ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ದೇಶ್ಯಾದ್ಯಂತ ಜಾರಿಗೆ ತರಲಾಗಿರುವ ಹೊಸ ಮೋಟಾರ್ ಕಾಯ್ದೆಗೆ ಭಾರೀ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ದುಬಾರಿ ದಂಡದಿಂದ ಹೈರಾಣಗಾಗಿದ್ದ ವಾಹನ ಸವಾರರಿಗೆ ಕರ್ನಾಟಕ ಸರ್ಕಾರವು ಕೊನೆಗೂ ಸಿಹಿಸುದ್ದಿ ನೀಡಿದೆ.

ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಹೌದು, ಹೊಸ ಸಂಚಾರಿ ನಿಯಮ ಜಾರಿಗೆ ನಂತರ ಭಾರೀ ದಂಡದ ಮೊತ್ತದಲ್ಲಿ ವಿನಾಯ್ತಿ ನೀಡುವುದಾಗಿ ಸುಳಿವು ನೀಡಿದ್ದ ಕರ್ನಾಟಕ ಸರ್ಕಾರವು ಇದೀಗ ಹೊಸ ಸಂಚಾರಿ ನಿಯಮಕ್ಕೆ ಬ್ರೇಕ್ ಹಾಕಿದ್ದು, ಸೆಪ್ಟೆಂಬರ್ 3ರ ಮೊದಲು ವಸೂಲಿ ಮಾಡಲಾಗುತ್ತಿದ್ದ ದಂಡ ಮೊತ್ತವನ್ನೇ ಮುಂದುವರಿಸುವಂತೆ ಮಹತ್ವದ ಆದೇಶ ಹೊರಡಿಸಿದೆ. ಭಾರೀ ಪ್ರಮಾಣದ ದಂಡದಿಂದ ವಾಹನ ಸವಾರಿಗೆ ಸಾಕಷ್ಟು ಹೊರೆಯಾಗುತ್ತಿರುವದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಭಾರೀ ದಂಡಕ್ಕೆ ಬಹುತೇಕ ರಾಜ್ಯಗಳಲ್ಲಿ ವಾಹನ ಸವಾರರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿರುವುದರಿಂದ ದಂಡ ಪರಿಷ್ಕರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರವು ಮತ್ತೊಂದು ಸಭೆ ಕರೆದಿದ್ದು, ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಹೆದ್ದಾರಿ ಮತ್ತು ರಸ್ತೆಸಾರಿಗೆ ಸಚಿವ ನಿತಿನ್ ಗಡ್ಕರಿ ಮಾತುಕತೆ ನಡೆಸಲಿದ್ದಾರೆ.

ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಈ ವೇಳೆ ಭಾರೀ ಹೊಸ ದಂಡದ ಮೊತ್ತದಲ್ಲಿ ಇಳಿಕೆ ಮಾಡುವ ಸಾಧ್ಯತೆಗಳಿದ್ದು, ಅಲ್ಲಿನ ತನಕ ಹೊಸ ಸಂಚಾರಿ ನಿಯಮದಡಿ ದಂಡ ವಸೂಲಿ ಮಾಡದಂತೆ ಸಿಎಂ ಯಡಿಯೂರಪ್ಪನವರು ಪೊಲೀಸ್ ಇಲಾಖೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಹೀಗಾಗಿ ಕೇಂದ್ರ ಸರ್ಕಾರದಿಂದ ಹೊಸ ದರ ಪರಿಷ್ಕರಣೆ ಪಟ್ಟಿ ಬರುವ ತನಕ ವಾಹನ ಸವಾರರಿಗೆ ತುಸು ರೀಲಿಫ್ ಸಿಗಲಿದ್ದು, ಈ ಹಿಂದಿನಂತಯೇ ಹೆಲ್ಮೆಟ್ ಇಲ್ಲದವರಿಗೆ, ಹಿಂಬದಿ ಸವಾರರಿಗೆ ಹೆಲ್ಮೆಟ್ ಇಲ್ಲದಿರುವುದು, ಸಿಲ್ಟ್ ಬೆಲ್ಟ್ ಹಾಕದಿರುವುದಕ್ಕೆ ರೂ.100, ಸಿಗ್ನಲ್ ಜಂಪ್‌ಗೆ ರೂ.200, ಡಿಎಲ್ ಇಲ್ಲದ ವಾಹನ ಸವಾರರಿಗೆ ರೂ.300 ಮತ್ತು ಡ್ರಿಂಕ್ ಆ್ಯಂಡ್ ಡ್ರೈವ್ ವಾಹನ ಸವಾರರಿಗೆ ರೂ.2 ಸಾವಿರ ದಂಡವನ್ನೇ ಮುಂದುವರಿಸಲಿದೆ.

ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಇನ್ನು ಬೆಂಗಳೂರು ನಗರವೊಂದರಲ್ಲೇ ಟ್ರಾಫಿಕ್ ಪೊಲೀಸರು ಹೊಸ ನಿಯಮದಡಿ ಕೋಟ್ಯಾಂತರ ರೂಪಾಯಿ ದಂಡ ವಸೂಲಿ ಮಾಡಿದ್ದು, ಹೊಸ ನಿಯಮ ಜಾರಿಗೆ ಬಂದ ಕೇವಲ 10 ದಿನಗಳ ಅವಧಿಯ ಬರೋಬ್ಬರಿ ರೂ.3 ಕೋಟಿ ದಂಡ ವಸೂಲಿ ಮಾಡಿದ್ದಾರೆ.

ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಹೆಲ್ಮೆಟ್ ಇಲ್ಲದ ವಾಹನ ಚಾಲನೆ, ಸಿಗ್ನಲ್ ಜಂಪ್ ಮತ್ತು ರಾಂಗ್ ಸೈಡ್ ಪಾರ್ಕಿಂಗ್ ಪ್ರಕರಣಗಳಿಂದ ಅತಿಹೆಚ್ಚು ದಂಡ ವಸೂಲಿ ಮಾಡಲಾಗಿದ್ದು, ಸುಮಾರು 85 ಸಾವಿರ ಪ್ರಕರಣಗಳನ್ನು ದಾಖಲಿಸಿರುವ ಟ್ರಾಫಿಕ್ ಪೊಲೀಸರು ಸರ್ಕಾರದ ಬೊಕ್ಕಸಕ್ಕೆ ಭಾರೀ ಆದಾಯ ಸಂಗ್ರಹಿಸಿದ್ದಾರೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಸೆಪ್ಟೆಂಬರ್ 13ರಂದು ಬೆಂಗಳೂರ ನಗರದಲ್ಲಿ ಸುಮಾರು 18,503 ವಿವಿಧ ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, 60,80,500 ರೂ. ದಂಡ ಸಂಗ್ರಹವಾಗಿರುವುದು ಅತಿ ಹೆಚ್ಚು ದಂಡದ ಮೊತ್ತವಾಗಿದೆ.

MOST READ:ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಹೊಸ ನಿಯಮದಿಂದ ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಬಹುದಾದದರೂ ವಾಹನ ಸವಾರರು ಮತ್ತು ಪೊಲೀಸರ ನಡುವೆ ಸಂಘರ್ಷಣೆ ಕಾರಣವಾಗುತ್ತಿದೆ. ವಾಹನಗಳಿಗಳಿಂತ ದಂಡದ ಮೊತ್ತವೇ ಹೆಚ್ಚುತ್ತಿರುವುದು ಹಲವು ಅನಾಹುತಗಳಿಗೆ ಎಡೆಮಾಡಿಕೊಡುತ್ತಿದ್ದು, ಕೊನೆಗೂ ದಂಡದ ಮೊತ್ತದಲ್ಲಿ ಇಳಿಕೆ ಮುಂದಾಗಿರುವುದರಿಂದ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.

MOST READ:ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಹಾಗಂತ ಹೊಸ ಸಂಚಾರಿ ನಿಯಮವನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದು ತಿಳಿದುಕೊಳ್ಳಬೇಡಿ. ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಅಂತಿಮ ಹಂತವಾಗಿ ಮತ್ತೊಂದು ದಂಡದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅಲ್ಲಿಯ ತನಕ ಮಾತ್ರವೇ ದುಬಾರಿ ದಂಡದ ಹೊರೆ ತಪ್ಪಲಿದೆ.

Most Read Articles

Kannada
English summary
The new traffic fine amount in Karnataka has been cancelled. The state Chief Minister has announced that Karnataka will revert to the old fine amounts for the time being, while the new traffic fines are reviewed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X