ಗ್ರಾಂಡ್ ಐ10 ಹೊರುಪಡಿಸಿ ಉಳಿದೆಲ್ಲ ಹ್ಯುಂಡೈ ಕಾರುಗಳ ಬೆಲೆ ಏರಿಕೆ

By Nagaraja

ದೇಶದ ಅತಿದೊಡ್ಡ ಪ್ರಯಾಣಿಕ ಕಾರು ರಫ್ತುದಾರ ಹಾಗೂ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್), ಇತ್ತೀಚೆಗಷ್ಟೇ ಲಾಂಚ್ ಆಗಿರುವ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರನ್ನು ಹೊರತುಪಡಿಸಿ ತನ್ನೆಲ್ಲ ಇತರ ಆವೃತ್ತಿಗಳಿಗೆ ದರ ಹೆಚ್ಚಳಗೊಳಿಸಲು ನಿರ್ಧರಿಸಿದೆ.

ಈ ಬಗ್ಗೆ ಮಾತನಾಡಿರುವ ಹ್ಯುಂಡೈ ಸೇಲ್ಸ್ ಮತ್ತು ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷ, ರಾಕೇಶ್ ಶ್ರಿವಾಸ್ತವಾ, ರುಪಾಯಿ ಅಪಮೌಲ್ಯವು ಕಾರಿನ ಒಳಹರಿವು ವೆಚ್ಚವನ್ನು ಹೆಚ್ಚಳಗೊಳಿಸಿದೆ. ಈ ಹಿನ್ನಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿದೆ. ಇದರಂತೆ ಅಕ್ಟೋಬರ್ 1ರಿಂದ ಅನ್ವಯವಾಗುವಂತೆಯೇ 4,000 ರು.ಗಳಿಂದ 20,000 ರು.ಗಳ ವರೆಗೆ ದರ ಏರಿಕೆಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಹಾಗಿದ್ದರೂ ಗ್ರಾಹಕರ ದೃಷ್ಟಿಯಲ್ಲಿಟ್ಟುಕೊಂಡು ದರ ಏರಿಕೆಯಿಂದ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರನ್ನು ಹೊರತುಪಡಿಸಲಾಗಿದೆ ಎಂದಿದ್ದಾರೆ.


ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಒಂಬತ್ತು ಮಾದರಿಗಳನ್ನು ಹ್ಯುಂಡೈ ಮಾರಾಟಗೈಯುತ್ತಿವೆ.

ಎ2 ಸೆಗ್ಮೆಂಟ್: ಇಯಾನ್, ಸ್ಯಾಂಟ್ರೊ, ಐ10, ಗ್ರಾಂಡ್ ಐ10 ಮತ್ತು ಐ20
ಎ3 ಸೆಗ್ಮೆಂಟ್: ವರ್ನಾ
ಎ4 ಸೆಗ್ಮೆಂಟ್: ಎಲಂಟ್ರಾ
ಎ5 ಸೆಗ್ಮೆಂಟ್: ಸೊನಾಟಾ
ಎಸ್‌ಯುವಿ ಸೆಗ್ಮೆಂಟ್: ಸಾಂಟಾಫೆ

More from DriveSpark

Article Published On: Friday, September 20, 2013, 12:20 [IST]
English summary
Hyundai Motor India Ltd. (HMIL), the country’s largest passenger car exporter and second largest car manufacturer today announced the price increase across all its models starting from Eon to Santa Fe excluding the recently launched Hyundai Grand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+