ಇಸುಝು ಲಗ್ಷುರಿ ಎಸ್‌ಯುವಿ ಭಾರತದಲ್ಲಿ ಲಾಂಚ್

Written By:

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಇಸುಝು ಮೋಟಾರ್ಸ್ ಭಾರತಕ್ಕೂ ಲಗ್ಗೆಯಿಟ್ಟಿದೆ. ಹೌದು, ಇಸುಝು ಎಂಯು-7 ಎಸ್‌ಯುವಿ ಕಾರು ಭಾರತದಲ್ಲಿ ಲಾಂಚ್ ಆಗಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಚೆನ್ನೈನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಇಸುಝು ಭಾರತ ಪ್ರವೇಶ ಪಡೆಯಿತು. ಬಿಎಸ್-III ಹಾಗೂ ಬಿಎಸ್ IV ಎಂಜಿನ್ ವರ್ಷನ್‌ನಲ್ಲಿರುವ ಇಸುಝು ಎಂಯು-7 ಎಸ್‌ಯುವಿ ಕಾರಿನ ಚೆನ್ನೈ ಎಕ್ಸ್ ಶೋ ರೂಂ ದರ 22.3 ಲಕ್ಷ ರು.ಗಳಾಗಿವೆ.

ಇಸುಝು ಎಂಯು-7 ಐಷಾರಾಮಿ ಕಾರು 3.0 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 163 ಪಿಎಸ್ ಪವರ್ (260 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಕಲರ್ ವೆರಿಯಂಟ್: ಬ್ಲ್ಯಾಕ್, ವೈಟ್, ಸಿಲ್ವರ್.

ಚೆನ್ನೈನ ಹಿಂದೂಸ್ತಾನ್ ಮೋಟಾರ್ಸ್ ಘಟಕದಲ್ಲಿ ಇಸುಝ ಕಾರನ್ನು ಸಂಪೂರ್ಣವಾಗಿ ಸ್ಥಳೀಯವಾಗಿ ಜೋಡಣೆ ಮಾಡಲಾಗುತ್ತದೆ. ಇದು ಸ್ಮರ್ಧಾತ್ಮಕ ದರಗಳಲ್ಲಿ ಲಭ್ಯವಾಗಲು ನೆರವಾಗಲಿದೆ.

ಆದರೆ ಭವಿಷ್ಯದಲ್ಲಿ 3000 ಕೋಟಿ ರು. ಹೂಡಿಕೆ ಮಾಡಿ ಆಂಧ್ರಪ್ರದೇಶದಲ್ಲಿ ನಿರ್ಮಿಸಲಾಗಿರುವ ಹೊಸ ಘಟಕದಲ್ಲಿ ನಿರ್ಮಾಣ ಕಾರ್ಯ ಹಮ್ಮಿಕೊಳ್ಳಲಾಗುವುದು. ಇದು 2016ರ ವೇಳೆಗೆ ಕಾರ್ಯಾಚರಣೆಗೆ ಸಿದ್ಧವಾಗಲಿದ್ದು, 1,20,000 ಯುನಿಟ್ ಉತ್ಪಾದಿಸುವಷ್ಟು ಸಕ್ಷಮವಾಗಿದೆ.

ವಾರ್ಷಿಕವಾಗಿ 5,000 ಯುನಿಟ್ ಮಾರಾಟದ ಗುರಿ ತಲುಪುವುದು ಇಸುಝ ಗುರಿಯಾಗಿದೆ. ಹಾಗೆಯೇ 2016ರ ವೇಳೆಗೆ ಡೀಲರುಗಳ ಸಂಖ್ಯೆಯನ್ನು 60ಕ್ಕೆ ಏರಿಸುವ ಯೋಜನೆ ಹೊಂದಿದೆ.

Isuzu Motors
English summary
Isuzu Motors, the Japanese commercial vehicle and SUV manufacturer has launched its MU-7 SUV in India.
Story first published: Wednesday, December 11, 2013, 11:24 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark