Duster: ಶೋರೂಂಗೂ ಬಂದಿಲ್ಲ.. ಹೊಸ ರೆನಾಲ್ಟ್ ಡಸ್ಟರ್ ಹೈಬ್ರಿಡ್ ಕಾರುಗಳಿಗೆ ಮುಗಿಬಿದ್ದ ಜನ.. ಎಲ್ಲವು ಸೇಲ್ ಆಗಿಬಿಟ್ಟವು!
ನವದೆಹಲಿಯಲ್ಲಿ ಮಂಗಳವಾರ ಜರುಗಿದ ಅದ್ದೂರಿ ಸಮಾರಂಭದಲ್ಲಿ 2026ರ ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಆದರೀಗ ಈ ಕಾರಿನ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಮಾಡೆಲ್‌ಗಳಿಗೆ ವ್ಯಾಪಕವಾದ ಬೇಡಿಕೆ ಬಂದಿದೆ. ಶೋರೂಂಗೂ ಬರುವ ಮೊದಲೇ, 2026ರಲ್ಲಿ ಸಿದ್ಧಪಡಿಸಲಾದ 'ಡಸ್ಟರ್'ನ ಎಲ್ಲ ಹೈಬ್ರಿಡ್ ಯುನಿಟ್‌ಗಳು ಮಾರಾಟವಾಗಿ ಬಿಟ್ಟಿವೆ. ಇದರಿಂದಾಗಿ ಈ ಮಾಡೆಲ್‌ಗಳ ಬುಕ್ಕಿಂಗ್‌ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿಯು ದೃಢಪಡಿಸಿದೆ.
ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಮಾಡಲಾದ ಒಟ್ಟು 'ರೆನಾಲ್ಟ್ ಡಸ್ಟರ್' ಕಾರಿನ ಆರ್ಡರ್‌ಗಳಲ್ಲಿ ಶೇಕಡ 39% ಹೈಬ್ರಿಡ್ ಮಾಡೆಲ್‌ಗಳಾಗಿವೆ. ಈ ವರ್ಷದ ದೀಪಾವಳಿ ವೇಳೆಗೆ, ಇದೇ 'ಹೈಬ್ರಿಡ್' ಎಸ್‌ಯುವಿಗಳ ವಿತರಣೆಯೂ ಶುರುವಾಗಲಿದೆ. 2027ರಲ್ಲಿ ಬುಕ್ಕಿಂಗ್‌ನ್ನು ಮತ್ತೆ ತೆರೆಯಬಹುದು ಎಂದು ಅಂದಾಜಿಸಲಾಗಿದೆ. ಈವರೆಗೂ ಹೈಬ್ರಿಡ್ ಮಾಡೆಲ್‌ಗಳ ಬೆಲೆಯನ್ನು ಘೋಷಣೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಅದು ಬಹಿರಂಗಗೊಳ್ಳುವ ನಿರೀಕ್ಷೆಯಿದೆ.

'ರೆನಾಲ್ಟ್ ಡಸ್ಟರ್' ವಿಶೇಷತೆಗಳೇನು:
ಇದು ಸ್ವಲ್ಪ ಮಟ್ಟಿಗೆ ದುಬಾರಿ ಬೆಲೆಯನ್ನು ಹೊಂದಿದೆ. ರೂ.10.49 ಲಕ್ಷದಿಂದ ರೂ.18.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅಥೆಂಟಿಕ್ (Authentic), ಎವಲ್ಯೂಷನ್ (Evolution), ಟೆಕ್ನೋ (Techno), ಟೆಕ್ನೋ ಪ್ಲಸ್ (Techno Plus) ಮತ್ತು ಐಕಾನಿಕ್ (Iconic) ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ.
ಈ ಎಸ್‌ಯುವಿಯು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲೈಟ್‌ಗಳು ಹಾಗೂ 18-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಜೇಡ್ ಮೌಂಟೇನ್ ಗ್ರೀನ್, ಪರ್ಲ್ ವೈಟ್, ಮೂನ್‌ಲೈಟ್ ಸಿಲ್ವರ್, ಸ್ಟೆಲ್ತ್ ಬ್ಲ್ಯಾಕ್, ರಿವರ್ ಬ್ಲೂ & ಸನ್‌ಸೆಟ್ ರೆಡ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. ಹೆಚ್ಚು ವಿಶಾಲವಾಗಿದ್ದು, 212 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,657 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.
ನೂತನ 'ರೆನಾಲ್ಟ್ ಡಸ್ಟರ್' ಶಕ್ತಿಯುತವಾದ ಮೂರು ಪವರ್‌ಟ್ರೇನ್‌ನ್ನು ಹೊಂದಿದೆ. ಇದರ 1.8-ಲೀ. ಸ್ಟ್ರಾಂಗ್ ಹೈಬ್ರಿಡ್ ಎಂಜಿನ್, 160 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 172 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 1.3-ಲೀ. ಟರ್ಬೊ ಪೆಟ್ರೋಲ್ ಎಂಜಿನ್, 160 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 280 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.
ಇನ್ನೊಂದು 1.0-ಲೀ. ಪೆಟ್ರೋಲ್ ಎಂಜಿನ್, 100 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 160 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಹಾಗೂ 8-ಸ್ಪೀಡ್ ಡಿಹೆಚ್‌ಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 13 ಯಿಂದ 22 ಕಿ.ಮೀ ವರೆಗೆ ಮೈಲೇಜ್ ನೀಡಬಹುದು ಎಂದು ಹೇಳಲಾಗಿದೆ.
ಈ ಕಾರು 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 700 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ. 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಫೋನ್ ಚಾರ್ಜರ್, ಡುಯಲ್-ಜೋನ್ ಕ್ಲೇಮೇಟ್ ಕಂಟ್ರೋಲ್, ಸನ್‌ರೂಫ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಇದು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಲು ಸಹಾಯಕವಾಗಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.


Click it and Unblock the Notifications








