ಚಪ್ಪಟೆ ಸುಂದರಿ ಲಂಬೋರ್ಗಿನಿ ಫುಲ್ ಬಾಡಿ ಸ್ಕ್ಯಾನಿಂಗ್

By Nagaraja

ಜಾಗತಿಕ ಮಟ್ಟದಲ್ಲಿ ಹಲವು ಕಾರಣಗಳಿಂದಾಗಿ ಇಟಲಿಯ ಸೂಪರ್ ಲಗ್ಷುರಿ ಸ್ಪೋರ್ಟ್ಸ್ ಕಾರು ಆಗಿರುವ ಲಂಬೋರ್ಗಿನಿ ತನ್ನದೇ ಆದ ವೈಶಿಷ್ಟ್ಯವನ್ನು ಕಾಪಾಡಿಕೊಂಡು ಬಂದಿವೆ.

ನೋಡಲು ಚಪ್ಪಟೆ ಆಕಾರದಲ್ಲಿರುವ ಈ ಸುಂದರಿ ಇತರೆಲ್ಲ ಸೂಪರ್ ಕಾರುಗಳ್ನು ಮೀರಿಸಿವೆ. ಲಂಬೋರ್ಗಿನಿ ಪೂರ್ಣ ರೂಪವಾದ ಆಟೋಮೊಬೈಲ್ ಫೆರುಸ್ಸಿಯೊ ಲಂಬೋರ್ಗಿನಿಯನ್ನು (Automobili Ferruccio Lamborghini ) 1963ನೇ ಇಸವಿಯಲ್ಲಿ ಫೆರುಸ್ಸಿಯೊ ಲಂಬೋರ್ಗಿನಿ ಎಂಬವರು ಸ್ಥಾಪಿಸಿದ್ದರು.

ಫೆರಾರಿಯಂತಹ ನೆಲೆಯೂರಿದ ಕಾರು ಬ್ರಾಂಡ್‌ಗಳಿಗೆ ಪ್ರತಿಸ್ಪರ್ಧಿಯಾಗಿ ತಲೆಯೆತ್ತಿದ್ದ ಲಂಬೋರ್ಗಿನಿ ಗ್ರಾಂಡ್ ಟೂರಿಂಗ್ ಕಾರುಗಳನ್ನು ಉತ್ಪಾದಿಸುವುದರಲ್ಲಿ ಗಮನ ಕೇಂದ್ರಿತವಾಗಿದ್ದವು.

1960ರ ದಶಕದ ಮಧ್ಯಂತರ ಅವಧಿಯಲ್ಲಿ ಕಂಪನಿಯ ಮೊದಲ ಮಾಡೆಲ್ ಮಾರುಕಟ್ಟೆಗಿಳಿದಿತ್ತು. ಆದರೆ 1973ರ ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ತೈಲ ಅಭಾವವು ಲಂಬೋರ್ಗಿನಿಗೆ ಬಲವಾದ ಪೆಟ್ಟು ನೀಡಿತ್ತು.

ಇದು 1990ರ ದಶಕದಲ್ಲೂ ಮುಂದುವರಿದ್ದರಿಂದ ಎಚ್ಚೆತ್ತುಕೊಳ್ಳಲಾಗದ ಲಂಬೋರ್ಗಿನಿಯನ್ನು 1998ರಲ್ಲಿ ಫೋಕ್ಸ್‌ವ್ಯಾಗನ್ ಅಂಗಸಂಸ್ಥೆಯಾಗಿರುವ ಆಡಿ ಎಜಿಗೆ ಮಾರಾಟ ಮಾಡಲಾಗಿತ್ತು.

ಆದರೆ 21ನೇ ಶತಮಾನದಲ್ಲಿ ತಿರುಗಿಬಿದ್ದಿರುವ ಲಂಬೋರ್ಗಿನಿ ಮಾರಾಟದಲ್ಲಿ ಭರ್ಜರಿ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. 2007 ಹಾಗೂ 2008ರ ಸಾಲಿನಲ್ಲಿ ದಾಖಲೆಯ ಮಾರಾಟ ದಾಖಲಿಸಿತ್ತು. ಪ್ರಸ್ತುತ ಲಂಬೋರ್ಗಿನಿ ವಿ10 ಎಂಜಿನ್ ನಿಯಂತ್ರಿತ ಗಲರ್ಡೊ ಹಾಗೂ ವಿ12 ನಿಯಂತ್ರಿತ ಅವೆಂಟಡೊರ್ ಉತ್ಪಾದನೆಯಲ್ಲಿ ಗಮನ ಕೇಂದ್ರಿತವಾಗಿದೆ.

