ಜೆಸಿಬಿ ಇಂದ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ಧ್ವಂಸ ಮಾಡಿದ ದಾವಣಗೆರೆಯ ಪೊಲೀಸರು..

ಸಂಚಾರ ಮಾಡಲು ಕೆಲವರು ವಾಹನ ಖರೀದಿ ಮಾಡಿದರೆ ಇನ್ನು ಕೆಲವರು ಅವುಗಳನ್ನು ಶೋಕಿಗಾಗಿಯೇ ಖರೀದಿಸುತ್ತಾರೆ ಅಂತ ಗೊತ್ತಾಗೋದು ಅವರು ಆ ವಾಹನದ ಭಾಗಗಳನ್ನು ಕಾನೂನು ಬಾಹಿರವಾಗಿ ಮಾಡಿಫೈ ಮಾಡಿಸಿಕೊಂಡಾಗ. ಅವುಗಳಲ್ಲಿ ಮಾಡಿಫೈಡ್ ಸೈಲೆನ್ಸರ್‍‍ಗಳು ಕೂಡಾ ಒಂದು.

ಜೆಸಿಬಿ ಇಂದ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ದ್ವಂಸ ಮಾಡಿದ ದಾವಣಗೆರೆಯ ಪೊಲೀಸರು..

ಇಂತಹ ವಾಹನ ಚಾಲಕರ ಮೇಲೆ ಬೆಂಗಳೂರು ಸೇರಿದಂತೆ ಇನ್ನು ಹಲವಾರು ಪ್ರಮುಖ ನಗರಗಳಲ್ಲಿನ ಪೊಲೀಸರು ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಲಾಗಿದ್ದು, ದಾವಣಗೆರೆಯ ಪೊಲೀಸರು ಸಹ ಇಂತಹ ಕ್ರಮವನ್ನು ತೆಗೆದುಕೊಳ್ಳಲು ಶುರು ಮಾಡಲಾಗಿದೆ. ಹಾಗಾದರೆ ದಾವಣಗೆರೆಯಲ್ಲಿರುವ ಟ್ರಾಫಿಕ್ ಪೊಲೀಸರು ತೆಗೆದುಕೊಂಡ ಆ ಕಠಿಣವಾದ ಕ್ರಮ ಏನೆಂಬುದನ್ನು ತಿಳಿಯಲು ಮುಂದಕ್ಕೆ ಓದಿರಿ..

ಜೆಸಿಬಿ ಇಂದ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ದ್ವಂಸ ಮಾಡಿದ ದಾವಣಗೆರೆಯ ಪೊಲೀಸರು..

ಬಹುತೇಕ ವಾಹನ ಸವಾರರು ಇತ್ತೀಚೆಗೆ ಮಾಡಿಫೈ ವಾಹನಗಳ ಮೇಲೆ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಇದು ಸಾರ್ವಜನಿಕವಾಗಿ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿದೆ. ಇದರಿಂದಾಗಿ ಕಾನೂನು ಬಾಹಿರವಾಗಿ ಓಡಾಡುತ್ತಿರುವ ಮಾಡಿಫೈ ವಾಹನ ವಿರುದ್ಧ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ.

ಜೆಸಿಬಿ ಇಂದ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ದ್ವಂಸ ಮಾಡಿದ ದಾವಣಗೆರೆಯ ಪೊಲೀಸರು..

ಸಂಚಾರಿ ನಿಯಮಗಳನ್ನ ಉಲ್ಲಂಘಿಸುವವರ ವಿರುದ್ಧ ದೇಶದ ಪ್ರಮುಖ ರಾಜ್ಯಗಳಲ್ಲಿ ಟ್ರಾಫಿಕ್ ಪೊಲೀಸರು ಈಗಾಗಲೇ ಸಾವಿರಾರು ಪ್ರಕರಣಗಳನ್ನು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದರೂ ಕಾನೂನು ಬಾಹಿರವಾಗಿ ಮಾಡಿಫೈ ಮಾಡುವವರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ಹೀಗಾಗಿ ನಿಯಮ ಉಲ್ಲಂಘಿಸಿ ಬೈಕ್ ಎಕ್ಸಾಸ್ಟ್ ಮಾಡಿಫೈ ಮಾಡಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಟ್ರಾಫಿಕ್ ಪೊಲೀಸರು ಮಾಡಿಫೈ ಪ್ರಿಯರಿಗೆ ಶಾಕ್ ನೀಡುತ್ತಿದ್ದಾರೆ.

