ಟಿಯಾಗೋ ಎಕ್ಸ್‌ಟಿ ವೇರಿಯೆಂಟ್‍ಗೆ ಗುಡ್‍ಬೈ ಹೇಳಿದ ಟಾಟಾ ಮೋಟಾರ್ಸ್

ಸಧ್ಯ ದೇಶಿಯ ಮಾರುಕಟ್ಟೆಯಲ್ಲಿ ಅತ್ಯುನ್ನತ ಸೇಫ್ಟೀ ಫೀಚರ್‍‍ಗಳೊಂದಿಗೆ ತಮ್ಮ ವಾಹನದ ಗುಣಮಟ್ಟದ ಬಗ್ಗೆ ಸದ್ದು ಮಾಡುತ್ತಿರುವ ಟಾಟಾ ಮೋಟಾರ್ಸ್, ಈ ವರ್ಷ ಮುಗಿಯುವುದರೊಳಗೆ 4 ರಿಂಡ 5 ಹೊಸ ವಾಹನಗಳನ್ನು ಬಿಡುಗಡೆ ಮಾಡಲಿದೆ. ಹೀಗಿರುವಾಗ ಟಾಟಾ ಮೋಟಾರ್ಸ್ ತಮ್ಮ್ ಲೈನ್‍-ಅಪ್‍ನಲ್ಲಿರುವ ಕೆಲ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲು ಸಹ ತೀರ್ಮಾನ ಮಾಡಲಾಗಿದೆ.

ಟಿಯಾಗೋ ಎಕ್ಸ್‌ಟಿ ವೇರಿಯೆಂಟ್‍ಗೆ ಗುಡ್‍ಬೈ ಹೆಳಿದ ಟಾಟಾ ಮೋಟಾರ್ಸ್

ಟೀಂ ಬಿಹೆಚ್‍ಪಿ ವರದಿ ಪ್ರಕಾರ ಟಾಟಾ ಮೋಟಾರ್ಸ್ ಇಂದು ತಮ್ಮ ಜನಪ್ರಿಯ ಟಿಯಾಗೋ ಕಾರಿನ ಎಕ್ಸ್‌ಟಿ ವೇರಿಯೆಂಟ್‍‍ನ ಮಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಟಾಟಾ ಟಿಯಾಗೋ ಕಾರು ಇದೀಗ ಎಕ್ಸ್ಇ, ಎಕ್ಸ್ಎಂ, ಎಕ್ಸ್ ಝೆಡ್, ಎಕ್ಸ್ ಝೆಡ್‍ಒ ಮತ್ತು ಎಕ್ಸ್ ಝೆಡ್+ ಎಂಬ ಐದು ವೇರಿಯೆಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದೆ. ಟಾಟಾ ಟಿಯಾಗೋ ಎಕ್ಸ್‌ಟಿ ವೇರಿಯೆಂಟ್ ಎಕ್ಸ್ಎಂ ಮತ್ತು ಎಕ್ಸ್ ಜೆಡ್ ವೇರಿಯೆಂಟ್ ನಡುವಿನಲ್ಲಿ ಸ್ಥಾನವನ್ನು ಪಡೆದಿತ್ತು ಹಾಗು ಹಲವಾರು ಫೀಚರ್‍‍ಗಳನ್ನು ಹೊಂದಿತ್ತು.

ಟಿಯಾಗೊ ಎಕ್ಸ್‌ಟಿ ವೇರಿಯೆಂಟ್‍ಗೆ ಗುಡ್‍ಬೈ ಹೆಳಿದ ಟಾಟಾ ಮೋಟಾರ್ಸ್

ಟಾಟಾ ಟಿಯಾಗೋ ಎಕ್ಸ್‌ಟಿ ವೇರಿಯೆಂಟ್ ಕಾರು ಫುಲ್ ವ್ಹೀಲ್ ಕ್ಯಾಪ್ಸ್ ನೊಂದಿಗೆ ಸ್ಟೀಲ್ ವ್ಹೀಲ್ಸ್, ಎಲೆಕ್ಟ್ರಾನಿಕ್ ಒಆರ್‍‍ವಿಎಂ, ಹರ್ಮಾನ್ ಇನ್ಫೋಟೈನ್ಮೆಂಟ್ ಸಿಸ್ಟಂ ಜೊತೆಗೆ 4 ಸ್ಪೀಕರ್‍‍ಗಳು, ಬ್ಲೂಟೂಥ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕೀಲೆಸ್ ಎಂಟ್ರಿ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಇದು ಪಡೆದುಕೊಂಡಿತ್ತು.

