ಮತ್ತೆ ದರ ಸಮರ ಶುರು- ಡ್ಯೂಕ್ 125 ಮತ್ತು ಆರ್‌ಸಿ 125 ಬೆಲೆ ಹೆಚ್ಚಳ ಮಾಡಿದ ಕೆಟಿಎಂ
ಹೊಸ ವಾಹನಗಳ ಮಾರಾಟದಲ್ಲಿ ಸತತ ಹಿನ್ನಡೆ ಒಂದಡೆಯಾದಲ್ಲಿ ಉತ್ಪಾದನಾ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಮಾರಾಟದ ಹಿನ್ನಡೆಯ ನಡುವೆಯೂ ಕೆಟಿಎಂ ಸೇರಿದಂತೆ ಹಲವು ವಾಹನ ಉತ್ಪಾದನಾ ಸಂಸ್ಥೆಗಳು ಬೆಲೆ ಹೆಚ್ಚಳಕ್ಕೆ ನಿರ್ಧರಿಸಿವೆ.

ಕೆಟಿಎಂ ಸಂಸ್ಥೆಯು ತನ್ನ ಜನಪ್ರಿಯ ಆವೃತ್ತಿಯಾದ ಡ್ಯೂಕ್ 125 ಮತ್ತು ಆರ್‌ಸಿ 125 ಬೈಕ್ ಬೆಲೆಯನ್ನು ಹೆಚ್ಚಳ ಮಾಡಿದ್ದು, ಅಧಿಕ ಜಿಎಸ್‌ಟಿ, ದುಬಾರಿ ವಿಮಾ ದರಗಳ ಮಧ್ಯದಲ್ಲಿ ಇದೀಗ ಮತ್ತಷ್ಟು ಅಧಿಕ ಬೆಲೆ ಪಡೆದುಕೊಂಡಿವೆ. ಮಾಹಿತಿಗಳ ಪ್ರಕಾರ ಡ್ಯೂಕ್ 125 ಬೈಕ್ ಮಾದರಿಯು ರೂ. 2,248 ಮತ್ತು ಆರ್‌ಸಿ 125 ಬೈಕ್ ಮಾದರಿಯು 1,537 ಹೆಚ್ಚುವರಿ ಬೆಲೆ ಪಡೆದುಕೊಂಡಿವೆ. ಹೊಸ ದರವು ಇಂದಿನಿಂದಲೇ ಜಾರಿಯಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನು ಕೆಲವು ಬೈಕ್ ಮಾದರಿಗಳ ಬೆಲೆ ಹೆಚ್ಚಳ ನೀರಿಕ್ಷೆಯಿದೆ.

ಬೆಲೆ ಹೆಚ್ಚಳದಿಂದಾಗಿ ಸದ್ಯ ಡ್ಯೂಕ್ 125 ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1,32,500 ಮತ್ತು ಆರ್‌ಸಿ 125 ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1,48,750 ಬೆಲೆ ಪಡೆದುಕೊಂಡಿದೆ.

ಡ್ಯೂಕ್ 125 ಬೈಕ್ ಮಾದರಿಯು ಮೊದಲ ಬಾರಿಗೆ ಬಿಡುಗಡೆಗೊಂಡ ನಂತರ ಇದುವರೆಗೂ ನಾಲ್ಕು ಬಾರಿ ಬೆಲೆ ಹೆಚ್ಚಳ ಪಡೆದಿದ್ದು, ಆರ್‌ಸಿ 125 ಮಾದರಿಯು ಬಿಡುಗಡೆಯಾದ ನಂತರ ಇದೇ ಮೊದಲ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡಿದೆ.

ಆಕರ್ಷಕ ಬೆಲೆ, ಪರ್ಫಾಮೆನ್ಸ್ ವೈಶಿಷ್ಟ್ಯತೆಯನ್ನು ಹೊಂದಿರುವ ಡ್ಯೂಕ್ 125 ಮತ್ತು ಆರ್‌ಸಿ 125 ಬೈಕ್‌ಗಳು ಅತಿ ಕಡಿಮೆ ಅವಧಿಯಲ್ಲಿ ಯುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಿ ಹೊರಹೊಮ್ಮಿದ್ದು, ಕಡಿಮೆ ಎಂಜಿನ್ ಹೊಂದಿದ್ದರೂ ಸಹ ಬೈಕ್ ಶೈಲಿ ಮತ್ತು ಎಂಜಿನ್ ಕಾರ್ಯಕ್ಷಮತೆಯೇ ಈ ಬೈಕ್‌ಗಳ ಪ್ರಮುಖ ಆಕರ್ಷಣೆಯಾಗಿದೆ.