Lamborghini's Interesting Facts

ಸ್ಥಾಪಕ ಫೆರುಸ್ಸಿಯೊ ಲಂಬೋರ್ಗಿನಿ ಹೆಸರಲ್ಲೇ ಲಂಬೋರ್ಗಿನಿ ಅರಿಯಲ್ಪಡುತ್ತದೆ. 1963ನೇ ಇಸವಿಯಲ್ಲಿ ಪ್ರಸ್ತುತ ಕಂಪನಿಯನ್ನು ಆರಂಭಿಸಲಾಗಿತ್ತು.

Murcielago R-GT

Murcielago R-GT

ಲಂರ್ಬೋರ್ಗಿನಿಯ ಅತಿ ವೇಗದ ಕಾರು Murcielago R-GT ಆಗಿದೆ. ಇದು ಪ್ರತಿ ಗಂಟೆಗೆ ಗರಿಷ್ಠ 370 ಕೀ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

Lamborghini's Interesting Facts

ಲಂಬೋರ್ಗಿನಿ ಆರಂಭವಾದ ಪ್ರಾರಂಭಿಕ ಘಟ್ಟದಲ್ಲಿ ಟ್ರಾಕ್ಟರ್ ಉತ್ಪಾದಿಸುವುದರಲ್ಲಿ ಹೆಚ್ಚು ಗಮನ ಕೇಂದ್ರಿತವಾಗಿದ್ದವು. ಆ ಬಳಿಕ ಸೂಪರ್ ಕಾರು ಉತ್ಪಾದನೆ ಪ್ರಾರಂಭಿಸಿತ್ತು.

lamborghini Reventon

lamborghini Reventon

ಲಂಬೋರ್ಗಿನಿಯ ಅತಿ ದುಬಾರಿ ಕಾರು Reventon ಆಗಿದ್ದು, ಇದನ್ನು 1,600,000 ಅಮೆರಿಕನ್ ಡಾಲರ್‌ಗಳಿಗೆ ಮಾರಾಟ ಮಾಡಲಾಗಿತ್ತು.

Lamborghini's Interesting Facts

ಲಂಬೋರ್ಗಿನಿ ಬಹುತೇಕ ಕಾರುಗಳು ಚಪ್ಪಟೆ ಆಕಾರದಲ್ಲಿದ್ದು, ಹೆಚ್ಚು ಆಕರ್ಷಕ ಡಿಸೈನ್ ಹಾಗೂ ನಿರ್ವಹಣೆ ಹೊಂದಿದೆ.

Lamborghini 350GTV

Lamborghini 350GTV

ಮೊದಲ ಲಂಬೋರ್ಗಿನಿ ಕಾರು 1963ನೇ ಇಸವಿಯಲ್ಲಿ ಬಿಡುಗಡೆಗೊಂಡಿರುವ 350GTV ಆಗಿದೆ.

Lamborghini's Interesting Facts

1998ನೇ ಇಸವಿಯ ತನಕ ಸ್ವತಂತ್ರ ಕಂಪನಿ ಎನಿಸಿಕೊಂಡಿದ್ದ ಲಂಬೋರ್ಗಿನಿಯನ್ನು ಆ ಬಳಿಕ ಫೋಕ್ಯ್‌ವ್ಯಾನ್ ಎಜಿ ಹಾಗೂ ಅಂಗಸಂಸ್ಥೆ ಆಡಿ ಖರೀದಿಸಿತ್ತು.

Lamborghini's Interesting Facts

ಗಲರ್ಡೊ ಹೊರತುಪಡಿಸಿ ಬಹುತೇಕ ಲಂಬೋರ್ಗಿನಿ ಕಾರುಗಳು ವಿ12 ಎಂಜಿನ್ ಹೊಂದಿದೆ. ಗಲರ್ಡೊ ವಿ10 ಎಂಜಿನ್ ಹೊಂದಿದೆ.

Lamborghini's Interesting Facts

ಆರಂಭದಲ್ಲಿ ಲಂಬೋರ್ಗಿನಿ ಮಾಲಿಕ ಫೆರಾರಿ ಕಾರುಗಳನ್ನು ಹೊಂದಿದ್ದರು. ಆದರೆ ಕ್ಲಚ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ತಮ್ಮದೇ ಕಂಪನಿಯಲ್ಲಿ ಟ್ರಾಕ್ಟರ್ ಬದಲು ಕಾರುಗಳನ್ನು ಉತ್ಪಾದಿಸಲು ಆರಂಭಿಸಿದ್ದರು. ಇದು ಲಂಬೋರ್ಗಿನಿ ಅವಿಷ್ಕಾರಕ್ಕೆ ಕಾರಣವಾಗಿತ್ತು.

