ಎಲೆಕ್ಷನ್ ಡ್ಯೂಟಿ; ವಾರಂತ್ಯದ ಬಸ್ ಪಯಣ ತಪ್ಪಿಸಿ
ಯಾಕೆಂದರೆ ವಾರಂತ್ಯದಲ್ಲಿ ಸೇವೆಯಲ್ಲಿರುವ ಬಹುತೇಕ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಚುನಾವಣಾ ಡ್ಯೂಟಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಸಹಜವಾಗಿಯೇ ನಗರದಲ್ಲಿ ಸಂಚರಿಸುವ ಯಾತ್ರಿಕರಿಗೆ ಸಮಸ್ಯೆ ಸೃಷ್ಟಿಯಾಗಲಿದೆ.
5,400 ಬಸ್ ಬಳಕೆ...
ರಾಜ್ಯ ವಿಧಾನಸಭಾ ಚುನಾವಣೆಗೆ 5,400 ಕೆಎಸ್‌ಆರ್‌ಟಿಸಿ ಬಸ್‌ಗಳ ಬಳಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಕೆಎಸ್‌ಆರ್‌ಟಿಸಿಯ 3200, ಬಿಎಂಟಿಸಿ 1500, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಸಂಸ್ಥೆಯ ತಲಾ 500 ಬಸ್‌ಗಳನ್ನು ಚುನಾವಣಾ ಆಯೋಗ ಪಡೆದುಕೊಂಡಿದೆ.
ಇದರ ಜತೆ ಚುನಾವಣೆ ವೇಳೆ ಕರ್ತವ್ಯ ನಿರತರಾಗಿರುವ ಪೊಲೀಸ್ ಸಿಬ್ಬಂದಿಗಳಿಗೂ ಸಾರಿಗೆ ಸಂಸ್ಥೆಯ ಬಸ್‌ಗಳು ಬಳಕೆಯಾಗಲಿದೆ. ಈ ಹಿನ್ನಲೆಯಲ್ಲಿ ದೈನಂದಿನ ಪ್ರಯಾಣದಲ್ಲಿ ವ್ಯತ್ಯಯ ಸಂಭವಿಸಲಿದೆ ಎಂದು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ತಿಳಿಸಿದೆ.
ಶನಿವಾರ ಅಂದರೆ ಚುನಾವಣೆಗಿಂತ ಒಂದು ದಿನ ಮೊದಲು ಮತಯಂತ್ರ ಹಾಗೂ ಚುನಾವಣಾ ಸಿಬ್ಬಂದಿಗಳನ್ನು ಕರ್ತ್ಯವ್ಯ ನಿರತ ವೋಟ್ ಬೂತ್‌ಗಳಿಗೆ ಕರೆದೊಯ್ಯುವ ಬಸ್‌ಗಳು ಭಾನುವಾರ ಸಂಜೆ 5.00ಕ್ಕೆ ಮತ ಮುಗಿದ ಬಳಿಕ ಚುನಾವಣಾ ಸಿಬ್ಬಂದಿ ಹಾಗೂ ಮತ ಯಂತ್ರಗಳನ್ನು ಎಣಿಕೆ ಕೇಂದ್ರಗಳಿಗೆ ತಲುಪಿಸಿ ಆಯಾ ಡಿಪೋಗಳಿಗೆ ಪಾಸಾಗಲಿದೆ.
ಈ ಸಂಬಂಧ ಪ್ರಯಾಣಿಕರು ಸಹಕರಿಸುವಂತೆ ಕೋರಲಾಗಿದೆ. ಹಾಗೆಯೇ ಸೋಮವಾರದಿಂದ ಯಾಥಾರೀತಿ ಸಂಚಾರ ಮರು ಆರಂಭವಾಗಲಿದೆ. ಬಸ್ ಸೇರಿದಂತೆ ಟ್ಯಾಕ್ಸಿಗಳನ್ನು ಚುನಾವಣೆಗಾಗಿ ಬಳಸಲಾಗುತ್ತದೆ. ಆದರೆ ಸಮಯಕ್ಕೆ ಸರಿಯಾಗಿ ಆಹಾರ ನೀಡುತ್ತಿಲ್ಲವೆಂಬ ಕೂಗು ಟ್ಯಾಕ್ಸಿ ಚಾಲಕರಿಂದ ಕೇಳಿಬರುತ್ತಿದೆ.


Click it and Unblock the Notifications