ಜೆಸಿಬಿ ಇಂದ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ದ್ವಂಸ ಮಾಡಿದ ದಾವಣಗೆರೆಯ ಪೊಲೀಸರು..

ನಮಗೆಲ್ಲಾ ಗೊತ್ತಿರುವ ಹಾಗೆ ಈ ಹಿಂದೆ ಹಳ್ಳಿಗಳ ಕಡೆಗೆಲ್ಲಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಬಂದರೆ ಸಾಕು 1 ಕಿ.ಮಿ ದೂರವಿರುವಾಗಲೇ ಬೈಕ್ ಬರುತ್ತಿದೆ ಎಂಬುದು ಗೊತ್ತಾಗುತ್ತಿತ್ತು. ಆದ್ರೆ ಕಾಲ ಬದಲಾದಂತೆ ಬೈಕ್‌ಗಳ ಶಬ್ದ ಮಾಲಿನ್ಯಕ್ಕೆ ಬ್ರೇಕ್ ಹಾಕಲಾಗುತ್ತಿದ್ದು, ಎಕ್ಸಾಸ್ಟ್ ವೈಶಿಷ್ಟ್ಯತೆಗಳಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ.

ಜೆಸಿಬಿ ಇಂದ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ದ್ವಂಸ ಮಾಡಿದ ದಾವಣಗೆರೆಯ ಪೊಲೀಸರು..

ಆದ್ರೆ ನಗರ ಪ್ರದೇಶಗಳಲ್ಲಿನ ಯುವ ಬೈಕ್ ಸವಾರರು ಬೈಕ್ ಮಾಡಿಫೈಗೆ ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೈಕ್ ಮೂಲವನ್ನೇ ಬದಲಿಸುವುದು ಸಾಕಷ್ಟು ಟ್ರೆಂಡ್ ಆಗುತ್ತಿದೆ.

ಜೆಸಿಬಿ ಇಂದ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ದ್ವಂಸ ಮಾಡಿದ ದಾವಣಗೆರೆಯ ಪೊಲೀಸರು..

ಇದರಿಂದ ಬೈಕ್ ಸವಾರನಿಗೆ ಅನುಕೂಲಕತೆಗಳಿದ್ದರು ಅದು ಸಾರ್ವಜನಿಕ ಜೀವನದಲ್ಲಿ ಹೆಚ್ಚೆಚ್ಚು ಸಮಸ್ಯೆಗಳನ್ನು ಉದ್ಭವವಾಗುವಂತೆ ಮಾಡುತ್ತಿದೆ. ಜೊತೆಗೆ ಬೈಕ್‌ಗಳ ಎಕ್ಸಾಸ್ಟ್ ಬದಲಾವಣೆಯಿಂದಾಗಿ ಹೆಚ್ಚಿನ ಶಬ್ದ ಮಾಲಿನ್ಯಕ್ಕೆ ಎಡೆಮಾಡುಕೊಡುತ್ತಿದ್ದು, ಮಾಲಿನ್ಯ ಪ್ರಮಾಣವು ಹೆಚ್ಚಾಗುವುದಕ್ಕೂ ಮಾಡಿಫೈ ಎಕ್ಸಾಸ್ಟ್ ಪ್ರಮುಖ ಕಾರಣವಾಗಿದೆ.

ಜೆಸಿಬಿ ಇಂದ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ದ್ವಂಸ ಮಾಡಿದ ದಾವಣಗೆರೆಯ ಪೊಲೀಸರು..

ಹೀಗಾಗಿ ಸಾರ್ವಜನಿಕರು ಮಾಡಿಫೈ ಬೈಕ್ ಸವಾರರ ಜೊತೆ ಹಲವು ಸಂದರ್ಭಗಳಲ್ಲಿ ವಾಗ್ವಾದಕ್ಕೆ ಕಾರಣವಾಗುತ್ತಿದ್ದು, ಮಾಡಿಫೈ ಬೈಕ್ ಸವಾರರ ವಿರುದ್ಧ ಪ್ರಕರಣಗಳನ್ನು ಕೂಡಾ ದಾಖಲಿಸುತ್ತಿದ್ದಾರೆ. ಅದರಲ್ಲೂ ಮೆಟ್ರೋ ನಗರಗಳಲ್ಲಿರುವ ಮಾಡಿಫೈ ಬೈಕ್ ಸವಾರರಿಂದ ಆಗುತ್ತಿರುವ ಕಿರಿಕಿರಿ ಅಷ್ಟಿಲ್ಲ.