Lamborghini's Interesting Facts

2007ನೇ ಇಸವಿಯಲ್ಲಿ ಲಂಬೋರ್ಗಿನಿಯಿಂದ 2,580 ಕಾರುಗಳು ಮಾರಾಟವಾಗಿದ್ದವು. ಇದು ಲಂಬೋರ್ಗಿನಿಯಿಂದ ಒಂದು ನಿರ್ದಿಷ್ಟ ವರ್ಷದಲ್ಲಿ ಮಾರಾಟವಾದ ದಾಖಲೆ ಸಂಖ್ಯೆಯ ಕಾರುಗಳಾಗಿವೆ.

ಲಂಬೋರ್ಗಿನಿ ಪ್ರಮುಖ ಮಾಡೆಲ್‌ಗಳು

ಲಂಬೋರ್ಗಿನಿ ಪ್ರಮುಖ ಮಾಡೆಲ್‌ಗಳು

ಅವೆಂಟಡೊರ್ ಎಲ್‌ಪಿ 700-4

ಲಂಬೋರ್ಗಿನಿ ಅವೆಂಟಡೊರ್ ಎಲ್‌ಪಿ

700-4 ರೋಡ್‌ಸ್ಟರ್

ಅವೆಂಟಡೊರ್ ಜೆ

ಗಲರ್ಡೊ ಎಲ್‌ಪಿ 560-4

ಗಲರ್ಡೊ ಎಲ್‌ಪಿ 550-2

ಗಲರ್ಡೊ ಎಲ್‌ಪಿ 570-4

ಸೆಸ್ಟೊ ಎಲೆಮೆಂಟೊ

Lamborghini's Interesting Facts

1963ರಿಂದ ಆರಂಭವಾಗಿ ಇದುವರೆಗೆ ಲಂಬೋರ್ಗಿನಿ ಅನೇಕ ಕಾನ್ಸಪ್ಟ್ ವಾಹನಗಳನ್ನು ಪ್ರದರ್ಶಿಸಿವೆ. ಇವುಗಳಲ್ಲಿ ಪ್ರಾರಂಭಿಕ 350ಜಿಟಿವಿ ಕೂಡಾ ಸೇರಿವೆ.

Lamborghini's Interesting Facts

1967ರ ಮಾರ್ಜಲ್, 1974ರ ಬ್ರಾವೋ, 1980ರ ಅಥಾನ್, 1987ರ ಪ್ರೊಟೋಫೈನೊ, 1995ರ ಕಾಲಾ 1996ರ ರಾಪ್ಟರ್ ಹಾಗೂ ಲಂಬೋರ್ಗಿನಿ ಪ್ರೆಗುಂಟ ಇತರ ಪ್ರಸಿದ್ಧ ಕಾನ್ಸೆಪ್ಟ್ ಮಾಡೆಲ್ ಆಗಿವೆ.

Lamborghini's Interesting Facts

ಇದರ ಜತೆ 2008ರ ಪ್ಯಾರಿಸ್ ಮೋಟಾರ್ ಶೋದಲ್ಲಿ ಫೋರ್ ಡೋರ್ ಸೆಡಾನ್ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿತ್ತು. ಹಾಗೆಯೇ 2010 ಪ್ಯಾರಿಸ್ ಮೋಟಾರ್ ಶೋದಲ್ಲಿ ಸೆಸ್ಟೊ ಎಲೆಮೆಂಟೊ ಪ್ರದರ್ಶನಗೊಳಿಸಿತ್ತು.

Lamborghini's Interesting Facts

2012ರ ಜಿನೆವಾ ಮೋಟಾರ್ ಶೋದಲ್ಲಿ ಅವೆಂಟಡೊರ್ ಜೆ-ಎ ರೂಫ್‌ಲೆಸ್, ವಿಂಡೋಲೆಸ್ ವರ್ಷನ್ ಅನಾವರಣಗೊಳಿಸಿತ್ತು.

