆಂಟ್ ರೂಪಿಸಲು ಸಾಧ್ಯವಾಗಲಿದ್ದು, ಉತ್ತಮ ನಿರ್ವಹಣೆ ಹಾಗೂ ಪಿಕಪ್ ಸಿಗಲಿದೆ ಎಂದಿದೆ.

ಮೂಲಗಳ ಪ್ರಕಾರ ನೂತನ ಹ್ಯಾಚ್‌ಬ್ಯಾಕ್ ಕಾರು ಈಗಾಗಲೇ ರೋಡ್ ಟೆಸ್ಟಿಂಗ್ ನಡೆಸಿದ್ದು, 1.1 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸಾಧ್ಯತೆಯಿದೆ.

More from DriveSpark

Article Published On: Saturday, March 30, 2013, 10:58 [IST]
English summary
Hyundai Motor India has confirmed that it is developing quite a few new models that will be launched in the coming months. Among these is a new compact SUV, MPV and a new hatchback model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+