ಟಿಯಾಗೊ ಎಕ್ಸ್‌ಟಿ ವೇರಿಯೆಂಟ್‍ಗೆ ಗುಡ್‍ಬೈ ಹೆಳಿದ ಟಾಟಾ ಮೋಟಾರ್ಸ್

ಸೇಫ್ಟೀ ಫೀಚರ್ಸ್

ಟಾಟಾ ಟಿಯಾಗೋ ಕಾರಿನ ಎಲ್ಲಾ ವೇರಿಯೆಂಟ್‍‍ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್ ನೊಂದಿಗೆ ಇಬಿಡಿ, ಕಾರ್ನೆರಿಂಗ್ ಸ್ಟೆಬಿಲಿಟಿ ಕಂಟ್ರೋಲ್ಮ್ ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್, ಪ್ಯಾಸೆಂಜರ್ ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಸ್ಪೀಡ್ ಅಲರ್ಟ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಟಿಯಾಗೊ ಎಕ್ಸ್‌ಟಿ ವೇರಿಯೆಂಟ್‍ಗೆ ಗುಡ್‍ಬೈ ಹೆಳಿದ ಟಾಟಾ ಮೋಟಾರ್ಸ್

ಟಾಟಾ ಟಿಯಾಗೋ ಕಾರಿನ ಬೇಸ್ ವೇರಿಯೆಂಟ್ ಆದ ಎಕ್ಸ್ಇ ಮಾದರಿಯಲ್ಲಿ ಹಬ್ ಕ್ಯಾಪ್ಸ್ ಜೋತಿಗಿನ 13 ಇಂಚಿನ ವ್ಹೀಲ್ಸ್, ಏರ್ ಕಂಡೀಷನಿಂಗ್, ದೈಹಿಕವಾಗಿ ಕರಿನ ಒಳಗಿನಿಂದ ಅಡ್ಜಸ್ಟ್ ಮಾಡಬಹುದಾದ ಒಆರ್‍‍ವಿಎಂ, ಡ್ಯುಯಲ್ ಟೋನ್ ಇಂಟೀರಿಯರ್ ಮತ್ತು 2.5 ಇಂಚಿನ ಮಲ್ಟಿ ಇನ್ಫಾರ್ಮೇಷನ್ ಡಿಸ್ಪ್ಲೇ ಅನ್ನು ನೀಡಲಾಗಿದೆ.

ಟಿಯಾಗೊ ಎಕ್ಸ್‌ಟಿ ವೇರಿಯೆಂಟ್‍ಗೆ ಗುಡ್‍ಬೈ ಹೆಳಿದ ಟಾಟಾ ಮೋಟಾರ್ಸ್

ಇನ್ನು ಈ ಕಾರಿನ ಎಕ್ಸ್ ಎಂ ವೇರಿಯೆಂಟ್‍ನ್ಲ್ಲಿ 13 ಇಂಚಿನ ಹಾಲ್ಫ್ ವ್ಹೀಲ್ ಕ್ಯಾಪ್ಸ್ ಜೊತೆಗಿನ ವ್ಹೀಲ್ಸ್, ಮಾನುವಲ್ ಸೆಂಟ್ರಲ್ ಲಾಕಿಂಗ್, ಪವರ್ ವಿಂಡೋಸ್, ಸ್ಪೀಡ್ ಡಿಪೆಂಡಿಂಗ್ ಆಟೋ ಡೋರ್ ಲಾಕ್ ಅನ್ನು ನೀಡಲಾಗಿದೆ. ಹಾಗೆಯೆ ಎಕ್ಸ್ ಜೆಡ್ ವೇರಿಯೆಂಟ್‍ನಲ್ಲಿ 14 ಇಂಚಿನ ಡ್ಯುಯಲ್ ಟೋನ್ ವ್ಹೀಲ್ ಕ್ಯಾಪ್ ಆಧಾರಿತ ಸ್ಟೀಲ್ ವ್ಹೀಲ್ಸ್, ಎಲೆಕ್ಟ್ರಿಕ್ ಸಾಹಾಯದಿಂದ ಅಡ್ಜಸ್ಟ್ ಮಾಡಬಹುದಾದ ಒಆರ್‍‍ವಿಎಂ, ಹರ್ಮಾನ್ ಇನ್ಫೋಟೈನ್ಮೆಂಟ್ ಸಿಸ್ಟಂ ಜೊತೆಗೆ 4 ಸ್ಪೀಕರ್, ಮಲ್ಟಿ ಫಂಕ್ಷನಿಂಗ್ ಸ್ಟೀರಿಂಗ್ ವ್ಹೀಲ್ ಜೊತೆಗೆ ಬ್ಲೂಟೂತ್ ಫೀಚರ್‍‍ಗಳಿವೆ.

