ಸದ್ಯದಲ್ಲೇ ಟಾಟಾ ನ್ಯಾನೋ ಟ್ಯಾಕ್ಸಿ ರಸ್ತೆಗೆ?

ಸದ್ಯದಲ್ಲೇ ದೇಶದ ಅತಿ ಅಗ್ಗದ ಕಾರು 'ಟಾಟಾ ನ್ಯಾನೋ' ಬಾಡಿಗೆ ಕಾರು (ಟ್ಯಾಕ್ಸಿ) ರೂಪದಲ್ಲಿ ಬಳಕೆಯಾಗಲಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಖಾಸಗಿ ನಿರ್ವಾಹಕರು ಜಮ್ಮು ಮತ್ತು ಕಾಶ್ಮೀರ ಸರಕಾರವನ್ನು ಸಮೀಪಿಸಿದ್ದಾರೆ. ಅಂದರೆ ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಟಾಟಾ ನ್ಯಾನೋ ಟ್ಯಾಕ್ಸಿಯಾಗಿ ಬಳಕೆ ಮಾಡಿದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಜಮ್ಮು ಪಾತ್ರವಾಗಲಿದೆ.

ಬಲ್ಲ ಮೂಲಗಳ ಪ್ರಕಾರ ಈಗಾಗಲೇ ಅನೇಕ ಖಾಸಗಿ ನಿರ್ವಾಹಕರು ಜಮ್ಮು ಮತ್ತು ಕಾಶ್ಮೀರ ಸಾರಿಗೆ ಸಚಿವಾಲಯವನ್ನು ಸಮೀಪಿಸಿದ್ದು, ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅಂದರೆ ಟಾಟಾ ನ್ಯಾನೋ ಟ್ಯಾಕ್ಸಿಯಾಗಿ ಪರಿಗಣಿಸಲ್ಪಟ್ಟರೆ ಆಟೋ ರಿಕ್ಷಾಗಳ ಮೇಲಿನ ನಿಯಮ ಅನ್ವಯವಾಗಲಿದೆ.

ಆಟೋ ರಿಕ್ಷಾಗಳಿಗೆ ಪಡೆಯಲಿರುವ ಸೇವಾ ದರಗಳನ್ನೇ ಟಾಟಾ ನ್ಯಾನೋ ಟ್ಯಾಕ್ಸಿ ಪಡೆಯಲಿದೆ. ನ್ಯಾನೋ ಪ್ರತಿ ಲೀಟರ್‌ಗೆ 25 ಕೀ.ಮೀ ಪ್ರಭಾವಿ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುವುದೇ ಇದರ ಯಶಸ್ಸಿಗೆ ಕಾರಣವಾಗಿದೆ.

ಪ್ರಸ್ತುತ ಖಾಸಗಿ ಚಾಲಕರ ಅರ್ಜಿಯನ್ನು ಪರಿಗಣಿಸಿರುವ ರಾಜ್ಯ ಸರಕಾರವು ವಿವರವಾದ ಪ್ರಸ್ತಾವನೆಯ ಪರಿಗಣನೆಯಲ್ಲಿದೆ. ಈ ಬಗ್ಗೆ ಸಂಚಾರಿ ನಿಯಮಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಜಮ್ಮು ರಾಜ್ಯ ಸಾರಿಗೆ ಕಮಿಷನರ್ ಮಹರಾಜ್ ಕಾಕ್ರೂ ತಿಳಿಸಿದ್ದಾರೆ.

ಅಂದ ಹಾಗೆ ಟಾಟಾ ನ್ಯಾನೋ ಟ್ಯಾಕ್ಸಿಗೆ ಪಾರ್ಕಿಂಗ್ ಸೇರಿದಂತೆ ಜಿಪಿಎಸ್ ಸಿಸ್ಟಂ ಹಾಗೂ ಎಸಿ ಸೌಲಭ್ಯವಿದೆಯೇ ಎಂಬುದನ್ನು ಸರಕಾರ ಖಾತ್ರಿಪಡಿಸುತ್ತಿದೆ. ಹಾಗೆಯೇ ಬಿಳಿ, ಕೆಂಪು ಹಾಗೂ ಕಪ್ಪು ಸೇರಿದಂತೆ ಮೂರು ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.

ಒಟ್ಟಿನಲ್ಲಿ ಸಣ್ಣ ಕಾರು ವಿಭಾಗದಲ್ಲಿ ಅತಿ ಅಗ್ಗದ ಕಾರಾದ ನ್ಯಾನೋ ತನ್ನ ಬ್ರಾಂಡ್ ಇಮೇಜ್ ಹೇಗೆ ವೃದ್ಧಿಸಿಕೊಳ್ಳಲಿದೆ ಎಂಬುದು ಕಾರು ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

More from DriveSpark

Article Published On: Wednesday, January 16, 2013, 16:37 [IST]
English summary
The Tata Nano will soon be a taxi in India if the Jammu and Kashmir state government will agree to the request of some private operators. Jammu and Kashmir will become the first Indian state to make use of the Nano as a taxi once the necessary approvals are available.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+