ಜೆಸಿಬಿ ಇಂದ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ದ್ವಂಸ ಮಾಡಿದ ದಾವಣಗೆರೆಯ ಪೊಲೀಸರು..

ಸಾರ್ವಜನಿಕರು ನೀಡಿರುವ ದೂರಗಳ ಅನ್ವಯ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿನ ಟ್ರಾಫಿಕ್ ಪೊಲೀಸರು ರಾಯಲ್ ಎನ್‌ಫೀಲ್ಡ್ ಸವಾರರಿಗೆ ಶಾಕ್ ನೀಡುತ್ತಿದ್ದು, ಎಕ್ಸಾಸ್ಟ್ ಬದಲಿಸಿರುವ ಬೈಕ್‌ಗಳ ಸೈಲೆನ್ಸರ್‌ಗಳನ್ನು ಸ್ಪಾಟ್‌ನಲ್ಲೇ ಕಿತ್ತು ಹಾಕಿ ಭಾರೀ ಮೊತ್ತದ ದಂಡವನ್ನು ಕೂಡಾ ವಸೂಲಿ ಮಾಡುತ್ತಿದ್ದಾರೆ.

ಜೆಸಿಬಿ ಇಂದ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ದ್ವಂಸ ಮಾಡಿದ ದಾವಣಗೆರೆಯ ಪೊಲೀಸರು..

ಜೊತೆಗೆ ಪ್ರಮುಖ ರಸ್ತೆಗಳಲ್ಲಿ ತಪಾಸಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಪೊಲೀಸರು ಸ್ಥಳದಲ್ಲೇ ಮಾಡಿಫೈ ಬೈಕ್‌ನ ಎಕ್ಸಾಸ್ಟ್‌ಗಳನ್ನ ಕಿತ್ತುಹಾಕುವುದಲ್ಲದೇ ಬೈಕ್ ಸೀಸ್ ಮಾಡುತ್ತಿದ್ದು, ಪದೇ ಪದೇ ಪೊಲೀಸರ ಕೈಗೆ ಸಿಕ್ಕಿಬಿಳುವ ಬೈಕ್ ಸವಾರರ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುತ್ತಿರುವುದಾಗಿ ನಮ್ಮ ದಾವಣಗೆರೆಯ ಟ್ರಾಫಿಕ್ ಹೇಳಿಕೊಂಡಿದ್ದಾರೆ.

ಇಂತದ್ದರಲ್ಲಿ ಮೊದಲಿಗೆ ದಾವಣಗೆರೆಯಲ್ಲಿ ಕರ್ಕಷ ಶಬ್ದವನ್ನುಂಟು ಮಾದುವ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ಬಳಸುತ್ತಿರುವ ರಾಯಲ್ ಎನ್‍‍ಫೀಲ್ಡ್ ಸೇರಿದಂತೆ ಇನ್ನು ಹಲವಾರು ವಾಹನಗಳ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿ ಅವುಗಳನ್ನು ಜೆಸಿಬಿ ಇಂದ ಧ್ವಂಸ ಮಾಡಲಾಗಿದೆ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ..

ಜೆಸಿಬಿ ಇಂದ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ದ್ವಂಸ ಮಾಡಿದ ದಾವಣಗೆರೆಯ ಪೊಲೀಸರು..

ಹೀಗೆ ಮಾಡಲಾದ ಕಾರಣವೇನೆಂದರೆ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ಬಳಸಿ ಸಿಕ್ಕಿಕೊಂಡ ವಾಹನ ಮಾಲೀಕರನ್ನು ತಡೆದು, ಅವರಿಗೆ ಎಚ್ಚರಿಕೆಯನ್ನು ನೀಡಿ, ಮತ್ತು ಅವರ ಹತ್ತಿರ ದಂಡವನ್ನು ವಸೂಲಿ ಮಾಡಿದರೂ ಸಹ ಇವುಗಳ ಮಾಡಿಫೈಡ್ ಸೈಲೆನ್ಸರ್‍‍ಗಳ ಆರ್ಭಟವು ಕಡಿಮೆಯಾಗಲಿಲ್ಲ ಆದುದರಿಂದ ದಾವಣಗೆರೆಯಲ್ಲಿನ ಪೊಲೀಸರು ಇಂತಹ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂಬ ವರದಿ ಸಿಕ್ಕಿದೆ.

Source: Nizam Bilal Davangere Bilal Davangere

Most Read Articles

Kannada
English summary
Traffic Police Destroy Aftermarket Exhausts With JCB In Davanagere. Read In Kannada
Story first published: Saturday, June 8, 2019, 15:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X