ದೇಶದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳ ಬೇಡಿಕೆ ಕುಸಿತ?

By Nagaraja

ಇದು ತುಂಬಾನೇ ಆತಂಕದ ವಿಚಾರವಾಗಿದ್ದು, ದೇಶದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಹ್ಯಾಚ್‌ಬ್ಯಾಕ್ ಕಾರುಗಳ ಬೇಡಿಕೆ ಕುಸಿಯುತ್ತಿದೆ ಎಂದು ವರದಿಗಳು ತಿಳಿಸಿವೆ. ಯುಟಿಲಿಟಿ ವೆಹಿಕಲ್ ಹಾಗೂ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಬೇಡಿಕೆ ಹೆಚ್ಚಾಗಿರುವುದೇ ಇದಕ್ಕೆ ಕಾರಣವಾಗಿದೆ. ಇದರಿಂದ ಹ್ಯಾಚ್‌ಬ್ಯಾಕ್ ಕಾರುಗಳು ಗಣನೀಯ ಕುಸಿತ ದಾಖಲಿಸುತ್ತಿದೆ.

ದೀರ್ಘಾವಧಿಯ ಮಾರುಕಟ್ಟೆ ದೃಷ್ಟಿಕೋನದಲ್ಲಿ ಕಾಂಪಾಕ್ಟ್ ವಾಹನಗಳು ಹೆಚ್ಚಿನ ಯಶಸ್ಸು ಸಾಧಿಸುತ್ತಿವೆ. ಗ್ರಾಹಕರು ಬ್ರಾಂಡ್ ಮೌಲ್ಯ ಸಾರುವ ಕ್ರೀಡಾ ಬಳಕೆಯ ವಾಹನವನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ ಎಂದು ವರದಿಯು ಹೇಳಿದೆ.

ಮಾರುತಿ ಆಲ್ಟೊ, ಜೆನ್ ಎಸ್ಟಿಲೊ, ಟ್ಯಾಟಾ ನ್ಯಾನೋ ಹಾಗೂ ಷೆವರ್ಲೆ ಸ್ಪಾರ್ಕ್ ಮಾರಾಟವು ಹಿನ್ನಡೆಯಲ್ಲಿದೆ. ಈ ನಡುವೆ 2012-13ನೇ ಸಾಲಿನಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಾದ ಮಾರುತಿ ಸ್ವಿಫ್ಟ್, ಎಂಟ್ರಿ ಲೆವೆಲ್ ಮಾರುತಿ ಸ್ವಿಫ್ಟ್ ಡಿಜೈರ್, ಎಸ್‌ಯುವಿ ಮಹೀಂದ್ರ ಬೊಲೆರೊ, ಎಂಯುವಿ ಟೊಯೊಟಾ ಇನ್ನೋವಾ ಹಾಗೂ ಹ್ಯುಂಡೈ ಐ20 ಉತ್ತಮ ಮಾರಾಟ ಕಾಯ್ದುಕೊಂಡಿದೆ.

ದೇಶದ ಗ್ರಾಹಕರು ನೇರವಾಗಿ ದೊಡ್ಡ ಕಾರುಗಳತ್ತ ವಾಲುತ್ತಿದ್ದಾರೆ. ಆದರೆ ಅಮೆರಿಕದಲ್ಲಿರುವಂತೆಯೇ ದುಬಾರಿ ಕಾರುಗಳನ್ನು ಆಶ್ರಯಿಸಿಕೊಂಡಿಲ್ಲ. ಹಾಗಿದ್ದರೂ ಕ್ರಮೇಣ ಸಣ್ಣ ಕಾರುಗಳ ಬೇಡಿಕೆ ಕುಸಿತ ಕಂಡುಬರುತ್ತಿದೆ ಎಂದು ವರದಿಯು ತಿಳಿಸಿದೆ.

More from DriveSpark

Article Published On: Tuesday, April 23, 2013, 14:51 [IST]
English summary
Most buyers in India now prefer to buy utility vehicles as compared to compact hatchbacks. One of the reasons for this could be that disposable incomes have become higher. More and more buyers want vehicles that give high value for money, along with being status symbols, for which big Sport Utility Vehicles (SUVs) are perfect.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+