ಟಿಯಾಗೊ ಎಕ್ಸ್‌ಟಿ ವೇರಿಯೆಂಟ್‍ಗೆ ಗುಡ್‍ಬೈ ಹೆಳಿದ ಟಾಟಾ ಮೋಟಾರ್ಸ್

ಟಾಟಾ ಟಿಯಾಗೋ ಕಾರಿನ ಎಕ್ಸ್ ಜೆಡ್ಎಂ ಮಾದರಿಯಲ್ಲಿ 14 ಇಂಚಿನ ಡ್ಯುಯೆಲ್ ಕ್ಯಾಪ್ ಆಧಾರಿತ ಸ್ಟೀಲ್ ವ್ಹೀಲ್ಸ್, ಒಆರ್‍‍ವಿಎಂ‍ನೊಂದಿಗೆ ಎಲ್ಇಡಿ ಟರ್ನ್ ಸಿಗ್ನಲ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್, ಡೇ/ನೈಟ್ ಒಆರ್‍‍ವಿಎಂ, ರಿಯರ್ ವೈಪರ್ಮ್ ವಾಷರ್ ಮತ್ತು ಡೀಫಾಗರ್, ಕೂಲ್ಶ್ ಗ್ಲೋವ್ ಬಾಕ್ಸ್ ಮತ್ತು 5 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡಲಾಗಿದೆ.

ಟಿಯಾಗೊ ಎಕ್ಸ್‌ಟಿ ವೇರಿಯೆಂಟ್‍ಗೆ ಗುಡ್‍ಬೈ ಹೆಳಿದ ಟಾಟಾ ಮೋಟಾರ್ಸ್

ಹಾಗೆಯೆ ಈ ಕಾರಿನ ಕೊನೆಯ ಅಂದರೇ ಟಾಪ್ ಎಂಡ್ ವೇರಿಯೆಂಟ್ ಆದ ಎಕ್ಸ್ ಝೆಡ್+ ನಲ್ಲಿ 15 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ಸ್, ಡ್ಯುಯಲ್ ಟೋನ್ ರೂಫ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಹಕರಿಸುವ 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹೈಟ್ ಅಡ್ಜಸ್ಟ್ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್ ಅನ್ನು ನೀಡಲಾಗಿದೆ.

ಟಿಯಾಗೊ ಎಕ್ಸ್‌ಟಿ ವೇರಿಯೆಂಟ್‍ಗೆ ಗುಡ್‍ಬೈ ಹೆಳಿದ ಟಾಟಾ ಮೋಟಾರ್ಸ್

ಎಂಜಿನ್ ಸಾಮರ್ಥ್ಯ

ಟಾಟಾ ಟಿಯಾಗೋ ಕಾರು ಒಟ್ಟು ಎರಡು ಎಂಜಿನ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, 1.2 ಲೀಟರ್ 3 ಸಿಲೆಂಡರ್ ಪೆಟೋಲ್ ಎಂಜಿನ್ 84 ಬಿಹೆಚ್‍ಪಿ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಇನ್ನು 1.05 ಲೀಟರ್ 3 ಸಿಲೆಂಡರ್ ಡೀಸೆಲ್ ಎಂಜಿನ್ 69 ಬಿಹೆಚ್‍ಪಿ ಮತ್ತು 140 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಟಿಯಾಗೊ ಎಕ್ಸ್‌ಟಿ ವೇರಿಯೆಂಟ್‍ಗೆ ಗುಡ್‍ಬೈ ಹೆಳಿದ ಟಾಟಾ ಮೋಟಾರ್ಸ್

ಟಾಟಾ ಟಿಯಾಗೋ ಕಾರಿನ ಈ ಎಂಜಿನ್‍ಗಳನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 5 ಸ್ಪೀಡ್ ಮ್ಯಾನುವಲ್ ಎಂಜಿನ್‍ನೊಂದಿಗೆ ಜೋಡಿಸಲಾಗಿದ್ದು, ಈ ಕಾರಿನ ಎಕ್ಸ್ ಜೆಡ್ಎ ಮತ್ತು ಎಕ್ಸ್ ಜೆಡ್ಎ+ ವೇರಿಯೆಂಟ್ ಕಾರುಗಳಲ್ಲಿ ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಅನ್ನು ಪಡೆಯಬಹುದಾಗಿದೆ.

Most Read Articles

Kannada
English summary
Tata Tiago XT Variant Discontinued - Now Available In Five Variants. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X