ಇನ್ನು ಕಳೆದ ನವೆಂಬರ್‌ನಲ್ಲಿ ಬಿಡುಗಡೆಯಾದ ಡ್ಯೂಕ್ 125 ಮತ್ತು ಜೂನ್‌ನಲ್ಲಿ ಬಿಡುಗಡೆಯಾದ ಆರ್‌ಸಿ 125 ಎರಡು ಬೈಕ್‌ಗಳಲ್ಲೂ ಒಂದೇ ಮಾದರಿಯ ಎಂಜಿನ್ ಬಳಕೆ ಮಾಡಲಾಗಿದ್ದು, 124.7ಸಿಸಿ ಎಂಜಿನ್, ಸಿಂಗಲ್ ಸಿಲಿಂಡರ್ ಎಂಜಿನ್ ಮೂಲಕ 14.5-ಬಿಎಚ್‌ಪಿ ಮತ್ತು 12-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು. ಎರಡು ಬೈಕ್‌ಗಳಲ್ಲೂ 6-ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಬೈಕ್ ಖರೀದಿಸಬಹುದಾಗಿದೆ.

ಬೈಕಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳು ಡ್ಯೂಕ್ 200 ಬೈಕಿಗೆ ಸಮನಾಗಿದ್ದು, ಡಿಜಿಟಲ್ ಇನ್ಟ್ರಮೆಂಟ್ ಕ್ಲಸ್ಟರ್, ಬಾಡಿ ಪ್ಯಾನೆಲ್, ಸಿಂಗಲ್ ಚಾನೆಲ್ ಎಬಿಎಸ್ ಮತ್ತು ಸ್ವಿಂಗ್ ಆರ್ಮ್ ಸೌಲಭ್ಯವನ್ನು ಜೋಡಿಸಿರುವುದು ಹೊಸ ಬೈಕ್‌ಗಳ ಮಾರಾಟವು ಉತ್ತಮ ಬೆಳವಣಿಗೆ ಹೊಂದುತ್ತಿವೆ.

ಕೆಟಿಎಂ ಸಂಸ್ಥೆಯು ಪ್ರಮುಖವಾಗಿ ಪರ್ಫಾಮೆನ್ಸ್ ಬೈಕ್ ಆವೃತ್ತಿಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಭಾರತವನ್ನು ಹೊರತುಪಡಿಸಿ ಜಾಗತಿಕ ಮಾರುಕಟ್ಟೆಗಳಲ್ಲಿ 1200 ಸಿಸಿ ಸಾಮರ್ಥ್ಯದ 1290 ಸೂಪರ್ ಡ್ಯೂಕ್ ಬೈಕ್ ಆವೃತ್ತಿಯನ್ನು ಸಹ ಮಾರಾಟ ಮಾಡುತ್ತಿದೆ.
MOST READ:ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಹೀಗಿರುವಾಗ ಭಾರತೀಯ ಗ್ರಾಹಕರ ಬೇಡಿಕೆಯನ್ನು ಅರಿತಿರುವ ಕೆಟಿಎಂ ಸಂಸ್ಥೆಯು 125ಸಿಸಿ ಸಾಮರ್ಥ್ಯದ ಎಂಜಿನ್‌ನೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವ ಹೊಸ ಪ್ರಯತ್ನಕ್ಕೆ ಕೈಹಾಕಿದ್ದು, ಡ್ಯೂಕ್ 125 ಮತ್ತು ಆರ್‌ಸಿ 125 ಮಾದರಿಗಳು ಕೆಟಿಎಂಗೆ ಅಧಿಕ ಲಾಭ ತಂದುಕೊಡುತ್ತಿವೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಇನ್ನು ಕೆಟಿಎಂ ಸಂಸ್ಥೆಯು ಅಂಡ್ವೆಚರ್ ಪ್ರಿಯರಿಗಾಗಿ ಮುಂದಿನ ಕೆಲವೇ ದಿನಗಳಲ್ಲಿ 390 ಅಡ್ವೆಂಚರ್, 390 ಅಡ್ವೆಂಚರ್ ಆರ್, ಡ್ಯೂಕ್ 790, 790 ಅಡ್ವೆಂಚರ್ ಮತ್ತು 790 ಅಡ್ವೆಂಚರ್ ಆರ್ ಎನ್ನುವ ಒಟ್ಟು ಐದು ಹೊಸ ಬೈಕ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.


Click it and Unblock the Notifications








