ದಾಖಲೆಯ ಸೇಲ್ಸ್ ಸಾಧಿಸಿದ ಜಾಗ್ವಾರ್ ಲ್ಯಾಂಡ್ ರೋವರ್

By Nagaraja

ಟಾಟಾ ಮೋಟಾರ್ಸ್ ಒಡೆತನದಲ್ಲಿರುವ ಜಾಗ್ವಾರ್ ಲ್ಯಾಂಡ್ ರೋವರ್ ಜಾಗತಿಕವಾಗಿ ದಾಖಲೆಯ ಸೇಲ್ಸ್ ಸಾಧಿಸಿದೆ. ಒಟ್ಟಾರೆಯಾಗಿ ಮಾರ್ಚ್ ತಿಂಗಳಲ್ಲಿ ಶೇಕಡಾ 16 ಹಾಗೂ 2013ರ ಅವಧಿಯ ಮೊದಲ ಮೂರು ತಿಂಗಳಲ್ಲಿ ಶೇಕಡಾ 17ರಷ್ಟು ಪ್ರಗತಿ ಸಾಧಿಸಿದೆ.

ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ಶೇಕಡಾ 28ರಷ್ಟು ಏರಿಕೆ ದಾಖಲಿಸಿದ್ದರೆ ಬ್ರೆಜಿಲ್‌ನ ಅತ್ಯಾಮೋಘ ಶೇಕಡಾ 136ರಷ್ಟು ಪ್ರಗತಿ ಸಾಧಿಸಿದೆ. ಇದು ಜಾಗತಿಕವಾಗಿ ಜಾಗ್ವಾರ್ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ತವರೂರಾದ ಬ್ರಿಟನ್‌‍ನಲ್ಲೂ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಮಾರಾಟ ಏರಿಕೆ ಕಂಡಿದ್ದು, ಅನುಕ್ರಮವಾಗಿ 4,989 ಹಾಗೂ 20,714 ಯುನಿಟ್‌ಗಳನ್ನು ಮಾರಾಟ ಕಂಡಿವೆ. ಅಂತೆಯೇ ಚೀನಾ, ಉತ್ತರ ಅಮೆರಿಕ, ಜರ್ಮನಿ ಹಾಗೂ ರಷ್ಯಾ ರಾಷ್ಟ್ರಗಳಲ್ಲೂ ಧನಾತ್ಮಕ ಸೇಲ್ಸ್ ಮುಂದುವರಿದಿದೆ.

ಒಟ್ಟಾರೆಯಾಗಿ 2013ರಲ್ಲಿ ಮೊದಲ ತ್ರೈಮಾಸಿಕ ಅವಧಿಯಲ್ಲಿ 115,504 ಯುನಿಟ್ ಸೇಲ್ ಆಗಿದ್ದು, ಈ ಪೈಕಿ ಮಾರ್ಚ್ ತಿಂಗಳಲ್ಲಿ 52,772 ಯುನಿಟ್ ಮಾರಾಟವಾಗಿದೆ.

More from DriveSpark

Article Published On: Friday, April 12, 2013, 17:05 [IST]
English summary
Jaguar Land Rover has achieved record monthly and quarterly sales globally, including in India. Overall, monthly sales were up by 16 percent and quarterly sales went up by 17 percent.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+