ಪ್ರಾಬ್ಲಂ ಪ್ರಾಬ್ಲಂ; 25,000 ಮಹೀಂದ್ರ ಎಕ್ಸ್‌ಯುವಿ ವಾಪಾಸ್

ದೇಶದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಆಗಿರುವ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಎಕ್ಸ್‌ಯುವಿ500 ತೊಂದರೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ 25,000 ಕಾರುಗಳನ್ನು ವಾಪಾಸ್ ಪಡೆಯಲು ನಿರ್ಧರಿಸಲಾಗಿದೆ.

ಇದು ದೇಶದ ಎಕ್ಸ್‌ಯುವಿ500 ಮಾರಾಟಕ್ಕೆ ಬಲವಾದ ಹೊಡೆತ ನೀಡುವ ಸಾಧ್ಯತೆಯಿದೆ. 2011ರಿಂದ 2012ರ ಅವಧಿಯಲ್ಲಿ ಉತ್ಪಾದನೆಗೊಂಡಿರುವ ವಾಹನಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.


ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಮಹೀಂದ್ರ, ತೊಂದರೆ ಕಾಣಿಸಿಕೊಂಡಿರುವ ಭಾಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರ್ದಿಷ್ಟ ಕಾರುಗಳನ್ನು ಹಿಂಪಡೆಯಲಾಗುತ್ತಿದ್ದು, ಬದಲಿ ವ್ಯವಸ್ಥೆಯ ಖರ್ಚನ್ನು ಉಚಿತವಾಗಿ ಮಾಡಿಕೊಡಲಾಗುವುದು ಎಂದಿದೆ.

ಫ್ಯೂಯಡ್ ಹೋಸ್, ಫ್ರಂಟ್ ಪವರ್ ವಿಂಡೋ ಹಾಗೂ ಲೆಫ್ಟ್ ವೈಪರ್ ಬ್ಲೇಡ್ ಕವರ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಎಲ್ಲ ತೊಂದರೆಗಳಿಗೆ ತ್ವರಿತ ಗತಿಯಲ್ಲಿ ಪರಿಹಾರ ಒದಗಿಸಿಕೊಡಲಾಗುವುದು ಎಂದಿದೆ.

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಫೋರ್ಡ್ ಇಂಡಿಯಾವು 1.2 ಲಕ್ಷ ಫಿಗೊ ಯುನಿಟ್‌ಗಳನ್ನು ಹಿಂಪಡೆದುಕೊಂಡಿತ್ತು. ಆ ಬಳಿಕ 2012 ವರ್ಷಾಂತ್ಯದಲ್ಲಿ ಟೊಯೊಟಾ 8,700ರಷ್ಟು ಕ್ಯಾಮ್ರಿ ಹಾಗೂ ಕರೊಲ್ಲ ಆಲ್ಟಿಸ್ ಯುನಿಟ್‌ಗಳನ್ನು ವಾಪಾಸ್ ಪಡೆದುಕೊಂಡಿತ್ತು.

Most Read Articles

Kannada
English summary
XUV500, one of the top-selling SUVs of the country, is being recalled for replacement of faulty parts on a select batch of vehicles produced between 2011 and 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X