ಜೀಪ್ ಜೀಪ್‌ಸ್ಟರ್ ಭಾರತ ಆಗಮನ ಸಂಭವ

Written By:

ಕಳೆದ ಕೆಲವು ತಿಂಗಳುಗಳಲ್ಲಿ ಜೀಪ್‌ನಿಂದ ಆಗಮನವಾಗಲಿರುವ ನೂತನ ಕಾಂಪಾಪ್ಟ್ ಎಸ್‌ಯುವಿ ಕಾರು ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿತ್ತು. ಇದೀಗ ಈ ಬಗೆಗಿನ ಹೆಚ್ಚಿನ ಮಾಹಿತಿಗಳು ಹೊರಬಂದಿದ್ದು, ನೂತನ ಜೀಪ್ ಅವತಾರ ಜೀಪ್‌ಸ್ಟರ್ ಎಂದು ಗುರುತಿಸಿಕೊಳ್ಳಲಿದೆ.

ಮುಂಬರುವ ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನ ಕಾಣಲಿರುವ ಜೀಪ್‌ಸ್ಟರ್ ಭಾರತ ಆಗಮನ ಸಂಭವವಿದೆ ಎಂದು ವಾಹನ ಮೂಲಗಳು ತಿಳಿಸಿವೆ.

Jeep

ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಜೀಪ್‌‌ನ ಹೊಸ ಬ್ರಾಂಡ್‌ಗೆ ಜೀಪ್‌ಸ್ಟರ್ ಎಂಬ ಹೆಸರು ನೀಡಲಾಗುತ್ತಿರುವುದು. ಈ ಹಿಂದೆಯೂ 1948, 1950, 1966 ಹಾಗೂ 1999 ಲೆಜೆಂಡರಿ ಆವೃತ್ತಿಗಳಲ್ಲೂ ಇದನ್ನೇ ಬಳಕೆ ಮಾಡಲಾಗಿತ್ತು.

ಇನ್ನೊಂದೆಡೆ ಆಸ್ಟ್ರೇಲಿಯಾ ಡ್ರೈವ್ ವರದಿ ಪ್ರಕಾರ ಎರಡನೇ ಜಾಗತಿಕ ಯುದ್ಧದ ಪರಂಪರೆಯಾಗಿ ಈ ಹೊಸ ಜೀಪ್ ಗುರುತಿಸಿಕೊಳ್ಳಲಿದೆ. ಅಂದ ಹಾಗೆ ಎಂಟ್ರಿ ಲೆವೆಲ್ ಜೀಪ್ ಕಾಂಪಾಕ್ಟ್ ಎಸ್‌ಯುವಿ, ಫ್ರಂಟ್ ಹಾಗೂ ರಿಯರ್ ವೀಲ್ ಡ್ರೈವ್‌ನಿಂದ ಆಗಮವಾಗಲಿದೆ.

ಹಾಗಿದ್ದರೂ ಈ ಕ್ರಾಸೋವರ್ ಕಾರಿನ ಎಂಜಿನ್ ತಾಂತ್ರಿಕತೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ. ಇದು ಫಿಯೆಟ್ 500 ಹಾಗೂ 500ಎಲ್ ಮಾದರಿಗಳಿಗೆ ಸಮಾನವಾಗಿರುವ ಸಾಧ್ಯತೆಯಿದೆ.

English summary
Jeep's upcoming compact SUV that's been due for some time now will be named Jeepster, according to a dealer who has seen the production version of the vehicle
Story first published: Thursday, December 19, 2013, 12:01 [IST]
Please Wait while comments are loading...

Latest Photos