ಮಹೀಂದ್ರ ಎಲೆಕ್ಟ್ರಿಕ್ ಕಾರು ಆಯ್ತು; ಇನ್ನು ಎಲೆಕ್ಟ್ರಿಕ್ ಸ್ಕೂಟರ್

By Nagaraja

ಈಗಾಗಲೇ ವಿದ್ಯುತ್ ಚಾಲಿತ ಕಾರು ಬಿಡುಗಡೆ ಮಾಡಿರುವ ಹುಮ್ಮಸ್ಸಿನಲ್ಲಿರುವ ದೇಶದ ಮೊದಲ ಎಲೆಕ್ಟ್ರಿಕ್ ಕಾರು ಉತ್ಪಾದಕ ಸಂಸ್ಥೆಯಾದ ಮಹೀಂದ್ರ ರೇವಾ, ಸದ್ಯದಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಸೆಡಾನ್ ಕಾರುಗಳನ್ನು ಪರಿಚಯಿಸುವ ಇರಾದೆಯಲ್ಲಿದೆ.

ಎಲೆಕ್ಟ್ರಿಕ್ ಕಾರಿಗೆ ಹೋಲಿಸಿದಾಗ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಅಷ್ಟೇ ಯಾಕೆ ಇಡೀ ದೇಶದ ಪೈಕಿ ನಮ್ಮ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಳಕೆಯಾಗುತ್ತಿದೆ.

ದೇಶಕ್ಕೆ ಮೊದಲ ವಿದ್ಯುತ್ ಚಾಲಿತ ಕಾರುಗಳನ್ನು ಪರಿಚಯ ಮಾಡಿಕೊಟ್ಟಿರುವ ಮಹೀಂದ್ರ ಸಂಸ್ಥೆ ಯಾವುದೇ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ಪಾದಿಸುವುದಿಲ್ಲ ಅಂದರೆ ವಿಪರ್ಯಾಸವೇ ಸರಿ. ಆದರೆ ಸದ್ಯದಲ್ಲೇ ಪರಿಸ್ಥಿತಿ ಬದಲಾಗಲಿದ್ದು, ವಿದ್ಯುತ್ ಚಾಲಿತ ಸ್ಕೂಟರ್‌ಗಳನ್ನು ಪರಿಚಯಿಸುವುದಾಗಿ ತಿಳಿಸಿದೆ.

ನವದೆಹಲಿಯಲ್ಲಿ ನಡೆದ 'ಮಹೀಂದ್ರ ರೇವಾ ಇ2ಒ' ಬಿಡುಗಡೆ ಸಂದರ್ಭದಲ್ಲಿ ಕಂಪನಿಯು ಇದನ್ನು ಸ್ಪಷ್ಟಪಡಿಸಿದೆ. ಹಾಗಿದ್ದರೂ ಯಾವಾಗ ಬಿಡುಗಡೆಯಾಗಲಿದೆ ಎಂಬುದಕ್ಕೆ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ್ದು, ಗೌಪ್ಯವಾಗಿರಿಸಿಕೊಂಡಿದೆ.

ಇನ್ನು ಮುಂದಕ್ಕೆ ಮಾತನಾಡಿದ ಆನಂದ್ ಮಹೀಂದ್ರ, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ನಾಲ್ಕು ಡೋರ್‌ಗಳ ಇ2ಒ ಕಾರನ್ನು ಲಾಂಚ್ ಮಾಡುವ ಇರಾದೆಯಿದೆ ಎಂದಿದ್ದಾರೆ.

More from DriveSpark

Article Published On: Tuesday, March 19, 2013, 14:36 [IST]
English summary
Mahindra, a pioneer of electric cars in India, does not offer an electric two wheeler. But this will soon change, something which was informally confirmed by Anand Mahindra during the launch event of Mahindra Reva e20 electric car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+