ರೈತಾಪಿ ಜನರಿಗೆ ಖುಷಿ ತರುವ ಲಂಬೋ ಟ್ರಾಕ್ಟರ್ ಭಾರತಕ್ಕೆ?
ನಮಗೆಲ್ಲರಿಗೂ ತಿಳಿದಿದ್ದಂತೆಯೇ ಸೂಪರ್ ಕಾರು ತಯಾರಕರಾದ ಲಂಬೋರ್ಗಿನಿ ಶಕ್ತಿಶಾಲಿ ಟ್ರಾಕ್ಟರ್ ಉತ್ಪಾದಿಸುವುದರಲ್ಲಿ ನಿಸ್ಸೀಮವಾಗಿದೆ. ಅಷ್ಟೇ ಯಾಕೆ ಲಂಬೋರ್ಗಿನಿ ಕಂಪನಿ ಆರಂಭಿಕ ಕಾಲಘಟ್ಟದಲ್ಲಿ ಟ್ರಾಕ್ಟರ್ ಉತ್ಪಾದಿಸುವುದರಲ್ಲಿ ಪ್ರಸಿದ್ಧಿ ಪಡೆದಿತ್ತು.
ಅಂದ ಹಾಗೆ ಇದೀಗ ಲಂಬೋರ್ಗಿನಿ ಟ್ರಾಕ್ಟರ್ ವಿಷಯ ಮತ್ತೆ ಎತ್ತಿ ಹಿಡಿಯಲು ಕಾರಣವೊಂದಿದೆ. ಇಟಲಿಯ ಈ ಸೂಪರ್ ಕಾರು ತಯಾರಕರಿಂದ ಮುಂದಿನ ವರ್ಷ ಅಂದರೆ 2014ರಲ್ಲಿ ಭಾರತಕ್ಕೆ ನೂತನ ಟ್ರಾಕ್ಟರ್‌ವೊಂದು ಪರಿಚಯವಾಗಲಿದೆ.
ಪ್ರಮುಖವಾಗಿಯೂ ಫೆರಾರಿ ಟ್ರಾಕ್ಟರ್‌ಗಳಿಗೆ ಪ್ರತಿಸ್ಪರ್ಧಿಯಾಗಿ ದೇಶದಲ್ಲಿ ಕಾಣಿಸಿಕೊಳ್ಳಲಿದೆ. ಅತ್ಯಾಧುನಿಕ ಸೌಲಭ್ಯಗಳುಳ್ಳ ಈ ಟ್ರಾಕ್ಟರ್ ದೇಶದ ಶ್ರೀಮಂತ ರೈತರನ್ನು ಗುರಿಯಿಸಿಕೊಂಡಿದೆ.
ಲಂಬೋರ್ಗಿನಿ ಇತಿಹಾಸದತ್ತ ಹದ್ದು ನೋಟ

SAME Deutz-Fahr India (P) Ltd ಸಂಸ್ಥೆಯು ಲಂಬೋರ್ಗಿನಿ ಟ್ರಾಕ್ಟರ್‌ಗಳನ್ನು ಭಾರತಕ್ಕೆ ಪರಿಚಯಿಸುವ ಇರಾದೆ ಹೊಂದಿದೆ. ಮುಂದಿನ ವರ್ಷ ಆಗಮನವಾಗುವ ನಿರೀಕ್ಷೆಯಿದೆ.

ಲಂಬೋರ್ಗಿನಿ ಟ್ರಾಕ್ಟರ್‌ಗಳತ್ತ ಕಣ್ಣಾಯಿಸಿದರೆ ಕೆಲವು ತಿಂಗಳ ಹಿಂದೆಯಷ್ಟೇ 2013 ನೈಟ್ರೊ ಟ್ರ್ಯಾಕ್ಟರ್ ಬಿಡುಗಡೆಗೊಂಡಿತ್ತು. ಇಟಲಿಯ ಜನಪ್ರಿಯ ವಿನ್ಯಾಸಕಾರ Giorgetto Giugiaro ಎಂಬವರನ್ನು ಇದನ್ನು ವಿನ್ಯಾಸಗೊಳಿಸಿದ್ದರು.

ಸ್ಟ್ರೈಲಿಷ್ ಎಕ್ಸ್‌ಟೀರಿಯರ್ ಫೀಚರ್ಸ್ ಜತೆಗೆ ಮುಂಭಾಗದಲ್ಲಿ ಎಲ್‌ಇಡಿ ಲೈಟಿಂಗ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಎಲ್‌ಇಡಿ ಲೈಟ್ಸ್ ಪ್ರಮುಖ ಆಕರ್ಷಣೆಯಾಗಿತ್ತು. ಇನ್ನು ಡಿಸ್ಕ್ ಬ್ರೇಕ್ ಸೌಲಭ್ಯ ಕೂಡಾ ಲಭ್ಯವಿದೆ.

ಹಾಗಿದ್ದರೂ ಟ್ರಾಕ್ಟರ್ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ನೈಟ್ರೊದಲ್ಲಿ ಫೋರ್ ಸಿಲಿಂಡರ್ Deutz ಟೈರ್ 4ಐ ಎಂಜಿನ್ ಆಳವಡಿಸಲಾಗಿತ್ತು. ಹಾಗೆಯೇ ಫೈವ್ ಗೇರ್ ಸಿಸ್ಟಂ ಅಥವಾ ತ್ರಿ ಸ್ಪೀಡ್ ಪವರ್ ಶಿಫ್ಟ್ ಗೇರ್ ಬಾಕ್ಸ್ ಹೊಂದಿದೆ.

ಒಟ್ಟಿನಲ್ಲಿ ದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಇರಾದೆಯನ್ನು ಕಂಪನಿ ಹೊಂದಿದೆ. (ತಾಜಾ ಸುದ್ದಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ)

ಲಂಬೋರ್ಗಿನಿ ಟ್ರಾಕ್ಟರ್

ಲಂಬೋರ್ಗಿನಿ ಟ್ರಾಕ್ಟರ್

ಲಂಬೋರ್ಗಿನಿ ಟ್ರಾಕ್ಟರ್



Click it and Unblock the Notifications








