ದೇಶಕ್ಕೆ ಐಷಾರಾಮಿ ಕಾರು ಪರಿಚಯಿಸಲಿರುವ ಹ್ಯುಂಡೈ
ಸಣ್ಣ ಕಾರು ಸೆಗ್ಮೆಂಟ್‌ನಲ್ಲಿ ಖ್ಯಾತಿಗೆ ಪಾತ್ರವಾಗಿರುವ ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ, ಇದೀಗ ಐಷಾರಾಮಿ ಸೆಗ್ಮೆಂಟ್‌ಗೂ ಕಾಲಿಡುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ನೀವು ಬಯಸುವ ಹ್ಯುಂಡೈ ಕಾರಿಗಾಗಿ ಸಂದರ್ಶಿಸಿರಿ
ಜೆನಿಸಿಸ್ ಮತ್ತು ಇಕ್ಯೂಸ್ (Genesis and Equus) ಎಂಬ ಎರಡು ಕಾರುಗಳೊಂದಿಗೆ ಭಾರತೀಯ ಗ್ರಾಹಕರಿಗೆ ಐಷಾರಾಮಿ ಅನುಭವ ನೀಡುವ ಇರಾದೆಯನ್ನು ದಕ್ಷಿಣ ಕೊರಿಯಾ ಮೂಲದ ಈ ಕಂಪನಿ ಹೊಂದಿದೆ. ಇದು ಹ್ಯುಂಡೈನ ಪರಿಪೂರ್ಣ ಲಗ್ಷುರಿ ಕಾರಾಗಿರಲಿದೆ. ಪ್ರಸ್ತುತ ಅಧ್ಯಯನ ಹಂತದಲ್ಲಿರುವ ಹ್ಯುಂಡೈ, ದೇಶದ ಶ್ರೀಮಂತ ಗ್ರಾಹಕರನ್ನು ಗುರಿಯಾಗಿಸಿಕೊಳ್ಳುತ್ತಿದೆ. ಇವೆಲ್ಲಕ್ಕೂ ವಿಭಿನ್ನವಾದ ಜಾಲ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಕಂಪನಿ ತಿಳಿಸಿದೆ.

ಈ ಹಿಂದೆ ಭಾರತ ಮಾರುಕಟ್ಟೆಗೆ ಪ್ರವೇಶಿಸಿದ್ದ ಸಾಂಟಾಫೆ ಪ್ರೀಮಿಯಂ ಎಸ್‌ಯುವಿ ನಿರೀಕ್ಷಿಸಿದಷ್ಟು ಯಶ ಸಾಧಿಸಿರಲಿಲ್ಲ. ಇದೀಗ ಕಂಪ್ಲೀಟ್ ಬಿಲ್ಡ್ ಯುನಿಟ್ ಸಿದ್ಧಾಂತದ ಮುಖಾಂತರ ಹೊಸ ಲಗ್ಷುರಿ ಕಾರುಗಳನ್ನು ಮಾರಾಟ ಮಾಡುವ ಯೋಜನೆಯನ್ನು ಹ್ಯುಂಡೈ ಹೊಂದಿದೆ.
2007ರಲ್ಲಿ ಜೆನಿಸಿಸ್ ಕಾನ್ಸೆಪ್ಟ್‌ನಲ್ಲಿ ಪರಿಚಯವಾಗಿದ್ದ ಹ್ಯುಂಡೈ ಜೆನಿಸಿಸ್ ಸೆಡಾನ್ ಕಾರು, ಬಿಎಂಡಬ್ಲ್ಯು 5 ಸಿರೀಸ್, ಮರ್ಸಿಡಿಸ್ ಇ-ಕ್ಲಾಸ್ ಮತ್ತು ಎ6 ಆವೃತ್ತಿಗಳಿಗೆ ಪ್ರತಿಸ್ಫರ್ಧಿಯಾಗಿತ್ತು. ಇದರಲ್ಲಿ 5.0 ಲೀಟರ್ ವಿ8 ಮತ್ತು 3.8 ಲೀಟರ್ ವಿ6 ಎಂಜಿನ್ ಆಳವಡಿಸಲಾಗಿತ್ತು. ಈ ಪೈಕಿ ವಿ8 ಎಂಜಿನ್ ಹ್ಯುಂಡೈನ ಅತ್ಯಂತ ಪವರ್‌ಫುಲ್ ಎಂಜಿನ್ ಆಗಿದೆ.
ಇನ್ನೊಂದೆಡೆ ಇಕ್ಯೂಸ್ ಮಾದರಿಯು ಬಿಎಂಡಬ್ಲ್ಯು 7 ಸಿರೀಸ್, ಮರ್ಸಿಡಿಸ್ ಎಸ್ ಕ್ಲಾಸ್, ಲೆಕ್ಸಸ್ ಎಲ್‌ಎಸ್460 ಮತ್ತು ಆಡಿ ಎ8ಗೆ ಎದುರಾಳಿಯಾಗಿದೆ. ಇದು 5.0 ಲೀಟರ್ ವಿ8 ಎಂಜಿನ್ ಹೊಂದಿದೆ.


Click it and Unblock the Notifications