Lamborghini's Interesting Facts

ಹಾಗೆಯೇ 2012ರ ಬೀಂಜಿಗ್ ಮೋಟಾರ್ ಶೋದಲ್ಲಿ ಉರುಸ್ ಎಸ್‌ಯುವಿ ಕಾನ್ಸೆಪ್ಟ್ ಪ್ರದರ್ಶಿಸಿತ್ತು. ಇದು LM002 ಬಳಿಕ ಲಂಬೊರ್ಗಿನಿಯಿಂದ ಅನಾವರಣಗೊಂಡ ಮೊದಲ ಎಸ್‌ಯುವಿ ಆಗಿತ್ತು.

Lamborghini 1965-66

Lamborghini 1965-66

Murcielago ಬದಲಿ ಕಾರಾದ ಅವೆಂಟಡೊರ್ 2011ರ ಜಿನೆವಾ ಮೋಟಾರ್ ಶೋದಲ್ಲಿ ಲಾಂಚ್ ಆಗಿತ್ತು. ಇದು ಪ್ರತಿ ಗಂಟೆಗೆ 349 ಕೀ.ಮೀ. ಚಲಿಸುವ ಸಾಮರ್ಥ್ಯ ಹೊಂದಿದೆ.

Lamborghini 1967-72

Lamborghini 1967-72

2011ರ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಲಂಬೋರ್ಗಿನಿ ಗಲರ್ಡೊ ಎಲ್‌ಪಿ 570-4 ಸೂಪರ್ ಟ್ರೊಫಿಯೊ ಸ್ಟ್ರಾಡಲೆ ಅನಾವರಣಗೊಳಿಸಲಾಗಿತ್ತು.

Lamborghini 1972-80

Lamborghini 1972-80

ಹಾಗೆಯೇ 2012ರಲ್ಲಿ ಲಂಬೋರ್ಗಿನಿಯಿಂದ ಸೆಸ್ಟೊ ಎಲೆಮೆಂಟೊ ಅನಾವರಣಗೊಂಡಿತ್ತು. ಪ್ರಸ್ತುತ ಕಾರು ಟ್ರ್ಯಾಕ್ ಬಳಕೆಗೆ ಸೀಮಿತವಾಗಿದೆ.

Lamborghini 1981-87

Lamborghini 1981-87

ಲಂಬೋರ್ಗಿನಿ ಗಲರ್ಡೊ ಅಂತಿಮ ಸೂಪರ್ ಕಾರು ಎಲ್‌ಪಿ 560-4 ಆಗಿದೆ. ಇದರ ಬಳಿಕ ಗಲರ್ಡೊ ಸೂಪರ್ ಕಾರು ಉತ್ಪಾದನೆ ಸ್ಥಗಿತಗೊಳಿಸುವುದಾಗಿ ಲಂಬೋರ್ಗಿನಿ ಘೋಷಿಸಿತ್ತು.

Lamborghini 1987-94

Lamborghini 1987-94

ಪ್ರಸ್ತುತ ಭಾರತದಲ್ಲೂ ಲಂಬೋರ್ಗಿನಿ ಅತಿ ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ. ಯುವರಾಜ್ ಸಿಂಗ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಸುಂದರಿಗೆ ಮಾರು ಹೋಗಿದ್ದಾರೆ. ಮುಂದೊಂದು ದಿನ ಲಂಬೋರ್ಗಿನಿ ತಮ್ಮದಾಗಿಸಿಕೊಳ್ಳುವುದು ಯುವ ಪ್ರತಿಭಾವಂತ ಕ್ರಿಕೆಟಿಗ ಅಜಿಂಕ್ಯಾ ರಹಾನೆ ಕನಸಾಗಿದೆ.

Lamborghini 1994-98

Lamborghini 1994-98

ಒಟ್ಟಿನಲ್ಲಿ ಲಂಬೋರ್ಗಿನಿ ಬಗ್ಗೆ ಇಲ್ಲಿ ಚುಟುಕಾಗಿ ಕೊಡಲಾಗಿರುವ ಕೆಲವೊಂದು ಕುತೂಹಲಕಾರಿ ವಿಚಾರಗಳು ನಿಮ್ಮ ಗಮನ ಸೆಳೆದಿರುವ ವಿಶ್ವಾಸವನ್ನು ಡ್ರೈವ್ ಸ್ಪಾರ್ಕ್ ಹೊಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆ, ವಿಚಾರಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Lamborghini now

Lamborghini now

Lamborghini 1998 onwards...

Most Read Articles

Kannada
English summary
Iconic Italian car manufacturer Lamborghini has an interesting history. Here are some Lamborghini facts that you probably did not know.
Story first published: Thursday, February 21, 2013, 11:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X